ಆನೇಕಲ್:2015ರ ನವೆಂಬರ್ನಲ್ಲಿ ಇಸ್ರೇಲ್ನ ಟೆಲ್ ಅವಿವ್ ಏರಿಯಾದ ಅಮಾತ್ಗನ್ ಸಫಾರಿಯಿಂದ ನಾಲ್ಕು ಝೀಬ್ರಾಗಳನ್ನು ಈ ಉದ್ಯಾವನಕ್ಕೆ ತರಿಸಲಾಗಿತ್ತು.ಅದರಲ್ಲಿ ಒಂದು ಜೀಬ್ರಾ ಈಗ ಮರಿ ಹಾಕಿದ್ದು,ಉದ್ಯಾನವನಕ್ಕೆ ಹೊಸ ಕಳೆ ಬಂದಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಯ ಆಗಮನ - undefined
ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಯೊಬ್ಬರ ಆಗಮನದಿಂದ ಉದ್ಯಾನವನಕ್ಕೆ ಜೀವಕಳೆ ಬಂದಿದೆ. ಈ ಉದ್ಯಾನವನದಲ್ಲಿ ಝೀಬ್ರಾ ಮರಿ ಹಾಕಿದೆ.
2015ರ ನವೆಂಬರ್ನಲ್ಲಿ ಇಸ್ರೇಲ್ನ ಟೆಲ್ ಅವಿವ್ ಏರಿಯಾದ ಅಮಾತ್ಗನ್ ಸಫಾರಿಯಿಂದ ನಾಲ್ಕು ಝೀಬ್ರಾಗಳನ್ನು ಈ ಉದ್ಯಾವನಕ್ಕೆ ತರಿಸಲಾಗಿತ್ತು. ಅದರಲ್ಲಿ ಎರಡು ಝೀಬ್ರಾಗಳು ಆಕಸ್ಮಿಕವಾಗಿ ಮೃತಪಟ್ಟಿದ್ದವು. ತದನಂತರದಲ್ಲಿ ಮತ್ತೊಂದು ಮರಿ ಜನಿಸಿರುವುದು ಉದ್ಯಾನವನದಲ್ಲಿನ ಸಂತಸಕ್ಕೆ ಕಾರಣವಾಗಿದೆ. ಈಗ ಜನಿಸಿರುವ ಮರಿ ಝೀಬ್ರಾಕ್ಕೆ ನಾಮಕರಣ ಮಾಡಲಾಗುವುದು ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಹಾಯಕ ನಿರ್ವಹಣಾಧಿಕಾರಿ ಕುಶಾಲಪ್ಪ ತಿಳಿಸಿದ್ದಾರೆ.
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಂಗಸಂಸ್ಥೆ ವತಿಯಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿಯವರು 2016ರಲ್ಲಿ ಉದ್ಘಾಟನೆ ಮಾಡಿದ್ದರು.