ಬೆಂಗಳೂರು: 2017 ರಲ್ಲಿ ದೇಶದಲ್ಲೇ ಮೊದಲು ಕರ್ನಾಟಕ ಸರ್ಕಾರ ವಿದ್ಯುತ್ ಚಾಲಿತ ವಾಹನಗಳ ನೀತಿಯನ್ನ ಪರಿಚಯಿಸಿದ್ದು, ವಿದ್ಯುತ್ ವಾಹನಗಳ ಹಾಗೂ ಪರಿಸರ ಸ್ನೇಹಿ ವಾಹನಗಳ ಉತ್ಪಾದನೆಗೆ ಉತ್ತೇಜನೆಯ ಕನಸು ಹೊತ್ತ ಈ ನೀತಿಗೆ ನೂತನ ಕೈಗಾರಿಕಾ ನೀತಿಯಲ್ಲಿ ಪುಷ್ಟಿಯಿಲ್ಲದಂತೆ ಆಗಿದೆ.
ರಾಜ್ಯ ಸರ್ಕಾರ ಈಗ 2020-25 ಕೈಗಾರಿಕಾ ನೀತಿಯನ್ನು ರೂಪಿಸಿ ಅನುಮೋದನೆ ನೀಡಿದ್ದು ಅದರಲ್ಲಿ 2017ರ ವಿದ್ಯುತ್ ವಾಹನ ನೀತಿಯನ್ನೇ ಅನುಸರಿಸುವುದಾಗಿ ಹೇಳಿದೆ. ಆದರೆ 2017ರ ನೀತಿ 2020 ರಿಂದ 2025 ರ ವರೆಗೆ ಸಮರ್ಪಕವಾಗಿ ಹಾಗೂ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಇರುವುದಿಲ್ಲ ಎಂದು ತಜ್ಞರ ವಾದವಾಗುತ್ತಿದೆ.
ಕರ್ನಾಟಕ ಸರ್ಕಾರ ವಿದ್ಯುತ್ ವಾಹನಗಳ ನೀತಿ ಬೆಂಗಳೂರು ವಿದ್ಯುತ್ ಚಾಲಿತ ವಾಹನಗಳ ಕೇಂದ್ರ ತಾಣವಾಗಿದ್ದು, ಎತರ್ ಎನರ್ಜಿ, ಸನ್ ಮೊಬಿಲಿಟಿ, ಯುಲು, ಮಹಿಂದ್ರ ಎಲೆಕ್ಟ್ರಿಕ್ ಸೇರಿದಂತೆ ಇನ್ನಷ್ಟು ವಿದ್ಯುತ್ ತಯಾರಿಕಾ ಸಂಸ್ಥೆಗಳ ಮನೆಯಾಗಿದೆ. ಬೆಸ್ಕಾಂ ಇತ್ತೀಚಿಗೆ ಹೇಳಿದ ಪ್ರಕಾರ ನಗರದ ವಿವಿಧೆಡೆ ಸರ್ಕಾರಿ ಜಾಗಗಳಲ್ಲಿ ಚಾರ್ಜಿಂಗ್ ಕೇಂದ್ರಗಳಿದ್ದು, ನಗರದಲ್ಲಿ ಕೇವಲ 10,000 ವಿದ್ಯುತ್ ಚಾಲಿತ ವಾಹನಗಳಿವೆ. 26 ಫಾಸ್ಟ್ ಚಾರ್ಜಿಂಗ್ 100 ಸಹಜ ಚಾರ್ಜಿಂಗ್ ಪಾಯಿಂಟ್ಗಳು ಲಭ್ಯವಿವೆ.
ಬೇರೆ ರಾಜ್ಯಗಳಲ್ಲಿ ವಿದ್ಯುತ್ ಚಾಲಿತ ವಾಹನ ಖರೀದಿಗೆ ಇರುವ ಉತ್ತೇಜನಾ ಕ್ರಮಗಳು :
ದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ತಮ್ಮ ಸರ್ಕಾರ ವಿದ್ಯುತ್ ಚಾಲಿತ ದ್ವಿಚಕ್ರ ಆಟೋ ಹಾಗೂ ತ್ರಿಚಕ್ರ ವಾಹನಗಳಿಗೆ 30,000, ಕಾರು ಖರೀದಿಗೆ 1.5 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡುತ್ತದೆ ಎಂದು ಹೇಳಿದ್ದರು.
ಮುಂಬೈ: ವಿದ್ಯುತ್ ಚಾಲಿತ ದ್ವಿಚಕ್ರ, ತ್ರಿಚಕ್ರ ಹಾಗೂ ಕಾರು ಖರೀದಿಗೆ ತಲಾ 5000, 12,000, 1 ಲಕ್ಷ ರೂಪಾಯಿ ಸಬ್ಸಿಡಿಯನ್ನು ಮಹಾರಾಷ್ಟ್ರ ಸರ್ಕಾರ ನೀಡುತ್ತಿದೆ.
ಹೈದರಾಬಾದ್: ಪ್ರೋತ್ಸಾಹ ಧನದ ರೂಪದಲ್ಲಿ ವಿದ್ಯುತ್ ಚಾಲಿತ ಎರಡು ಲಕ್ಷ ದ್ವಿಚಕ್ರ ವಾಹನಗಳಿಗೆ 20,000 ರೂ. ಮತ್ತು ತ್ರಿಚಕ್ರ ವಾಹನ ಹಾಗೂ 5000 ವಾಣಿಜ್ಯ ವಾಹನಗಳಿಗೆ ಶೇ.100 ರಷ್ಟು ರಸ್ತೆ ತೆರಿಗೆ ಹಾಗೂ ನೋಂದಣಿ ಶುಲ್ಕದಲ್ಲಿ ವಿನಾಯಿತಿ
ಅಹಮದಾಬಾದ್: ಒಟ್ಟು 798 ಕೋಟಿ ಸಬ್ಸಿಡಿಯನ್ನು ಘೋಷಣೆ ಮಾಡಿದ್ದು 95,000 ಬೆಲೆಯ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಕ್ಕೆ 37,000 ಸಬ್ಸಿಡಿ. 1.8 ಲಕ್ಷದ ತ್ರಿಚಕ್ರ ವಾಹನಕ್ಕೆ 90,000, 13 ಲಕ್ಷ ಟ್ಯಾಕ್ಸಿ ಗಳಿಗೆ 3 ಲಕ್ಷ ವರೆಗೆ ಸಬ್ಸಿಡಿ. 1.3 ಕೋಟಿ ಬಸ್ ಗಳಿಗೆ 7 ಲಕ್ಷ ಸಬ್ಸಿಡಿ ನೀಡುತ್ತಿದೆ.
ಕರ್ನಾಟಕದಲ್ಲಿರುವ ಏನು ಉತ್ತೇಜನ ಕ್ರಮ: ಸಾರಿಗೆ ಇಲಾಖೆ ಜೊತೆ ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ ಸಹಭಾಗಿತ್ವದಲ್ಲಿ ವಿದ್ಯುತ್ ಚಾಲಿತ ಆಟೋ ಗಳಿಗೆ 1 ಲಕ್ಷ ಹಾಗೂ 50,000 ಎಲ್ಪಿಜಿನಿಂದ ಬ್ಯಾಟರಿ ಪರಿವರ್ತನೆಗೆ ಸಬ್ಸಿಡಿ ನೀಡಲಿದೆ. ಎಲ್ಲಾ ವಿದ್ಯುತ್ ಚಾಲಿತ ವಾಹನಗಳಿಗೆ ರಸ್ತೆ ತೆರಿಗೆ ವಿನಾಯಿತಿ ನೀಡುವ ಜೊತೆಗೆ ಚಾರ್ಜಿಂಗ್ ಕೇಂದ್ರಗಳನ್ನ ಸ್ಥಾಪಿಸುವುದಾಗಿ ಹೇಳಿತ್ತು. ಇದರ ಜೊತೆಗೆ ಎಲ್ಲಾ ರಾಜ್ಯಗಳಂತೆ ಕರ್ನಾಟಕ ಸರ್ಕಾರ ಕೂಡ ಫೇಮ್ (FAME) ಸಬ್ಸಿಡಿ ನೀಡುತ್ತಿದೆ. ಅಂದಾಜು 30,000 ಸಬ್ಸಿಡಿ ದ್ವಿಚಕ್ರ ವಾಹನಗಳಿಗೆ ಕೇಂದ್ರದಿಂದ ಬರುತ್ತಿದೆ ಹೊರತು ರಾಜ್ಯದಿಂದ ಯಾವುದೇ ಪ್ರೋತ್ಸಾಹ ಧನ ಸಿಗುತ್ತಿಲ್ಲ.
ವಿದ್ಯುತ್ ಚಾಲಿತ ವಾಹನಗಳ ನೀತಿ ಇನ್ನು ವಿದ್ಯುತ್ ವಾಹನ ತಯಾರಿಕಾ ಸಂಸ್ಥೆಗಳು ರಾಜ್ಯದ ಹೊಸ ಕೈಗಾರಿಕಾ ನೀತಿಯಲ್ಲಿ EV ಶ್ರೇಣಿಯ ವಾಹನಕ್ಕೆ ಬದಲಾವಣೆ ಬರುತ್ತದೆ ಎಂಬ ಲೆಕ್ಕಾಚಾರ ಸುಳ್ಳಾಗಿದೆ. 2017ರ ವಿದ್ಯುತ್ ವಾಹನ ನೀತಿಯನ್ನು ಅನುಸರಿಸಲಾಗುವುದು ಎಂಬ ನಿರ್ಧಾರದಿಂದ ಹೊಸ ವಿದ್ಯುತ್ ವಾಹನ ಖರೀದಿಯ ಬೆಲೆಯಲ್ಲಿ ಯಾವುದೇ ಪರಿಣಾಮ ಇಲ್ಲದಂತಾಗಿದೆ. ದೇಶದಲ್ಲಿ ಮೊದಲ ವಿದ್ಯುತ್ ವಾಹನ ನೀತಿ 2017 ರೂಪಿಸಿದ್ದ ಖ್ಯಾತಿ ಕರ್ನಾಟಕಕ್ಕೆ ಬಂದಿತ್ತು, ಆದರೆ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಆ ನೀತಿ ಅನುಗುಣ ಆಗುತ್ತಾ ಎಂಬ ಪ್ರಶ್ನೆ ತಜ್ಞರದ್ದು.