ಕರ್ನಾಟಕ

karnataka

ETV Bharat / state

ವಿದೇಶಿ ಪ್ರಜೆ ಮೇಲೆ NDPS ಕಾಯ್ದೆ: ನಗರ ಪೊಲೀಸ್​​ ಆಯುಕ್ತರ ಆದೇಶ ಎತ್ತಿ ಹಿಡಿದ ಹೈಕೋರ್ಟ್​​ - State High Court

ಡ್ರಗ್ಸ್ ಮಾರಾಟ ಜಾಲದಲ್ಲಿ ಭಾಗಿಯಾಗಿದ್ದ ನೈಜೀರಿಯಾ ಪ್ರಜೆಯ ಬಂಧನಕ್ಕೆ ಬಳಸಲಾಗಿದ್ದ PIT NDPS ಕಾಯ್ದೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ.

dsdd
ವಿದೇಶಿ ಪ್ರಜೆ ಮೇಲೆ NDPS ಕಾಯ್ದೆ

By

Published : May 29, 2020, 3:15 PM IST

ಬೆಂಗಳೂರು:ಡ್ರಗ್ಸ್ ಮಾರಾಟ ಜಾಲದಲ್ಲಿ ಭಾಗಿಯಾಗಿದ್ದ ನೈಜೀರಿಯಾ ಪ್ರಜೆಯ ಬಂಧನಕ್ಕೆ ಬಳಸಲಾಗಿದ್ದ PIT NDPS ಕಾಯ್ದೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ.

ವಿದೇಶಿ ಪ್ರಜೆ ಮಕುಕಾ ಚುಕುವಾಕ ಎಂಬಾತನ ಬಂಧನಕ್ಕೆ ಈ ಕಾಯ್ದೆ ಅನ್ವಯ ರಾಜ್ಯದಲ್ಲಿ ಮೊದಲ ಬಾರಿಗೆ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದರು. ಈತನ ಮೇಲೆ ಮಾದಕ ವಸ್ತುಗಳ ಮಾರಾಟ ಆರೋಪದಲ್ಲಿ ನಗರದ ಐದು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.

ರಾಜ್ಯದಲ್ಲಿ ಯಾರಾದರು ಇನ್ನು ಮುಂದೆ ಡ್ರಗ್ಸ್ ಮಾರಾಟ ಮಾಡಿದರೆ ಈ‌ ಕಾಯ್ದೆಯಡಿ ಬಂಧನವಾಗಿ ಜೈಲು ವಾಸ ಅನುಭವಿಸಲಿದ್ದಾರೆ. ಈ ಆರೋಪಿ 2012ರಲ್ಲಿ ಭಾರತಕ್ಕೆ ಬಂದು ನಗರದಲ್ಲಿ ನಿರಂತರವಾಗಿ ಡ್ರಗ್ಸ್​ ದಂಧೆಯಲ್ಲಿ ತೊಡಗಿದ್ದ. ಹಾಗೆಯೇ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪದೇ ಪದೆ ಮನೆ ಬದಲಾವಣೆ ಮಾಡುತ್ತಿದ್ದ. ಈತನ ಈ ಕೃತ್ಯಕ್ಕೆ ಹೆಂಡತಿ ಕೂಡಾ ಸಾಥ್ ಕೊಟ್ಟಿದ್ದಳಂತೆ.

ಬಾಡಿಗೆ ಮನೆ ಪಡೆಯುವಾಗ ಮನೆಯ ಮಾಲೀಕರಿಗೆ ನಕಲಿ ಪಾಸ್‌ಪೋರ್ಟ್ ನೀಡಿ ಬಟ್ಟೆ ವ್ಯವಹಾರ ಮಾಡುತ್ತಿದ್ದಾಗಿ ಸುಳ್ಳು ಹೇಳುತ್ತಿದ್ದ. ಹೀಗಾಗಿ ಈತನನ್ನು ಸಿಸಿಬಿ ಪೊಲೀಸರು PIT NDPD ACT ಅಡಿ ಪ್ರಕರಣ ದಾಖಲಿಸಿ ಬಂಧಿಸಿದ್ದರು.

ABOUT THE AUTHOR

...view details