ಕರ್ನಾಟಕ

karnataka

ETV Bharat / state

ಅಡುಗೆ ಮನೆಯಲ್ಲಿ 27 ಕೆಜಿ ಡ್ರಗ್ಸ್ ಸಂಗ್ರಹ: ಎನ್​ಸಿಬಿ ದಾಳಿಯಲ್ಲಿ ಪತ್ತೆ - undefined

ಹೆಮ್ಮಿಗೇಪುರದ‌ ಫ್ಲೆಕ್ಸ್ ಲೇಔಟ್​​​ನ ಮನೆ ಮೇಲೆ ಎನ್​ಸಿಬಿ ದಾಳಿ. ಸತತ 6 ಗಂಟೆ ಮನೆ ಪರಿಶೀಲನೆ. 27 ಕೆಜಿ ಡ್ರಗ್ಸ್ ಪತ್ತೆ‌.

27 ಕೆಜಿ ಡ್ರಗ್ಸ್ ಪತ್ತೆ

By

Published : May 3, 2019, 6:04 AM IST

ಬೆಂಗಳೂರು: ಮನೆವೊಂದರ ಮೇಲೆ ಮಾದಕ ವಸ್ತು ನಿಗ್ರಹ ದಳ ದಾಳಿ ಮಾಡಿ, ‌ಬರೋಬ್ಬರಿ 27 ಕೆಜಿ ಡ್ರಗ್ಸ್ ಪತ್ತೆ ಮಾಡಿದೆ.‌

27 ಕೆಜಿ ಡ್ರಗ್ಸ್ ಪತ್ತೆ

198 ನೇ ವಾಡ್೯, ಹೆಮ್ಮಿಗೇಪುರದ‌ ಫ್ಲೆಕ್ಸ್ ಲೇಔಟ್​​​ನ ಮನೆಯೊಂದರಲ್ಲಿ ಖಚಿತ ಮಾಹಿತಿ ಮೇರೆಗೆ ಸತತ 6 ಗಂಟೆಗಳಿಂದ ಮನೆ ಪರಿಶೀಲನೆ ಮಾಡಿ ಗಾಂಜಾ ಪತ್ತೆ‌ ಮಾಡಿದ್ದಾರೆ. ಇನ್ನು ಮನೆಯಲ್ಲಿ ಮಂಗಳೂರು ಮೂಲದ ಕುಟುಂಬ ನೆಲಸಿತ್ತು.‌ ಕಳೆದ 1 ವರ್ಷದಿಂದ ಈ ಬಾಡಿಗೆ ಮನೆಯಲ್ಲಿ ಮೂವರು ಮಕ್ಕಳು, ಪತಿ, ಪತ್ನಿ ಸೇರಿ ಐವರು ವಾಸವಾಗಿದ್ರು .

ಇವರು ಅಡುಗೆ ಕೊಣೆಯಲ್ಲಿಯೇ ಕೆಜಿಗಟ್ಟಲೆ ಮಾದಕ ವಸ್ತುಗಳ ಸಂಗ್ರಹ ಮಾಡಿ‌, ವಾಸನೆ ಬರಬರಾದು ಎಂದು ಪ್ರತ್ಯೇಕ ಫ್ಯಾನ್ ವ್ಯವಸ್ಥೆ ಮಾಡಿದ್ದರು. ಬೆಳಗಿನ ಜಾವ ಬ್ಯಾರಲ್​ಗಳಲ್ಲಿ ಪಾರ್ಸಲ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದಾರೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಬೆಂಗಳೂರು ಸೇರಿದಂತೆ ಹೈದರಾಬಾದ್​ನಲ್ಲಿಯೂ ಕೆಲ ಆರೋಪಿಗಳು ಇದ್ದು, ಅವರ ಮೇಲೆಯು ಕೂಡಾ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಎನ್​ಸಿಬಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

For All Latest Updates

TAGGED:

ABOUT THE AUTHOR

...view details