ಕರ್ನಾಟಕ

karnataka

ETV Bharat / state

ದೇಶದಲ್ಲಿ ಪ್ರಥಮವಾಗಿ ಫಾಸ್ಟ್ ಟಿಬಿ ಟೆಸ್ಟ್ ಆವಿಷ್ಕಾರ.. ಲಕ್ಷಾಂತರ ಜನರಿಗೆ ನೆರವು - kannadanews

ಕ್ಷಯರೋಗದಲ್ಲಿ ಡಿಎನ್‌ಎ ಪರೀಕ್ಷೆಯ ಮೂಲಕ ಎಲ್ಲ ಔಷಧಗಳ ಪ್ರತಿರೋಧ ಗುರುತಿಸುವ ಮಹತ್ತರ ಸಾಧನೆಯನ್ನು ಮಾಡಿದೆ.

ದೇಶದಲ್ಲಿ ಪ್ರಥಮವಾಗಿ ಫಾಸ್ಟ್ ಟಿಬಿ ಟೆಸ್ಟ್ ಆವಿಷ್ಕಾರ

By

Published : Aug 9, 2019, 9:35 AM IST

ಬೆಂಗಳೂರು:ಕ್ಲಿನಿಕಲ್ ಡೇಟಾ ಪ್ರೇರಿತ ಜೆನೆಟಿಕ್ ಡಯಾಗ್ನೋಸ್ಟಿಕ್ಸ್ ಮತ್ತು ಔಷಧ ಅನ್ವೇಷಣೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿ ಮೆಡ್ ಜಿನೋಮ್ ಲ್ಯಾಬ್ಸ್ ಸ್ಪಿಟ್ ಎಸ್ಇಕ್ಯೂ ಎಂಬ ಫಾಸ್ಟ್ ಟಿಬಿ ಟೆಸ್ಟ್‌ನ ಆವಿಷ್ಕಾರ ಮಾಡಿದೆ.

ದೇಶದಲ್ಲಿ ಪ್ರಥಮವಾಗಿ ಫಾಸ್ಟ್ ಟಿಬಿ ಟೆಸ್ಟ್ ಆವಿಷ್ಕಾರ..

ಇದು ಸಮಗ್ರ ಜಿನೋಮ್ ಆಧಾರಿತ ಪರೀಕ್ಷೆಯಾಗಿದ್ದು, ಇದು ಯಾವುದೇ ಕ್ಷಯರೋಗದ ಬ್ಯಾಕ್ಟೀರಿಯಾದಲ್ಲಿರುವ ಔಷಧಕ್ಕೆ ಪ್ರತಿರೋಧ ಶಕ್ತಿ ಉಂಟು ಮಾಡುವ ಪ್ರತಿಯೊಂದು ಮ್ಯುಟೇಷನ್ ವಿವರವಾದ ವಿಶ್ಲೇಷಣೆಯನ್ನು ಕಫದಿಂದ ನೇರವಾಗಿ ನೀಡುತ್ತದೆ. ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ.ರವಿಕುಮಾರ್, ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, 2017ರಲ್ಲಿ 2.7 ಮಿಲಿಯನ್ ಕ್ಷಯರೋಗದ ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಭಾರತವು ಜಾಗತಿಕ ಕ್ಷಯರೋಗದ ಮರಣಗಳಲ್ಲಿ ಶೇ. 27ರಷ್ಟು ಹೊಂದಿದೆ ಅಂತಾ ತಿಳಿಸಿದರು.

ಏನಿದು ಸ್ಪಿಟ್ ಎಸ್ಇಕ್ಯೂ ಪರೀಕ್ಷೆ..?

ಸ್ಪಿಟ್ ಎಸ್ಇಕ್ಯೂ ಲಕ್ಷಾಂತರ ಜನರಿಗೆ ನೆರವಾಗುವ ಆವಿಷ್ಕಾರವಾಗಿದ್ದು, ಈ ನಿರ್ದಿಷ್ಟ ಪರೀಕ್ಷೆಯಿಂದ ನಿಖರ ಫಲಿತಾಂಶಗಳನ್ನು ನೀಡಬಹುದಾಗಿದೆ. ಜೊತೆಗೆ ಕ್ಷಯ ರೋಗದ ಚಿಕಿತ್ಸೆಯಲ್ಲಿ ಸಾಕಷ್ಟು ಸಮಯ ಉಳಿಸುತ್ತದೆ. ಕ್ಷಯವನ್ನು ಪರಿಣಾಮಕಾರಿಯಾಗಿ ಹಾಗೂ ವೇಗವಾಗಿ ನಿಯಂತ್ರಿಸುವುದಾಗಿದೆ. ಈ ಪರೀಕ್ಷೆಗಳಲ್ಲಿ ಕಣ್ಣಿನ ಸೋಂಕುಗಳು, ಮೆದುಳು ಹಾಗೂ ರಕ್ತದ ಸೋಂಕುಗಳನ್ನು ಒಳಗೊಂಡಿದೆ. ರಕ್ತ ಪರೀಕ್ಷೆ ಮಾಡುವ ಮೂಲಕ ಸುಲಭವಾಗಿ ಒಂದು ವಾರದೊಳಗೆ ಗುರುತಿಸಬಹುದಾಗಿದೆ. ಹೀಗಾಗಿ ವೈದ್ಯರು ಸುಲಭವಾಗಿ ಮುಂದಿನ ಚಿಕಿತ್ಸೆಯನ್ನು ಮುಂದುವರಿಸಬಹುದಾಗಿದೆ.

ABOUT THE AUTHOR

...view details