ಕರ್ನಾಟಕ

karnataka

ETV Bharat / state

ನೂತನ ಸಚಿವರ ಖಾತೆ ಹಂಚಿಕೆಗೆ ಮುಹೂರ್ತ ಫಿಕ್ಸ್! - ನೂತನ ಸಚಿವರಿಗೆ ಖಾತೆ ಹಂಚಿಕೆ

ರಾಜ್ಯದ ನೂತನ ಸಚಿವರಿಗೆ ಇಂದು ಮಧ್ಯಾಹ್ನ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂದು ಸಿಎಂ ಬಿಎಸ್​ವೈ ಹೇಳಿದ್ದಾರೆ.

ಬಿ.ಎಸ್.ಯಡಿಯೂರಪ್ಪ

By

Published : Aug 24, 2019, 2:00 AM IST

ಬೆಂಗಳೂರು: ಇಂದು ಮಧ್ಯಾಹ್ನದ ಒಳಗೆ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ್ದ ಸಿಎಂ ಯಡಿಯೂರಪ್ಪ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ನೂತನ ಸಚಿವರಿಗೆ ಖಾತೆ ಹಂಚಿಕೆ ಕುರಿತು ಒಂದು ಗಂಟೆ ಚರ್ಚೆ ನಡೆಸಿದ್ದೇನೆ. ಶನಿವಾರ ಮಧ್ಯಾಹ್ನ ನೂತನ ಸಚಿವರಿಗೆ ಖಾತೆ ಹಂಚಿಕೆ ಆಗಲಿದೆ ಎಂದರು.

ನವದೆಹಲಿಯಲ್ಲಿ ಅನರ್ಹ ಶಾಸಕರ ಭೇಟಿ ಕುರಿತು ಪ್ರತಿಕ್ರಿಯೆಗೆ ‌ನಿರಾಕರಿಸಿದ ಬಿಎಸ್​ವೈ, ಅನರ್ಹ ಶಾಸಕರ ಭೇಟಿ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳುತ್ತಿದ್ದಂತೆ ಏನು ಮಾತನಾಡದೆ ಹೊರಟು ಹೋದರು.

ಮಂಗಳವಾರ 17 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಗೊಂದಲಗಳಿಂದಾಗಿ ಇನ್ನೂ ಖಾತೆ ಹಂಚಿಕೆ ಮಾಡಿರಲಿಲ್ಲ.

ABOUT THE AUTHOR

...view details