ಬೆಂಗಳೂರು: ಇಂದು ಮಧ್ಯಾಹ್ನ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 7 ಸಚಿವರ ಹೆಸರಿರುವ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ನಾಗೇಶ್ಗೆ ಕೋಕ್: ಸಚಿವ ನಾಗೇಶ್ಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದೇವೆ. ಈಗ ಸಚಿವ ಸಂಪುಟ ಸಭೆಯಲ್ಲಿ ಮನವೊಲಿಸುತ್ತೇನೆ. ಆ ಸ್ಥಾನ ಖಾಲಿ ಇಡುತ್ತೇವೆ ಎಂದು ತಿಳಿಸಿದರು.
ಸಂಪುಟ ಸೇರಿದ ನೂತನ ಸಚಿವರು: ಎಂಟಿಬಿ ನಾಗರಾಜ್, ಆರ್.ಶಂಕರ್, ಉಮೇಶ್ ಕತ್ತಿ, ಅಂಗಾರ, ಮುರುಗೇಶ್ ನಿರಾಣಿ, ಸಿ.ಪಿ.ಯೋಗೇಶ್ವರ್, ಅರವಿಂದ ಲಿಂಬಾವಳಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಒಂದೂವರೆ ತಿಂಗಳೊಳಗೆ ಮುನಿರತ್ನಗೆ ಸಚಿವ ಸ್ಥಾನ:ಮೂಲಗಳ ಪ್ರಕಾರ ಒಂದೂವರೆ ತಿಂಗಳ ಒಳಗೆ ಮುನಿರತ್ನಗೆ ಸಚಿವ ಸ್ಥಾನ ಕೊಡುವ ಭರವಸೆಯನ್ನು ಸಿಎಂ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕುತೂಹಲ ಮೂಡಿಸಿದ ದೂರವಾಣಿ ಸಂಭಾಷಣೆ: ವಿಧಾನಸೌಧಕ್ಕೆ ಆಗಮಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ತಮ್ಮ ಕಾರು ನಿಲ್ಲಿಸಿ, ಸಿಎಂ ದೂರವಾಣಿ ಸಂಭಾಷಣೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ:‘ಕೈ’ ಬಿಟ್ಟರೂ ಮುನಿರತ್ನ ಕೈಗೆಟುಕದ ಮಂತ್ರಿ ಸ್ಥಾನ? ಮನವೊಲಿಸುವ ಕೇಂದ್ರವಾಯ್ತಾ ಸಿಎಂ ನಿವಾಸ.!