ಕರ್ನಾಟಕ

karnataka

ETV Bharat / state

ರೈತರಿಂದ ಹಾಲು ಖರೀದಿಸುವುದನ್ನು ನಿಲ್ಲಿಸುವುದಿಲ್ಲ: ಬಮೂಲ್ ಸ್ಪಷ್ಟನೆ - bamul bangalore news

ಬಮೂಲ್ ಸಂಸ್ಥೆಗೆ ನಿತ್ಯ 10 ಲಕ್ಷ ರೂಪಾಯಿ ನಷ್ಟ ಉಂಟಾಗುತ್ತಿದೆ. ಆದರೂ ರೈತರಿಂದ ಹಾಲನ್ನು ಖರೀದಿಸಲಾಗುತ್ತಿದೆ. ಮುಂದೆಯೂ ಖರೀದಿಸಲಾಗುವುದು. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಬಮೂಲ್​ ಒಕ್ಕೂಟದ ಅಧ್ಯಕ್ಷರು ತಿಳಿಸಿದ್ದಾರೆ.

Never stop buying milk from farmers
ಬಮೂಲ್

By

Published : Mar 31, 2020, 4:17 PM IST

Updated : Mar 31, 2020, 6:18 PM IST

ಬೆಂಗಳೂರು: ಮಹಾನಗರ, ಬೆಂಗಳೂರು ಗ್ರಾಮಾಂತರ, ಕನಕಪುರ ಜಿಲ್ಲೆಗಳ ಹಾಲು ಉತ್ಪಾದಕರಿಗೆ ಯಾವುದೇ ತೊಂದರೆಯುಂಟಾಗದಂತೆ ತಡೆಯಲು ರೈತರಿಂದ ಹಾಲು ಖರೀದಿಸಲು ಬಮೂಲ್ ನಿರ್ಧರಿಸಿದೆ.

ಕೊರೊನಾ ವೈರಸ್ ಹರಡದಂತೆ ತಡೆಯಲು ಕೇಂದ್ರ ಸರ್ಕಾರ ಲಾಕ್​​ಡೌನ್ ವಿಧಿಸಿರುವ ಹಿನ್ನೆಲೆ ಹೋಟೆಲ್, ಹಾಸ್ಟೆಲ್ ಕಾರ್ಯನಿರ್ವಹಿಸದ ಹಿನ್ನೆಲೆ 1.5 ಲಕ್ಷ ಲೀಟರ್ ಹಾಲು ಹಾಗೂ 40 ಸಾವಿರ ಲೀಟರ್ ಮೊಸರು ಕಡಿಮೆಯಾಗಿದೆ. ಇದರಿಂದ ಬಮೂಲ್ ಸಂಸ್ಥೆಗೆ ನಿತ್ಯ 10 ಲಕ್ಷ ರೂಪಾಯಿ ನಷ್ಟ ಉಂಟಾಗುತ್ತಿದೆ. ಆದರೂ ರೈತರಿಂದ ಹಾಲನ್ನು ಖರೀದಿಸಲಾಗುತ್ತಿದೆ. ಮುಂದೆಯೂ ಖರೀದಿಸಲಾಗುವುದು. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಬಮೂಲ್​ ಒಕ್ಕೂಟದ ಅಧ್ಯಕ್ಷರು ತಿಳಿಸಿದ್ದಾರೆ.

​ ಒಕ್ಕೂಟದ ಅಧ್ಯಕ್ಷ

ಬೆಂಗಳೂರು ಹಾಲು ಒಕ್ಕೂಟ ಇದೂವರೆಗೂ ರೈತರಿಂದ ಹಾಲು ಖರೀದಿಸುವುದನ್ನ ನಿಲ್ಲಿಸಿಲ್ಲ. ರಾಜ್ಯದ ಇತರ ಒಕ್ಕೂಟಗಳು ಒಂದೊಂದು ದಿನ ಹಾಲು ಖರೀದಿಯನ್ನ ನಿಲ್ಲಿಸಿದ್ದವು. ರೈತರಿಂದ ಅಂತರ ಕಾಯ್ದುಕೊಂಡು ಹಾಲು ಖರೀದಿ ಮಾಡಬೇಕು ಎಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳ ವ್ಯಾಪ್ತಿಗೆ ಬರುವ ಬಮುಲ್ ಹಾಲು ಒಕ್ಕೂಟ ತಿಳಿಸಿದೆ.

ಹಾಲು ಸಿಗದಿದ್ದ ಸಂದರ್ಭದಲ್ಲಿ ರೂಟ್ ಏಜೆಂಟ್​ಗಳ ನಂಬರ್​​ಗಳನ್ನು ಬಮುಲ್ ವೆಬ್​​ಸೈಟ್​ನಲ್ಲಿ ಹಾಕಲಾಗಿದೆ. ಹಾಲಿನ ಕೊರತೆ ಉಂಟಾದ್ರೆ ಆ ಭಾಗದ ಏಜೆಂಟ್​​ಗಳಿಗೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.

Last Updated : Mar 31, 2020, 6:18 PM IST

ABOUT THE AUTHOR

...view details