ಕರ್ನಾಟಕ

karnataka

By

Published : Nov 20, 2020, 10:06 PM IST

ETV Bharat / state

ಬೆಂಗಳೂರು ಕೇಂದ್ರ ವಿವಿ ನೂತನ ಕುಲಪತಿ ಪ್ರೊ. ನರಸಿಂಹಮೂರ್ತಿ ಅಧಿಕಾರ ಸ್ವೀಕಾರ

ಬೆಂಗಳೂರು ಕೇಂದ್ರ ವಿವಿ ನೂತನ ಕುಲಪತಿಯಾಗಿ ಪ್ರೊ. ನರಸಿಂಹಮೂರ್ತಿ ಅಧಿಕಾರ ಸ್ವೀಕರಿಸಿದರು. ವಿಶ್ರಾಂತ ಕುಲಪತಿ ಪ್ರೊ. ಜಾಫೆಟ್​ ಅಧಿಕಾರ ಹಸ್ತಾಂತರಿಸಿದರು.

Bengaluru Central University Chancellor taken Charge
ಬೆಂಗಳೂರು ಕೇಂದ್ರ ವಿವಿ ನೂತನ ಕುಲಪತಿ ಅಧಿಕಾರ ಸ್ವೀಕಾರ

ಬೆಂಗಳೂರು: ಇಲ್ಲಿನ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್. ಜಾಫೆಟ್​ರ ನಾಲ್ಕು ವರ್ಷದ ಅವಧಿ ಇಂದಿಗೆ ಮುಕ್ತಾಯವಾಗಿದ್ದು, ನೂತನ ಕುಲಪತಿ ಪ್ರೊ. ನರಸಿಂಹಮೂರ್ತಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಇದಕ್ಕೂ ಮುನ್ನ ಮಾತಾನಾಡಿದ ಪ್ರೊ. ಜಾಫೆಟ್, ಬೆಂಗಳೂರು ಕೇಂದ್ರ ವಿವಿಯಲ್ಲಿ ಹೊಸ ಹೊಸ ಕೋರ್ಸ್​ಗಳನ್ನ ಪರಿಚಯ ಮಾಡಿದ್ದೇನೆ. ಹಳೇ ಸಂಸ್ಥೆಯಲ್ಲಿ ಕೆಲಸ ಮಾಡುವುದು ಬೇರೆ. ಆದರೆ ಶಿಥಿಲಾವಸ್ಥೆಯಲ್ಲಿದ್ದ ವಿವಿಗೆ ಹೊಸ ರೂಪ ನೀಡುವುದು ದೊಡ್ಡ ಕೆಲಸವಾಗಿತ್ತು. 18 ಪೋಸ್ಟ್ ಇದ್ದ ಜಾಗದಲ್ಲಿ 108 ಪೋಸ್ಟ್ ಸೃಷ್ಟಿಸಿದ್ದೇವೆ. 7 ಕೋರ್ಸ್ ಇದ್ದ ಜಾಗದಲ್ಲಿ 19 ಕೋರ್ಸ್, 25 ವಿಭಾಗ ಮಾಡಿದ್ದೇವೆ. ವಿಶ್ವವಿದ್ಯಾಲಯಕ್ಕೆ ಬುನಾದಿ ಹಾಕಲಾಗಿದ್ದು, ಮುಂಬರುವ ಕುಲಪತಿಗಳು ಇದನ್ನ ಬೆಳೆಸುವ ಕೆಲಸ ಮಾಡಬೇಕು ಎಂದರು.

ಬೆಂಗಳೂರು ಕೇಂದ್ರ ವಿವಿ ನೂತನ ಕುಲಪತಿ ಅಧಿಕಾರ ಸ್ವೀಕಾರ

ಕುಲಪತಿಯಾದವರು ನಿವೃತ್ತಿಗೂ 6 ತಿಂಗಳ ಮುನ್ನ ಹಣಕಾಸಿಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂಬ ನಿಯಮವಿದೆ. ಬೆಂಗಳೂರು ಕೇಂದ್ರ ವಿವಿ ಆವರಣ ಹಾಗೂ ಪ್ರಸನ್ನ ಕುಮಾರ್ ಬ್ಲಾಕ್ ಆವರಣದಲ್ಲಿ 43 ಎಕರೆ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನಗೊಳಿಸಲು ವಿಶ್ರಾಂತ ಕುಲಪತಿ ಪ್ರೊ. ಜಾಫೆಟ್​ ಪತ್ರ ಬರೆದಿದ್ದರು. ಇದಕ್ಕೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಮಾತಾಡಿದ ಅವರು, ಕಾಮಗಾರಿ ಸಂಬಂಧ ಮೊದಲೇ ಪತ್ರ ಬರೆಯಲಾಗಿತ್ತು. ಆದರೆ ಅದಕ್ಕೆ ಸರಿಯಾದ ರೀತಿಯಲ್ಲಿ ಸ್ಪಂದನೆ ಸಿಕ್ಕಿರಲಿಲ್ಲ. ನಾನು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಒಂದು ಪೈಸೆ ಖರ್ಚು ಮಾಡಬೇಕಾದರೂ ಸಿಂಡಿಕೇಟ್​ ಸಭೆಯಲ್ಲಿ ಚರ್ಚೆಸಿ ಅನುಮೋದನೆ ಪಡೆದಿದ್ದೇನೆ. ಬಳಿಕವಷ್ಟೇ ಮುಂದುವರೆದಿದ್ದೇನೆ ಎಂದು ಹೇಳಿದರು.

ಅಧಿಕಾರ ಸ್ವೀಕರಿಸಿ ಮಾತಾನಾಡಿದ ನೂತನ ಕುಲಪತಿ ಪ್ರೊ. ನರಸಿಂಹಮೂರ್ತಿ, ನಮ್ಮ ಮುಂದೆ ಬಹಳ ದೊಡ್ಡ ಸವಾಲಿದೆ. ಈ ವಿವಿ ಆರಂಭವಾದ ದಿನದಿಂದ ಜಾಫೆಟ್ ಅವರು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಶುರು ಮಾಡಿದ್ದಾರೆ. ನಾವುಗಳು ಅದನ್ನು ಮುಂದುವರೆಸಿಕೊಂಡು ಹೋಗಬೇಕಿದೆ. ಸ್ಥಳದ ಅಭಾವ ಇದ್ದು, ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಬೇಕು. ಅವರಿಗೆ ಬೇಕಾದ ಎಲ್ಲಾ ಅನುಕೂಲ ಮಾಡಬೇಕಾಗಿದೆ‌‌. ಎಲ್ಲಾ ಕಡೆ ಪದವಿ, ಸ್ನಾತಕೋತ್ತರ ಪದವಿ ತರಗತಿಗಳು ಆರಂಭವಾಗಿವೆ. ಈ ಬಗ್ಗೆ ನಾವು ಗಮನ ಹರಿಸಬೇಕಾಗಿದ್ದು, ಮಕ್ಕಳ ಸುರಕ್ಷತೆಯ ಬಗ್ಗೆ ಹೆಚ್ಚಿನ‌ ಒತ್ತು ನೀಡಲಾಗುವುದು ಎಂದರು.

ABOUT THE AUTHOR

...view details