ಕರ್ನಾಟಕ

karnataka

ETV Bharat / state

ನೂತನ ಜಾಹೀರಾತು ನೀತಿ: ಮಾ.22ಕ್ಕೆ ಬೈಲಾ ಜಾರಿ ಅಂತಿಮಗೊಳಿಸಲು ಆದೇಶ - Order to finalize Baila bill

ಅನಧಿಕೃತ ಜಾಹೀರಾತು ಹಾವಳಿ ವಿರುದ್ಧ ಸಲ್ಲಿಕೆಯಾಗಿದ್ದ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಹೈಕೋರ್ಟ್​ನಲ್ಲಿ ನಡೆಯಿತು.

ಹೈಕೋರ್ಟ್

By

Published : Mar 16, 2019, 9:26 AM IST

ಬೆಂಗಳೂರು:ಅನಧಿಕೃತ ಜಾಹೀರಾತು ಹಾವಳಿ ವಿರುದ್ಧ ಸಲ್ಲಿಕೆಯಾಗಿದ್ದ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಹೈಕೋರ್ಟ್​ ನಲ್ಲಿ ನಡೆಯಿತು.

ನಗರದಲ್ಲಿಅನಧಿಕೃತ ಜಾಹೀರಾತು ಹಾವಳಿ ವಿರುದ್ಧ ಸಲ್ಲಿಕೆಯಾಗಿದ್ದ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯು ಹಂಗಾಮಿ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹಾಗೂ ನ್ಯಾಯ ಮೂರ್ತಿ ಎಸ್.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಅಡ್ವೊಕೇಟ್ ಜನರಲ್ ಉದಯ್​ ಹೊಳ್ಳ ಅವರು, ರಾಜ್ಯ ಸರ್ಕಾರದ ಪರ ವಾದಿಸಿ ಲೋಕಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಅಲ್ಲದೆ ಎಸ್​ಎಸ್​ಎಲ್​ಸಿ ಪರೀಕ್ಷೆಗಳು ಪ್ರಾರಂಭವಾಗುತ್ತಿರುವುದರಿಂದ ಹೊಸ ಜಾಹೀರಾತು ನೀತಿ ಮತ್ತು ಉಪ ನಿಯಮಗಳನ್ನ ಇನ್ನೂ ಅಂತಿಮಗೊಳಿಸಲಾಗಿಲ್ಲ. ಮಾ.22ರಂದು ಬೈಲಾವನ್ನು ಅಂತಿಮಗೊಳಿಸಿ ನ್ಯಾಯಪೀಠಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ನ್ಯಾಯಪೀಠವು ಪ್ರತಿಕ್ರಿಯಿಸಿ ಹೊಸ ಜಾಹೀರಾತು ಬೈಲಾ ಜಾರಿಗೆ ಸಂಬಂಧಿಸಿದಂತೆ 1 ವರ್ಷ ಕಾಲಾವಕಾಶವನ್ನು ತೆಗೆದುಕೊಂಡಿದ್ದಿರಾ. ಆದರೂ ಇನ್ನು ಬೈಲಾವನ್ನು ನಿಮ್ಮಿಂದ ಪೂರ್ಣಗೊಳಿಸಲಾಗಿಲ್ಲ. ಮಾ.22ರಂದು ಯಾವುದೇ ನೆಪವನ್ನು ಹೇಳದೆ ಬೈಲಾ ಜಾರಿಯನ್ನು ಅಂತಿಮಗೊಳಿಸಿ ನ್ಯಾಯಪೀಠಕ್ಕೆ ಸಲ್ಲಿಸಬೇಕೆಂದು ಅಡ್ವೊಕೇಟ್ ಜನರಲ್‌ಗೆ ಹೈಕೋರ್ಟ್​ ಸೂಚನೆ ನೀಡಿತು.

ABOUT THE AUTHOR

...view details