ಕರ್ನಾಟಕ

karnataka

ETV Bharat / state

ಆರೋಗ್ಯ ಇಲಾಖೆಯಿಂದ ಹೊಸ ಗೈಡ್ ಲೈನ್: 1912ಕ್ಕೆ ಕರೆ ಮಾಡಿದ್ರೆ ಕೂಡಲೇ ಬೆಡ್​​​ ವ್ಯವಸ್ಥೆ! - 1912 ಕ್ಕೆ ಕರೆ ಮಾಡಿದರೆ ಕೂಡಲೇ ಬೆಡ್​​​ನ ವ್ಯವಸ್ಥೆ

ಆರೋಗ್ಯ ಇಲಾಖೆಯು ಹೊಸ ಗೈಡ್ ಲೈನ್​​ ಪ್ರಕಟಿಸಿದ್ದು, 1912 ಸಂಖ್ಯೆಗೆ ಕರೆ ಮಾಡಿದರೆ ಸಾಕು ಕೂಡಲೇ ಬೆಡ್​​​ನ ವ್ಯವಸ್ಥೆಯಾಗಲಿದೆ.

New Guide Line from the Department of Health
ಆರೋಗ್ಯ ಇಲಾಖೆಯಿಂದ ಹೊಸ ಗೈಡ್ ಲೈನ್

By

Published : Jul 4, 2020, 8:39 PM IST

ಬೆಂಗಳೂರು: ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ಸಾಕಷ್ಟು ದೂರುಗಳು ಬರುತ್ತಿದ್ದು, ಇತ್ತ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಜನ ಸಾವನ್ನಪ್ಪುತ್ತಿರುವ ಘಟನೆಗಳು ನಡೆಯುತ್ತಿವೆ.

ಹೀಗಾಗಿ ಎಚ್ಚೆತ್ತುಕೊಂಡಿರೋ ಸರ್ಕಾರ ಹಾಗೂ ಆರೋಗ್ಯ ಇಲಾಖೆಯು ಹೊಸ ಗೈಡ್ ಲೈನ್ ಪ್ರಕಟಿಸಿದೆ. ಇನ್ಮುಂದೆ ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಅಂತ ಅಲೆದಾಡುವ ಹಾಗೇ ಇಲ್ಲ. 1912 ಸಂಖ್ಯೆಗೆ ಕರೆ ಮಾಡಿದರೆ ಸಾಕು ಬೆಡ್​​​ನ ವ್ಯವಸ್ಥೆಯಾಗಲಿದೆ.

ಆರೋಗ್ಯ ಇಲಾಖೆಯಿಂದ ಹೊಸ ಗೈಡ್ ಲೈನ್

ಅಂದ ಹಾಗೆ ಸಾರಿ, ಐಎಲ್​​ಐ, ಸಿಒಪಿಡಿ ಮತ್ತು ಅಸ್ತಮಾದಿಂದ ಬಳಲುತ್ತಿರುವವರಿಗೂ ಕೂಡಲೇ ಸ್ಪಂದಿಸಲು ಹೊಸ ಪ್ಲಾನ್ ಮಾಡಲಾಗಿದೆ. ಇದಕ್ಕಾಗಿ 1912ಕ್ಕೆ ಕರೆ ಮಾಡಿದರೆ ಕೂಡಲೇ ಬೆಡ್​​​ನ ವ್ಯವಸ್ಥೆಯಾಗಲಿದೆ. 108 ಆ್ಯಂಬುಲೆನ್ಸ್​​​​ಗಳ ಮೂಲಕ ತಕ್ಷಣವೇ ರೋಗಿಗಳನ್ನು ಶಿಫ್ಟ್ ಮಾಡಲಾಗುತ್ತೆ.

ಕೂಡಲೇ ಸ್ವ್ಯಾಬ್ ತೆಗೆದು ರಿಪೋರ್ಟ್ ಕಳುಹಿಸಲಾಗುತ್ತೆ. ರಿಪೋರ್ಟ್​​ನಲ್ಲಿ ಪಾಸಿಟಿವ್ ಬಂದರೆ ಕೊರೊನಾ ಐಸೋಲೇಷನ್ ವಾರ್ಡ್​​​​ಗೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡಲಾಗುತ್ತೆ. ಬಿಬಿಎಂಪಿ, ಬೆಸ್ಕಾಂ, ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ರೋಗಿಗಳಿಗೆ ಸೂಕ್ತ ಚಿಕಿತ್ಸೆಗಾಗಿ ಸಮನ್ವಯದಿಂದ ಕೆಲಸ ಮಾಡಲಿವೆ.

ABOUT THE AUTHOR

...view details