ಬೆಂಗಳೂರು: ಮಹಾನ್ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಹೆಚ್.ಡಿ. ದೇವೇಗೌಡರು ಗೌರವ ಸಲ್ಲಿಸಿದ್ದಾರೆ.
ನೇತಾಜಿ ಜನ್ಮದಿನ: ಟ್ವೀಟ್ ಮೂಲಕ ಗೌರವ ಸಲ್ಲಿಸಿದ ಹೆಚ್.ಡಿ.ದೇವೇಗೌಡ - ಬೆಂಗಳೂರು
ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಗೌರವ ಸಲ್ಲಿಸಿದ್ದಾರೆ.
ಹೆಚ್.ಡಿ.ದೇವೇಗೌಡ
ಈ ಬಗ್ಗೆ ಟ್ವೀಟ್ ಮಾಡಿದ ಅವರು, ನೇತಾಜಿ ಸುಭಾಸ್ ಚಂದ್ರ ಬೋಸ್ ಅವರಿಗೆ ಗೌರವ ಸಲ್ಲಿಸುತ್ತೇನೆ. ಮಹಾನ್ ದೇಶಭಕ್ತರಾಗಿದ್ದ ಬೋಸ್ ಅವರು ಇಡೀ ಭಾರತಕ್ಕೆ ಸೇರಿದವರು. ಎಲ್ಲಾ ರಾಜಕೀಯ ಪಕ್ಷಗಳಿಗೆ ಸೇರಿದವರು.
ಪ್ರಧಾನ ಮಂತ್ರಿಯಾಗಿ 1997ರಲ್ಲಿ ಅವರ ಜನ್ಮ ಶತಮಾನೋತ್ಸವವನ್ನು ಉದ್ಘಾಟಿಸಿದ ನೆನಪುಗಳು ನನ್ನಲ್ಲಿವೆ ಎಂದು ಹೆಚ್ಡಿಡಿ ಟ್ವೀಟ್ ಮಾಡಿದ್ದಾರೆ.