ಕರ್ನಾಟಕ

karnataka

ETV Bharat / state

ನೂತನ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಪ್ರಮಾಣವಚನ ಸ್ವೀಕಾರ - highcourt judge

ನ್ಯಾಯಮೂರ್ತಿ ಸವಣೂರು ವಿಶ್ವಜಿತ್ ಶೆಟ್ಟಿ ಅವರು ಹೈಕೋರ್ಟ್​ನ ನ್ಯಾಯಾಧೀಶರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ರು. ನ್ಯಾಯಮೂರ್ತಿಯಾಗಿ ಎಸ್. ವಿಶ್ವಜಿತ್ ಶೆಟ್ಟಿ ಅವರನ್ನು ನೇಮಕ‌‌ ಮಾಡಿ ಏ. 23 ರಂದು ಕೇಂದ್ರ ಸರ್ಕಾರ ಆದೇಶಿಸಿತ್ತು.

ಹೈಕೋರ್ಟ್
ಹೈಕೋರ್ಟ್

By

Published : Apr 28, 2020, 6:46 PM IST

ಬೆಂಗಳೂರು: ಹೈಕೋರ್ಟ್‌ಗೆ ನೂತನವಾಗಿ ನೇಮಕಗೊಂಡಿರುವ ಹೆಚ್ಚುವರಿ ನ್ಯಾಯಮೂರ್ತಿ ಸವಣೂರು ವಿಶ್ವಜಿತ್ ಶೆಟ್ಟಿ ಅವರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು‌‌.

ಹೈಕೋರ್ಟಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರು ನೂತನ ನ್ಯಾಯಮೂರ್ತಿಗೆ ಪ್ರಮಾಣ ವಚನ ಬೋಧಿಸಿದರು‌.

ಪ್ರಸ್ತುತ ರಾಜ್ಯದಲ್ಲಿ ಲಾಕ್​​ಡೌನ್ ಇರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಹೈಕೋರ್ಟ್​ನ ನ್ಯಾಯಮೂರ್ತಿಗಳಾದ ಬಿ.ವಿ‌. ನಾಗರತ್ನ, ಎಸ್.ಎನ್. ಸತ್ಯನಾರಾಯಣ, ಅರವಿಂದ ಕುಮಾರ್ ಮತ್ತು ಅಲೋಕ್ ಆರಾಧೆ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಮಾಣವಚನ ಕಾರ್ಯಕ್ರಮಕ್ಕೆ ಹಾಜರಾದರು.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕೊಲಿಜಿಯಂ ಮಾಡಿದ ಶಿಫಾರಸು ಆಧರಿಸಿ,‌ ರಾಷ್ಟ್ರಪತಿಗಳ ಆದೇಶಾನುಸಾರ‌ ಕರ್ನಾಟಕ ಹೈಕೋರ್ಟ್​ಗೆ ಹೆಚ್ಚುವರಿ‌ ನ್ಯಾಯಮೂರ್ತಿಯಾಗಿ ಎಸ್. ವಿಶ್ವಜಿತ್ ಶೆಟ್ಟಿ ಅವರನ್ನು ನೇಮಕ‌‌ ಮಾಡಿ ಏ. 23ರಂದು ಕೇಂದ್ರ ಸರ್ಕಾರ ಆದೇಶಿಸಿತ್ತು.

ABOUT THE AUTHOR

...view details