2020ರ ಜನವರಿ 1 ರಿಂದ ಡಿಸೆಂಬರ್ 31ರವರೆಗಿನ ಒಟ್ಟು ಅಪರಾಧ ಪ್ರಕರಣಗಳ ಬಗೆಗಿನ ವಿಸ್ತೃತ ವರದಿಯನ್ನು ಎನ್‌ಸಿಆರ್‌ಬಿ ಪ್ರಕಟಿಸಿದೆ. ಈ ವರದಿಯ ಪ್ರಕಾರ, 2016 ರಿಂದ 2019ರ ಅವಧಿಗೆ ಹೋಲಿಸಿದರೆ 2020ರಲ್ಲಿ ಕರ್ನಾಟಕದಲ್ಲಿ ಅಪರಾಧ ಕೃತ್ಯಗಳ ಸಂಖ್ಯೆ ಗಣನೀಯವಾಗಿ ತಗ್ಗಿದೆ.
2016 ರಿಂದ 2020 ರವರೆಗಿನ ಅಪರಾಧ ಪ್ರಕರಣಗಳು:
2016 | 2017 | 2018 | 2019 | 2020 | |
ಐಪಿಸಿ ಸೆಕ್ಷನ್ (IPC) | 148402 | 146354 | 126534 | 120165 | 106350 |
ವಿಶೇಷ ಮತ್ತು ಸ್ಥಳೀಯ ಕಾನೂನುಗಳು (SLL) | 31077 | 37709 | 36882 | 43526 | 43730 |
ಒಟ್ಟು | 179479 | 184063 | 163416 | 163691 | 150080 |
2020 ರಲ್ಲಿ ಕರ್ನಾಟಕದಲ್ಲಿ 1,06,350 ಭಾರತೀಯ ದಂಡ ಸಂಹಿತೆ (IPC) ಅಡಿಯಲ್ಲಿ ಮತ್ತು 43,730 ವಿಶೇಷ ಮತ್ತು ಸ್ಥಳೀಯ ಕಾನೂನುಗಳು (SLL) ಅಪರಾಧಗಳನ್ನು ಒಳಗೊಂಡು ಒಟ್ಟು 1,50,080 ಅಪರಾಧಗಳು ದಾಖಲಾಗಿವೆ. 2019ರ ಅವಧಿಗೆ ಹೋಲಿಸಿದರೆ, ರಾಜ್ಯದಲ್ಲಿ 2020ರಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. 2019ರಲ್ಲಿ 1,63,691 ರಷ್ಟಿದ್ದ ಕ್ರೈಂ ಕೇಸ್ಗಳು 2020ರಲ್ಲಿ 1,50,080 ಪ್ರಕರಣಗಳು ದಾಖಲಾಗಿವೆ.
ಅಪಹರಣ, ಅತ್ಯಾಚಾರ, ಕೊಲೆ ಪ್ರಕರಣಗಳು:
2017 | 2018 | 2019 | 2020 | |
ಒಟ್ಟು | 6108 | 5832 | 5758 | 4844 |
ಕೊಲೆ (ಐಪಿಸಿ ಸೆಕ್ಷನ್ 302) | 1501 | 1422 | 1392 | 1420 |
ವರದಕ್ಷಿಣೆ ಸಾವು (ಐಪಿಸಿ ಸೆಕ್ಷನ್ 304 ಬಿ) | 53 | 202 | 203 | 178 |
ಆ್ಯಸಿಡ್ ದಾಳಿ (ಐಪಿಸಿ ಸೆಕ್ಷನ್ 326 ಎ) | 4 | 8 | 9 | 6 |
ಲೈಂಗಿಕ ಕಿರುಕುಳ (ಐಪಿಸಿ ಸೆಕ್ಷನ್ 354 ಎ) | 809 | 649 | 569 | 470 |
ಅಪಹರಣ ಪ್ರಕರಣಗಳು | 3152 | 3027 | 3080 | 2253 |
ಮಾನವ ಕಳ್ಳಸಾಗಣೆ (ಐಪಿಸಿ ಸೆಕ್ಷನ್ 370, 370 ಎ) | 31 | 27 | 32 | 13 |
ಅತ್ಯಾಚಾರ (ಐಪಿಸಿ ಸೆಕ್ಷನ್ 376) | 558 | 497 | 505 | 504 |
ಅಪಹರಣ, ಅತ್ಯಾಚಾರ, ಅಸಹಜ ಅಪರಾಧಗಳಂತಹ ಒಟ್ಟು 4844 ಪ್ರಕರಣಗಳು 2020 ರಲ್ಲಿ ದಾಖಲಾಗಿವೆ. 2020 ರಲ್ಲಿ 3080 ಅಪಹರಣ ಪ್ರಕರಣಗಳು, 1420 ಕೊಲೆ ಪ್ರಕರಣಗಳು, 504 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.
ಕೊಲೆ ಪ್ರಕರಣಗಳು:
2016 | 2017 | 2018 | 2019 | 2020 | |
ಕೊಲೆ ಪ್ರಕರಣಗಳು | 1573 | 1384 | 1334 | 1314 | 1331 |
ಕೊಲೆ ಕಾರಣವಾದ ಕಾರಣಗಳು:
2020 ರಲ್ಲಿ ಒಟ್ಟು 1331 ಕೊಲೆ ಪ್ರಕರಣಗಳು ದಾಖಲಾಗಿದ್ದು, 2019 ಕ್ಕೆ ಹೋಲಿಸಿದರೆ ಇಳಿಕೆ ಕಂಡುಬಂದಿದೆ (1314 ಪ್ರಕರಣಗಳು). ವಿವಾದವೇ (531 ಪ್ರಕರಣಗಳು) ಹೆಚ್ಚಿನ ಸಂಖ್ಯೆಯ ಪ್ರಕರಣಗಳಲ್ಲಿ ಕೊಲೆ ಮಾಡಲು ಸ್ಫೂರ್ತಿ ನೀಡಿದ ವಿಚಾರವಾಗಿದೆ.
ಒಟ್ಟು ಕೊಲೆ ಪ್ರಕರಣಗಳು | ವಿವಾದ | ಪ್ರೇಮ ಪ್ರಕರಣಗಳು | ವರದಕ್ಷಿಣೆ | ಕಾರಣವೇ ಇಲ್ಲದೇ ಕೊಲೆ | |
2017 | 1384 | 457 | 48 | 35 | 35 |
2018 | 1334 | 481 | 60 | 18 | 73 |
2019 | 1314 | 446 | 52 | 19 | 46 |
2020 | 1331 | 531 | 62 | 16 | 20 |
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು:
2019ಕ್ಕೆ ಹೋಲಿಸಿದರೆ 2020ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. 2016 ರಿಂದ ಈಚೆಗೆ 2020 ರ ವರೆಗೆ ಮಹಿಳೆಯ ಮೇಲೆ ಎಸಗಿದ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ.
2016 | 2017 | 2018 | 2019 | 2020 | |
ಒಟ್ಟು ಪ್ರಕರಣಗಳು | 14131 | 14078 | 13514 | 13828 | 12680 |
2020 ರಲ್ಲಿ ಮಹಿಳೆಯರ ವಿರುದ್ಧ ಒಟ್ಟು 12,680 ಅಪರಾಧ ಪ್ರಕರಣಗಳು ದಾಖಲಾಗಿದ್ದು, 2019 ರಲ್ಲಿ ವರದಿಯಾದ 13,828 ಕೇಸ್ಗಳಿಗೆ ಹೋಲಿಸಿದರೆ ಇಳಿಕೆ ಕಂಡುಬಂದಿದೆ. ಮಹಿಳೆಯರ ವಿರುದ್ಧದ ಅಪರಾಧಗಳ ಅಡಿಯಲ್ಲಿ ಹೆಚ್ಚಿನ ಪ್ರಕರಣಗಳು ಆಕೆಯ ಮೇಲೆ ವಿನಾಕಾರಣ ಆಕ್ರೋಶ ವ್ಯಕ್ತಪಡಿಸುವ ಉದ್ದೇಶದಿಂದ ಮಹಿಳೆಯರ ಮೇಲೆ ಹಲ್ಲೆ (5248 ಪ್ರಕರಣಗಳು) ನಂತರ ಪತಿ ಅಥವಾ ಆತನ ಸಂಬಂಧಿಕರ ಕ್ರೌರ್ಯ (2092 ಪ್ರಕರಣಗಳು) ಮತ್ತು ಮಹಿಳೆಯರ ಅಪಹರಣ (951 ಪ್ರಕರಣಗಳು) ಮತ್ತು ಅತ್ಯಾಚಾರ (504 ಪ್ರಕರಣಗಳು) ಆಗಿವೆ.
ಅತ್ಯಾಚಾರ ಪ್ರಕರಣದಲ್ಲಿ ಕೊಲೆ | ವರದಕ್ಷಿಣೆ ಕೊಲೆ | ಆತ್ಮಹತ್ಯೆಗೆ ಪ್ರೇರಣೆ | ಮಹಿಳೆಯರ ಮೇಲೆ ಹಲ್ಲೆ | ಅತ್ಯಾಚಾರ | ಪತಿ ಅಥವಾ ಆತನ ಸಂಬಂಧಿಕರ ಕ್ರೌರ್ಯ | ಮಹಿಳೆಯರ ಅಪಹರಣ | |
2018 | 16 | 202 | 351 | 5338 | 497 | 2075 | 1285 |
2019 | 23 | 203 | 343 | 5186 | 505 | 2503 | 1110 |
2020 | 7 | 178 | 263 | 5248 | 504 | 2092 | 951 |
ಸೈಬರ್ ಅಪರಾಧ ಕೃತ್ಯಗಳು: