ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರದಿಂದ ಬರೋರಿಗೆ ಕ್ವಾರಂಟೈನ್ ಕಡ್ಡಾಯ: ರಾಜ್ಯ ಸರ್ಕಾರದಿಂದ ಹೊಸ ಗೈಡ್​​​ಲೈನ್ಸ್​​ - ಮಹಾರಾಷ್ಟ್ರದಿಂದ ಬರೋರಿಗೆ ಕ್ವಾರಂಟೈನ್ ಕಡ್ಡಾಯ

ಕರ್ನಾಟಕ ರಾಜ್ಯಕ್ಕೆ ಎಂಟ್ರಿ ಕೊಡುವವರಿಗೆ ಹಾಗೂ ರಾಜ್ಯದಿಂದ ಬೇರೆ ಕಡೆ ಹೋಗಿ ಬರುವವರಿಗೆ ಸರ್ಕಾರ ಹೊಸ ಗೈಡ್​​​ಲೈನ್ಸ್​ ಬಿಡುಗಡೆ ಮಾಡಿದೆ.

New Guide Line from Government
ಸರ್ಕಾರದಿಂದ ಹೊಸ ಗೈಡ್​​​ಲೈನ್

By

Published : Jun 9, 2020, 4:19 PM IST

ಬೆಂಗಳೂರು: ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಇದರ ನಡುವೆ ರಾಜ್ಯಕ್ಕೆ ಎಂಟ್ರಿ ಕೊಡುವವರಿಗೆ ಹಾಗೂ ರಾಜ್ಯದಿಂದ ಬೇರೆ ಕಡೆ ಹೋಗಿ ಬರುವವರಿಗೆ ಸರ್ಕಾರದಿಂದ ಹೊಸ ಗೈಡ್ ಲೈನ್ಸ್​​​​ ನೀಡಿದೆ. ಅದರಲ್ಲೂ ಕರ್ನಾಟಕಕ್ಕೆ ಕಂಟಕವಾಗಿದ್ದ ಮಹಾರಾಷ್ಟ್ರದ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ..

ಇಂತಿವೆ ಹೊಸ ಗೈಡ್​​​ಲೈನ್ಸ್​​...

  • ಸೇವಾ ಸಿಂಧು ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು.
  • ಮೊಬೈಲ್ ನಂಬರ್ ಹಾಗೂ ವಿಳಾಸವನ್ನ ಸರಿಯಾಗಿ ನಮೂದಿಸಿರಬೇಕು.
  • ರಾಜ್ಯಕ್ಕೆ ಎಂಟ್ರಿಕೊಡುವ ಚೆಕ್ ಪೋಸ್ಟ್, ರೈಲ್ವೆ ಸ್ಟೇಷನ್ ಹಾಗೂ ಏರ್​​ಪೋರ್ಟ್ ನಲ್ಲಿ ಸ್ಕ್ರೀನಿಂಗ್ ಕಡ್ಡಾಯ.
  • ಸ್ಕ್ರೀನಿಂಗ್ ವೇಳೆ ಕೊರೊನಾ ಗುಣ ಲಕ್ಷಣಗಳು ಕಂಡು ಬಂದ್ರೆ ಆಸ್ಪತ್ರೆಗೆ ಶಿಫ್ಟ್.
  • ಗುಣಲಕ್ಷಣ ಇಲ್ಲವಾದರೆ ಕೈಗೆ ಸೀಲ್ ಹಾಕಿ, 14 ದಿನಗಳ ಕಾಲ ಹೋಂ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತೆ‌.
  • ಮಹಾರಾಷ್ಟ್ರದಿಂದ ಬರೋರಿಗೆ 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನ ಹೋಂ ಕ್ವಾರಂಟೈನ್ ಕಡ್ಡಾಯ.
  • ಮಹಾರಾಷ್ಟ್ರದಿಂದ ಬಂದ 60 ವರ್ಷ ಮೇಲ್ಪಟ್ಟವರಿಗೆ ಹಾಗೂ ಏಡ್ಸ್, ಕ್ಯಾನ್ಸರ್, ಟಿಬಿ ಹೀಗೆ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ 5 ರಿಂದ 7 ದಿನದ ಮಧ್ಯೆ ಕೊರೊನಾ ಟೆಸ್ಟ್.
  • 10 ವರ್ಷದೊಳಗಿನ ಮಕ್ಕಳು, ಸೋಂಕಿತರು ಸಾವನ್ನಪ್ಪಿದ ಕುಟುಂಬಸ್ಥರು, ಗರ್ಭಿಣಿಯರು ಹಾಗೂ ಐಎಲ್ಐ​​​ ಕೇಸ್​​​ಗಳಿಗೆ ಬಂದ ಕೂಡಲೇ ಟೆಸ್ಟ್.
  • ನೆಗೆಟಿವ್ ಬಂದ್ರೆ 14 ದಿನ ಹೋಂ ಕ್ವಾರಂಟೈನ್, ಪಾಸಿಟಿವ್ ಬಂದ್ರೆ ಆಸ್ಪತ್ರೆಗೆ ಸ್ಥಳಾಂತರ.
  • ವಾಣಿಜ್ಯ ಉದ್ದೇಶಕ್ಕಾಗಿ ಬರುವವರಿಗೆ ಬಂದ ದಿನದಿಂದ ಅವರು ಹೋಗುವ ವೇಳೆಯ ಟಿಕೆಟ್ ಬುಕ್ಕಿಂಗ್ ಡೇಟ್ ಕಡ್ಡಾಯವಿರಬೇಕು.
  • ಒಂದು ವೇಳೆ ಸ್ವಂತ ವಾಹನದಲ್ಲಿ ರಸ್ತೆ ಮೂಲಕ ಬಂದಿದ್ರೆ, ಅವರು ಎಷ್ಟು ದಿನ ಇರಲಿದ್ದೇವೆ, ಎಲ್ಲಿ ಇರಲಿದ್ದೇವೆ ಎಂಬುದ ವಿಳಾಸ ನೀಡಬೇಕು.
  • 2 ದಿನದೊಳಗೆ ಬ್ಯುಸಿನೆಸ್ ಉದ್ದೇಶಕ್ಕಾಗಿ ಬಂದ್ರೆ ಸ್ವ್ಯಾಬ್ ಟೆಸ್ಟ್ ಅವಶ್ಯಕತೆ ಇಲ್ಲ, ಅಂಥಹವರು ಮಾಸ್ಕ್, ಸ್ಯಾನಿಟೈಸರ್ ಉಪಯೋಗಿಸಿ ಮುಂಜಾಗ್ರತೆ ವಹಿಸಬೇಕು.
  • 7 ದಿನ ಉಳಿಯುವವರಿಗೆ ಸ್ವ್ಯಾಬ್ ಟೆಸ್ಟ್ ಕಡ್ಡಾಯ. ಪಾಸಿಟಿವ್ ಬಂದ್ರೆ ಆಸ್ಪತ್ರೆಗೆ ಶಿಫ್ಟ್. ನೆಗೆಟಿವ್ ಬಂದ್ರೆ ಕ್ವಾರಂಟೈನ್ ಅವಶ್ಯಕತೆ ಇಲ್ಲ.
  • ನಮ್ಮ ರಾಜ್ಯದಿಂದ ಬೇರೆಡೆ ಹೋಗಿ 4 ದಿನದೊಳಗೆ ಬರುವವರು ಕ್ವಾರಂಟೈನ್ ಇಲ್ಲ. ಆದ್ರೆ ಆಪ್ತಮಿತ್ರ ಹೆಲ್ಪ್ ಲೈನ್ ನಲ್ಲಿ ಕಡ್ಡಾಯವಾಗಿ ರಿಪೋರ್ಟ್‌ ಮಾಡಬೇಕು.

ಬ್ಯುಸಿನೆಸ್ ಉದ್ದೇಶದವರಿಗೆ ಹ್ಯಾಂಡ್ ಸೀಲ್ ಅವಶ್ಯಕತೆಯಿಲ್ಲ.

ಹೋಂ ಕ್ವಾರಂಟೈನ್​​​ಗೆ ಹೊಸ ಗೈಡ್​​​​ಲೈನ್ಸ್​​

  • ಗ್ರಾಮೀಣ ಭಾಗದಲ್ಲಿ ಅವರ ಮನೆ ಡೋರ್ ಮೇಲೆ ಕ್ವಾರಂಟೈನ್ ಭಿತ್ತಿಪತ್ರ ಅಂಟಿಸಲಾಗುತ್ತೆ.
    ಅಕ್ಕಪಕ್ಕದ ಇಬ್ಬರ ಗಮನಕ್ಕೆ ತಂದಿರಲಾಗುತ್ತೆ.
  • ಗ್ರಾಮ ಪಂಚಾಯಿತಿ ಟಾಸ್ಕ್ ಫೋರ್ಸ್ ಅವರ ಜವಾಬ್ದಾರಿ ಹೊತ್ತಿರುತ್ತಾರೆ. 3 ಸದಸ್ಯರುಳ್ಳ ತಂಡ ಪ್ರತಿ ಹಳ್ಳಿಯ ಮೇಲೆ ನಿಗಾ ಇಟ್ಟಿರುತ್ತದೆ.
  • ಹೋಂ ಕ್ವಾರಂಟೈನ್ ವೇಳೆ ವೇಲೇಶನ್ ಮಾಡಿದ್ರೆ ಎಫ್​​​​ಐಆರ್ ದಾಖಲು ಮಾಡಲಾಗುತ್ತೆ‌. ಪ್ರತಿದಿನ ಥರ್ಮಲ್ ಸ್ಕ್ರೀನ್, ಪಲ್ಸ್ ಆಕ್ಸಿಮೀಟರ್​​ನಿಂದ ಚೆಕ್ ಮಾಡಲಾಗುತ್ತೆ. ಇದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ವಾರಂಟೈನ್ ರೂಲ್ಸ್ ಆಗಿದೆ.
  • ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಹೋಂ ಕ್ವಾರಂಟೈನ್​​​ಗೂ ಇದೇ ಗೈಡ್​​​ಲೈನ್ಸ್​​ ಅನ್ವಯಿಸಲಿದ್ದು, ಸಾರಿ ಆ್ಯಂಡ್ ಐಎಲ್ಐ​​​ ಕೇಸ್​​​ನವರು ಆಪ್ತಮಿತ್ರ ಹೆಲ್ಪ್​​​​ಲೈನ್ 14410 ಗೆ ಕರೆ ಮಾಡಬೇಕು.
  • ಹ್ಯಾಂಡ್ ಸೀಲ್ ಇದ್ದವರು ಕಾಣಿಸಿದರೇ ಸಾರ್ವಜನಿಕರೇ ಪೊಲೀಸ್ ಹೆಲ್ಪ್​​​​ಲೈನ್ 100 ಕರೆ ಮಾಡಿ ದೂರು ನೀಡಬಹುದು.

ABOUT THE AUTHOR

...view details