ಕರ್ನಾಟಕ

karnataka

ETV Bharat / state

ಚಿನ್ನಮ್ಮ ಶಶಿಕಲಾರನ್ನು ಭೇಟಿ ಮಾಡಿದ ಸೋದರಳಿಯ ದಿನಕರನ್! ಗರಿಗೆದರಿದ ಕುತೂಹಲ - ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ

ತಮಿಳುನಾಡಿನ ತಮ್ಮ ಪಕ್ಷ ’ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ’ಗೆ ಸೇರ್ಪಡೆಗೊಂಡ ನಾಯಕರ ಬಗ್ಗೆ ವಿವರಗಳನ್ನು ಚರ್ಚಿಸಲು ದಿನಕರನ್ ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿರುವ ಸೆಂಟ್ರಲ್ ಜೈಲಿಗೆ ಭೇಟಿ ನೀಡಿದ್ದರು.

ಶಶಿಕಲಾರನ್ನು ಭೇಟಿ ಮಾಡಲು ಬಂದ ಸೋದರಳಿಯ ದಿನಕರನ್ ಕೇಂದ್ರ ಕಾರಾಗೃಹಕ್ಕೆ ಬಂದಿದ್ದರು.

By

Published : Sep 5, 2019, 10:57 PM IST

ಆನೇಕಲ್: ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ತಮಿಳುನಾಡಿನ ಶಶಿಕಲಾರನ್ನು ಭೇಟಿಯಾಗಲು ಅವರ ಸೋದರಳಿಯ ಆರ್.ಕೆ. ನಗರದ ಶಾಸಕ ಟಿಟಿವಿ ದಿನಕರನ್ ಇಂದು ಕಾರಾಗೃಹಕ್ಕೆ ಆಗಮಿಸಿದ್ದರು.

ಶಶಿಕಲಾರನ್ನು ಭೇಟಿ ಮಾಡಲು ಬಂದ ಸೋದರಳಿಯ ದಿನಕರನ್ ಕೇಂದ್ರ ಕಾರಾಗೃಹಕ್ಕೆ ಬಂದಿದ್ದರು.

ತಮಿಳುನಾಡಿನ ತಮ್ಮ ಪಕ್ಷ ’ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ’ಗೆ ಸೇರ್ಪಡೆಗೊಂಡ ನಾಯಕರ ಬಗ್ಗೆ ವಿವರಗಳನ್ನು ಚರ್ಚಿಸಲು ದಿನಕರನ್ ಇಂದು ಮಧ್ಯಾಹ್ನ ಸೆಂಟ್ರಲ್ ಜೈಲಿಗೆ ಭೇಟಿ ನೀಡಿದ್ದರು. ಇದಲ್ಲದೇ ಹದಿನೈದು ದಿನಕ್ಕೊಮ್ಮೆ ಸಹಜವಾಗಿ ಶಶಿಕಲಾರನ್ನು ಭೇಟಿಯಾಗುತ್ತಿದ್ದ ದಿನಕರನ್, ಆಗಾಗ್ಗೆ ನಡೆಯುವ ತಮಿಳುನಾಡಿನ ಒಳ ರಾಜಕಾರಣದ ವಿವರಗಳನ್ನು ಶಶಿಕಲಾರಿಗೆ ನೀಡಿ ನಿರ್ದೇಶನ ಪಡೆದುಕೊಂಡು, ಅದರಂತೆ ಪಕ್ಷ ಸಂಘಟಿಸಿ ಕಾರ್ಯರೂಪಕ್ಕೆ ಇಳಿಸುವಂತೆ ನೋಡಿಕೊಳ್ಳುತ್ತಿದ್ದರು.

ಇನ್ನು ಒಂದೂವರೆ ವರ್ಷವಷ್ಟೇ ಉಳಿದಿರುವ ಶಿಕ್ಷೆ ಮುಗಿಸಿ ಜೈಲಿನಿಂದ ಹೊರಬರಬೇಕಿರುವ ಶಶಿಕಲಾರ ನಡೆ ಬಗ್ಗೆ ಈಗಾಗಲೇ ತಮಿಳುನಾಡಿನಲ್ಲಿ ಕುತೂಹಲ ಹೆಚ್ಚುತ್ತಿದ್ದು, ಮತ್ತೊಮ್ಮೆ ತಮಿಳುನಾಡು ಮಹಿಳಾ ಆಡಳಿತಕ್ಕೆ ಮರಳುವುದೇ ಎಂಬ ಕುತೂಹಲ ಗರಿಗೆದರುತ್ತಿದೆ. ಇದಕ್ಕಾಗಿ ತಮಿಳುನಾಡು ರಾಜಕಾರಣ ಸಜ್ಜುಗೊಳ್ಳುತ್ತಿದೆ ಎಂದು ಹೇಳಲಾಗಿದೆ.

ಇದರಿಂದ ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾರನ್ನ ದಿನಕರನ್​​ ಭೇಟಿ ಮಾಡಿರುವುದು ತೀವ್ರ ಕುತೂಹಲ ಕೆರಳುವಂತೆ ಮಾಡಿದೆ. ಈಗಾಗಲೇ ನಾನಾ ಕಾರಣಗಳಿಂದ ಪೆರೋಲ್​ ಪಡೆದು ತಮಿಳುನಾಡಿಗೆ ಖುದ್ದು ಭೇಟಿ ಮಾಡಲು ಹವಣಿಸುತ್ತಿದ್ದಾರೆ ಎಂಬ ಅನಿಸಿಕೆಯೂ ವಿರೋಧಿ ಪಾಳಯದ ಪಕ್ಷಗಳಿಂದ ಕೇಳಿ ಬರುತ್ತಿದ್ದು, ಇಂದಿನ ದಿನಕರನ್​ ಭೇಟಿ ಮಹತ್ವ ಪಡೆಯಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.

ಸಂಜೆ ಮಧುರೈನಲ್ಲಿನ ಮಹತ್ವದ ಸಭೆಗೆ ಹೊರಡಬೇಕಾದ ಕಾರಣಕ್ಕಾಗಿ ದಿನಕರನ್ ಮಾಧ್ಯಮಕ್ಕೆ ಹೇಳಿಕೆ ನೀಡದೇ ಕ್ಷಮೆ ಕೋರಿ ತೆರಳಿದರು. ಈ ಸಂದರ್ಭದಲ್ಲಿ ಕರ್ನಾಟಕದ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ ವಕ್ತಾರೆ ವಾಘ ಪ್ರಶಾಂತಿ ಸಹ ಇದ್ದರು.

ABOUT THE AUTHOR

...view details