ಕರ್ನಾಟಕ

karnataka

ETV Bharat / state

'ಮದುವೆಯಾಗಿ ಮೂರೇ ತಿಂಗಳಾಗಿದೆ, ತಪ್ಪಾಗಿದೆ ಕ್ಷಮಿಸಿ ಬಿಡಿ ಸಾರ್'

ಬೆಂಗಳೂರು ಗಲಭೆ ಪ್ರಕರಣ ಪ್ರಮುಖ ಆರೋಪಿ ನವೀನ್​ ಪೊಲೀಸರ ಪ್ರಶ್ನೆಗೆ ಬೆಚ್ಚಿಬಿದ್ದಿದ್ದಾನೆ. ನನ್ನ ಹೆಂಡತಿ, ತಂದೆ ತಾಯಿ ಹಾಗೂ ಮನೆಯವರು ಅಮಾಯಕರು. ಮದುವೆಯಾಗಿ ಬರೀ ಮೂರು ತಿಂಗಳಾಗಿದೆ, ನನ್ನಿಂದ ತಪ್ಪಾಗಿದೆ ಕ್ಷಮಿಸಿ ಬಿಡಿ ಸಾರ್​ ಎಂದು ಬೆಂಗಳೂರು ಗಲಭೆಗೆ ಕಾರಣವಾದ ಫೇಸ್​ಬುಕ್​ ಪೋಸ್ಟ್​ ಆರೋಪಿ ನವೀನ್​ ಪೊಲೀಸರ ಮುಂದೆ ಗೋಗರಿದಿದ್ದಾನೆ ಎಂದು ತಿಳಿದುಬಂದಿದೆ.

fdf
ತನಿಖಾಧಿಕಾರಿ ಮಂದೆ ನವೀನ್​ ಅಳಲು

By

Published : Aug 16, 2020, 9:54 AM IST

ಬೆಂಗಳೂರು: ಡಿ ಜೆ ಹಳ್ಳಿ ಹಾಗೂ ಕೆ ಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಗಲಭೆ ಪ್ರಕರಣದ ಆರೋಪಿ ನವೀನ್ ವಿಚಾರಣಾಧಿಕಾರಿಗಳ ಮುಂದೆ ಕ್ಷಮೆಯಾಚಿಸಿದ್ದಾನೆ. ನನಗೆ ಮದುವೆ ಆಗಿ ಮೂರು ತಿಂಗಳಷ್ಟೇ ಆಗಿದೆ ಸಾರ್, ತಪ್ಪಾಗಿದೆ ಕ್ಷಮೆ ಇರಲಿ ಎಂದು ತನಿಖಾಧಿಕಾರಿ ಮುಂದೆ ಪರಿ ಪರಿಯಾಗಿ ಬೇಡಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಕಿಡಿಗೇಡಿಗಳು ನವೀನ್​ ಹಲ್ಲೆ ನಡೆಸುವ ಸಾಧ್ಯತೆ ಇರುವುದರಿಂದಸದ್ಯ ಪೊಲೀಸರು ನವೀನ್​ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ. ಹೀಗಾಗಿ ಸದ್ಯ ಪೊಲೀಸರ ಭದ್ರತೆಯಲ್ಲಿ ತನಿಖೆ ಮುಂದುವರೆದಿದೆ.

ಕಳೆದ ಮಂಗಳವಾರ ನವೀನ್ ಡಿ ಜೆ ಹಳ್ಳಿ ಠಾಣಾ ವ್ಯಾಪ್ತಿಯ ಬಳಿ ಇರುವ ಮನೆಯಲ್ಲಿ ಫೇಸ್ ​ಬುಕ್ ಆನ್ ಮಾಡಿರ್ತಾನೆ. ಬಂಧಿತನಾಗಿರುವ ಎಸ್​ಡಿಪಿಐ ಸಂಘಟನೆಯ ಮುಜಾಮಿಲ್ ಹಾಗೂ ಈತನ ಆಪ್ತ ಫೈರೋಜ್ ಜೊತೆ ನವೀನ್​ ಜಿದ್ದಾಜಿದ್ದಿ ನಡೆಸುತ್ತಿದ್ದ. ಫೇಸ್​ ಬುಕ್​ನಲ್ಲಿ ಫೈರೋಜ್ ಹಾಕಿದ್ದ ಪೋಸ್ಟ್​ಗೆ ಕಾಮೆಂಟ್ ಮಾಡುವ ಭರದಲ್ಲಿ ನವೀನ್​ ಮೊಬೈಲ್​ನಲ್ಲಿದ್ದ ಸ್ಕ್ರೀನ್ ಶಾಟ್ ಹಾಕಿದ್ದ. ಇದನ್ನು ನೋಡಿದ್ದ ಜನ ಆತನಿಗೆ ಅಸಭ್ಯವಾಗಿ ಕಮೆಂಟ್ ಮಾಡಿದ್ದರು. ಪೋಸ್ಟ್​ ನೋಡಿದ್ದ ಕೆಲ ಅನ್ಯಕೋಮಿನ ಜನ ಕರೆ ಮಾಡಿ ಕೊಲ್ಲುವ ಬೆದರಿಕೆ ಹಾಕಿದ್ದರಂತೆ. ವಿಷಯ ತಿಳಿದ ಪೊಲೀಸರು ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಕರೆ ಮಾಡಿ ಮೊದಲು ನೀವು ಅಲರ್ಟ್ ಆಗಿ ಎಂದಿದ್ದರು. ಗಲಭೆಕೋರರು ಬರುತ್ತಾರೆ ಎಂದು ತಿಳಿದು ಮನೆಯ ಮೂರನೇ ಮಹಡಿಯಲ್ಲಿ ನವೀನ್ ಅಡಗಿ ಕುಳಿತಿದ್ದ. ಈ ವೇಳೆ ಪೊಲೀಸರು ನಾವಿದ್ದೇವೆ, ನಮ್ಮ ಜೊತೆ ಬಾ ಎಂದು ಕೆ ಜಿ ಹಳ್ಳಿ ಠಾಣೆಗೆ ಕರೆ ತಂದಿದ್ದರು ಎನ್ನಲಾಗ್ತಿದೆ.

ABOUT THE AUTHOR

...view details