ಬೆಂಗಳೂರು:ರಾಜ್ಯದಲ್ಲಿ ರೂಪಾಂತರದ ಕೊರೊನಾ ಭೀತಿ ಹಿನ್ನೆಲೆ ಇದೀಗ ಶಾಲಾ-ಕಾಲೇಜು ಆರಂಭ ಮಾಡಬೇಕೋ ಬೇಡೋ ಎಂಬ ಪ್ರಶ್ನೆ ಉದ್ಭವಿಸಿದೆ.
ಕೊರೊನಾ ರೂಪಾಂತರ ಭೀತಿ : ಶಾಲೆ ಆರಂಭದ ಬಗ್ಗೆ ಸಚಿವರ ಸಭೆ
ರಾಜ್ಯದಲ್ಲಿ ರೂಪಾಂತರದ ಕೊರೊನಾ ಭೀತಿ ಹಿನ್ನೆಲೆ ಶಾಲೆ ಆರಂಭದ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ ಸಭೆ ನಡೆಸಲಿದ್ದಾರೆ.
ಶಾಲೆ ಆರಂಭದ ಬಗ್ಗೆ 11 ಗಂಟೆಗೆ ಸಚಿವರ ಸಭೆ
ಜನವರಿ ಒಂದರಿಂದ 10ನೇ ಹಾಗೂ ದ್ವಿತೀಯ ಪಿಯು ತರಗತಿಗಳು ಆರಂಭವಾಗುವುದಾಗಿ ಶಿಕ್ಷಣ ಇಲಾಖೆ ತಿಳಿಸಿತ್ತು. ಆದರೆ ಇದೀಗ ಕೊರೊನಾ ಎರಡನೇ ತಳಿಯ ಎಫೆಕ್ಟ್ ಯಾವ ರೀತಿಯಲ್ಲಿ ಹರಡಲಿದೆ ಎಂಬುದು ತಿಳಿಯದೇ ಇರುವ ಕಾರಣ ಶಾಲಾ-ಕಾಲೇಜು ಆರಂಭದ ಬಗ್ಗೆ ವಿಕಾಸಸೌಧದಲ್ಲಿ ಸಚಿವ ಸುರೇಶ್ ಕುಮಾರ್ ಸಭೆ ನಡೆಸಲಿದ್ದಾರೆ.
ಜನವರಿ 1 ರಿಂದ ಶಾಲೆ ಪುನಾರಂಭದ ಸಿದ್ಧತೆಗಳನ್ನು ನಿರ್ಣಯಿಸಲು ಎಲ್ಲಾ ಸಿಇಒಗಳು ಮತ್ತು ಜಿಲ್ಲಾಡಳಿತದೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದಾರೆ. ವಿಕಾಸಸೌಧದಲ್ಲಿ ಇಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ.