ಕರ್ನಾಟಕ

karnataka

ETV Bharat / state

ಪೈಲಟ್​​ಗಳು ತಡವಾಗಿ ಬಂದಿದ್ದಕ್ಕೆ ಪ್ರಯಾಣಿಕರ ಅಸಮಾಧಾನ.. ಟ್ರಾಫಿಕ್​​ ಜಾಮ್​​ ಕುರಿತು ಪೊಲೀಸರ ಸ್ಪಷ್ಟನೆ - ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಪೈಲಟ್​ಗಳು ತಡವಾಗಿ ಬಂದ್ದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಅಸಮಾಧಾನ ತೋಡಿಕೊಂಡಿದ್ದಾರೆ. ಇದೇ ವೇಳೆ ಅಂದಿನ ದಿನ ಯಾವುದೇ ಟ್ರಾಫಿಕ್​ ಸಮಸ್ಯೆ ಇರಲಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

Bengaluru traffic jam  pilots arrived late due to Bengaluru traffic jam  Netizens alleged that the pilots arrived late  Bengaluru airport  ಟ್ರಾಫಿಕ್ ಜಾಮ್​ನಿಂದ ತಡವಾಗಿ ಬಂದ್ದಿದ್ದಾರೆಂದು ನೆಟ್ಟಿಗರ  ಪೊಲೀಸ್​ ಆಯುಕ್ತರ ಸ್ಪಷ್ಟನೆ  ಪೈಲಟ್​ಗಳು ಟ್ರಾಫಿಕ್ ಜಾಮ್​ನಿಂದ ತಡವಾಗಿ ಬಂದ್ದಿದ್ದಾರೆ  ಆರೋಪಕ್ಕೆ ಪೊಲೀಸ್​ ಆಯುಕ್ತರ ಟ್ವೀಟ್​ ಮೂಲಕ ಸ್ಪಷ್ಟನೆ  ಪುಣೆ ಮತ್ತು ದೆಹಲಿಗೆ ಹೋಗಬೇಕಾದ ಪ್ರಯಾಣಿಕರು  ನೆಟ್ಟಿಗರ ಮನೆಯಲ್ಲಿ ಈ ಬಗ್ಗೆ ಚರ್ಚೆ  ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ  ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ಪೊಲೀಸ್​ ಆಯುಕ್ತರ ಸ್ಪಷ್ಟನೆ

By

Published : Dec 24, 2022, 10:58 AM IST

Updated : Dec 24, 2022, 12:37 PM IST

ದೇವನಹಳ್ಳಿ:ನಿಗದಿತ ಸಮಯಕ್ಕೆ ಪೈಲಟ್​ಗಳು ಬಾರದ ಕಾರಣ,ವಿಮಾನ ಸಮಯಕ್ಕೆ ಸರಿಯಾಗಿ ತೆರಳದೇ ವಿಳಂಬವಾಗಿರುವುದಕ್ಕೆ ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಿಂದ ಪುಣೆ ಮತ್ತು ದೆಹಲಿಗೆ ಹೋಗಬೇಕಾದ ಪ್ರಯಾಣಿಕರು ನಿಗದಿತ ಸಮಯಕ್ಕಿಂತ 81 ನಿಮಿಷ ತಡವಾಗಿ ತಮ್ಮ ಸ್ಥಳಗಳನ್ನ ತಲುಪಿದ್ದಾರೆ. ಈ ಕುರಿತು ನೆಟ್ಟಿಗರ ಮನೆಯಲ್ಲಿ ಚರ್ಚೆ ನಡೆದಿದೆ. ಈ ಬಗ್ಗೆ ತಮ್ಮ ಅಸಮಾಧಾನವನ್ನು ಟ್ವೀಟ್​ ಮೂಲಕ ವ್ಯಕ್ತಪಡಿಸಿದ್ದಾರೆ.

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನವೊಂದು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಹೊರಟು ಮಧ್ಯಾಹ್ನ 2.50ಕ್ಕೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನ ತಲುಪಬೇಕಿತ್ತು, ಆದರೆ, ವಿಮಾನದ ಪೈಲಟ್ ತಡವಾಗಿ ಬಂದ್ದಿದ್ದರಿಂದ ಮಧ್ಯಾಹ್ನ 1:21 ಕ್ಕೆ ಹೊರಟು ಸಂಜೆ 4:07 ಕ್ಕೆ ದೆಹಲಿ ತಲುಪಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ವಿಮಾನವು ತನ್ನ ಗಮ್ಯಸ್ಥಾನವು 77 ನಿಮಿಷ ತಡವಾಗಿ ತಲುಪಿದೆ ಎಂದು ಹೇಳಲಾಗಿದೆ.

ಪೈಲಟ್​ಗಳು ತಡವಾಗಿ ಬಂದ ಹಿನ್ನೆಲೆ ವಿಮಾನ ನಿಲ್ದಾಣದಲ್ಲಿ 180 ಪ್ರಯಾಣಿಕರು ಕಾದು ಸುಸ್ತಾಗಿದ್ದರು ಎಂಬ ಮಾತುಗಳಿವೆ. ಅಷ್ಟೇ ಅಲ್ಲ ವಿಮಾನ ತಡವಾಗಿ ಹಾರಿದ್ದಕ್ಕೆ ನೆಟ್ಟಿಗರ ಮನೆಯಲ್ಲಿ ಈ ಬಗ್ಗೆ ಗಂಭೀರವಾಗಿ ಚರ್ಚೆಯಾಗಿದೆ. ಪೈಲಟ್​ಗಳು ಟ್ರಾಫಿಕ್​ ಸಮಸ್ಯೆಯಿಂದಾಗಿ ಆಗಮಿಸಲು ವಿಳಂಬವಾಗಿದೆ ಎಂದು ವಿಮಾನದಲ್ಲಿ ಹೇಳಲಾಗಿದೆ ಎಂದು ಪ್ರಯಾಣಿಕರು ತಾವು ಮಾಡಿದ ಟ್ವೀಟ್​ನಲ್ಲಿ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಮಾನ ಸಂಸ್ಥೆ ನಾವು ಸಮಯಕ್ಕೆ ಸರಿಯಾಗಿ ಹಾರಲು ಪ್ರಯತ್ನಿಸಿದವು. ಆದರೆ ಕೆಲವೊಮ್ಮೆ ಅನಿಶ್ಚಿತೆಯ ಕಾರಣಕ್ಕೆ ವಿಮಾನ ಶೆಡ್ಯೂಲ್ಡ್​​ ಬದಲಾವಣೆ ಅನಿವಾರ್ಯ ಎಂದು ವಿಷಾದ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಂಎ ಸಲೀಂ ಅವರು ವಿಮಾನ ಸಂಸ್ಥೆ ಮತ್ತು ಪ್ರಯಾಣಿಕರು ಮಾಡಿರುವ ಆರೋಪವನ್ನು ನಿರಾಕರಿಸಿದ್ದಾರೆ.

ಮತ್ತೊಂದೆಡೆ, ಟ್ರಾಫಿಕ್​ ಸಮಸ್ಯೆ ಎದುರಾಗಿತ್ತಾ ಎಂಬ ಕುರಿತಂತೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಅಂದು ನಗರದಲ್ಲಿ ಎಲ್ಲಿಯೂ ಯಾವುದೇ ಟ್ರಾಫಿಕ್ ಸಮಸ್ಯೆಗಳು ವರದಿಯಾಗಿಲ್ಲ ಎಂದು ಈಟಿವಿ ಭಾರತ ಕರ್ನಾಟಕಕ್ಕೆ ದೂರವಾಣಿ ಮೂಲಕ ಪೊಲೀಸ್​ ಅಧಿಕಾರಿ ಎಂಎ ಸಲೀಂ ಅವರು ಸ್ಪಷ್ಟನೆ ನೀಡಿದ್ದಾರೆ.

ಓದಿ:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೋವಿಡ್ ಮಾರ್ಗಸೂಚಿ ಪ್ರಕಟ: ಇಂದಿನಿಂದ ಜಾರಿ

Last Updated : Dec 24, 2022, 12:37 PM IST

ABOUT THE AUTHOR

...view details