ಬೆಂಗಳೂರು: ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ-2020, ನಿಯಮ ಹಾಗೂ ಉಪನಿಯಮದಡಿ ನಗರದಲ್ಲಿ ಮಾರ್ಷಲ್ಗಳಿಗೆ ವಿಶೇಷ ಅಧಿಕಾರ ನೀಡಲಾಗಿದೆ.
ಕಾನೂನು ಉಲ್ಲಂಘಿಸುವವರಿಗೆ ದಂಡ ಹಾಕಲಿದ್ದಾರೆ ಬಿಬಿಎಂಪಿ ಮಾರ್ಷಲ್ಸ್
ಬೆಂಗಳೂರಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲವೇ? ಸ್ಯಾನಿಟೈಸರ್ ಬಳಸುತ್ತಿಲ್ಲವೇ? ಮಾಸ್ಕ್ ಧರಿಸಿಲ್ಲವೇ? ಇವುಗಳ ಜೊತೆ ಕಾನೂನು ಉಲ್ಲಂಘಿಸುವವರಿಗೆ ಬಿಬಿಎಂಪಿ ಮಾರ್ಷಲ್ಗಳು ಸ್ಥಳದಲ್ಲೇ ದಂಡ ಹಾಕಲಿದ್ದಾರೆ.
BBMP
ಬಿಬಿಎಂಪಿ ಮಾರ್ಷಲ್ಗಳಿಗೆ ಈ ನಿಯಮವನ್ನು ಜಾರಿಗೊಳಿಸುವ ಅಧಿಕಾರ ನೀಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸಾಮಾಜಿಕ ಅಂತರ ಕಾಪಾಡದಿದ್ದರೆ, ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವ ಅಧಿಕಾರ ಈವರೆಗೆ ಆರೋಗ್ಯಾಧಿಕಾರಿಗಳು, ಜಂಟಿ ಆಯುಕ್ತರು ಮತ್ತು ವಿಶೇಷ ಆಯುಕ್ತರಿಗೆ ಮಾತ್ರ ಇತ್ತು. ಇದೀಗ ಮಾರ್ಷಲ್ಗಳಿಗೂ ಕಾನೂನುಬದ್ಧವಾಗಿ ನಿಯಮ ಜಾರಿಗೊಳಿಸುವ ಅಧಿಕಾರ ನೀಡಲಾಗಿದೆ.