ಬೆಂಗಳೂರು: ಜೆ. ಪಿ ನಗರದ ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ 10 ಬಗೆಯ ಹಣ್ಣುಗಳು, ಮುಸುಕಿನ ಜೋಳ, ಸೊಪ್ಪುಗಳು ಹಾಗೂ ಹೂವುಗಳನ್ನು ಬಳಸಿಕೊಂಡು ಗಣೇಶನ ಮೂರ್ತಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿದೆ. ಈ ಸೊಬಗನ್ನು ಕಂಡು ಭಕ್ತರು ಪುನೀತರಾಗಿದ್ದಾರೆ.
ವಿಶೇಷ ಹೂವು -ಹಣ್ಣುಗಳಿಂದ ಅಲಂಕಾರಗೊಂಡಿರುವ ಗಣೇಶ 'ಇಲ್ಲಿ ಪ್ರತಿವರ್ಷ ವಿಭಿನ್ನವಾಗಿ ಗಣೇಶ ಚತುರ್ಥಿ ಆಚರಿಸುತ್ತೇವೆ. ಇಲ್ಲಿನ ಅಲಂಕಾರ ಕೂಡ ಅಷ್ಟೇ ವಿಭಿನ್ನವಾಗಿರುತ್ತದೆ. ಇದನ್ನು ನೋಡುವುದಕ್ಕೆಂದೇ ಸಾವಿರಾರು ಜನ ಸೇರುತ್ತಾರೆ. ಹಣ್ಣುಗಳನ್ನು ಬಳಸಿಕೊಂಡು ಮಾಡುವ ಈ ಅಲಂಕಾರ 3 ದಿನಗಳ ಕಾಲ ಇರುತ್ತದೆ. ಈ ಸಂಭ್ರಮ, ಸಡಗರವನ್ನು ಜನರು ಕೂಡ ಅಷ್ಟೇ ಭಕ್ತಿಯಿಂದ ಕಣ್ತುಂಬಿಕೊಳ್ಳುತ್ತಾರೆ.
ಗಣೇಶನ ಪೂಜೆಯಲ್ಲಿ ಭಾಗವಹಿಸಿದ ಭಕ್ತರು ಮೂರನೇ ದಿನ ಹಣ್ಣುಗಳನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಅಲಂಕಾರಕ್ಕೆ ಬಳಸಿದ ವಸ್ತುಗಳನ್ನು ಕಸದ ಬುಟ್ಟಿಗೆ ಹಾಕದೇ ಅದು ಭಕ್ತರಿಗೆ ಪ್ರಸಾದದ ರೂಪದಲ್ಲಿ ಸಿಗಬೇಕು ಎಂಬುದು ನಮ್ಮ ಮುಖ್ಯ ಉದ್ಧೇಶ' ಎಂದು ಗಣಪತಿಯ ವಿಶೇಷ ಅಲಂಕಾರ ಹಾಗೂ ಅದರ ಹಿಂದಿರುವ ಪರಿಸರ ಕಾಳಜಿಯ ಕುರಿತು ಶ್ರೀ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್ನ ಟ್ರಸ್ಟಿ ರಾಮ್ ಮೋಹನ ರಾಜ್ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಗಣೇಶನ ದೇವಾಲಯಕ್ಕೆ ಆಗಮಿಸಿರುವ ಭಕ್ತರು ಈ ಬಾರಿ ಕೊರೊನಾ ಮಹಾಮಾರಿ ಕಡಿಮೆ ಆಗಿರುವ ನಿಟ್ಟಿನಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ಪ್ರತ್ಯೇಕವಾಗಿ ಮೂರ್ತಿಯನ್ನು ಪ್ರತಿಷ್ಠಾಪಿಸದೇ ದೇವಸ್ಥಾನದಲ್ಲಿ ಇರುವ ಮೂರ್ತಿಗೆ ಸೀಬೆಕಾಯಿ, ಕಲ್ಲಂಗಡಿ, ಡ್ರಾಗನ್ ಪ್ರೂಟ್, ದಾಳಿಂಬೆ, ಟೊಮೆಟೊ, ಗಜ್ಜರಿ ಹೀಗೆ 10 ವಿವಿಧ ಹಣ್ಣುಗಳು, ಮುಸುಕಿನ ಜೋಳ, ನಾನಾ ಬಗೆಯ ಹೂವುಗಳು ಹಾಗೂ ಸೊಪ್ಪುಗಳನ್ನು ಬಳಸಿಕೊಂಡು ಅಲಂಕಾರ ಮಾಡಲಾಗಿದೆ.
ಹೂವು ಹಣ್ಣುಗಳಿಂದ ಗಣೇಶನಿಗೆ ಅಲಂಕಾರ ಮಾಡಿರುವುದು ಇಲ್ಲಿ ಪ್ರತಿ ವರ್ಷ ವಿಭಿನ್ನವಾಗಿ ಗಣೇಶ ಚತುರ್ಥಿ ಆಚರಿಸುತ್ತೇವೆ. ಇಲ್ಲಿನ ಅಲಂಕಾರ ಕೂಡ ಅಷ್ಟೇ ವಿಭಿನ್ನವಾಗಿರುತ್ತದೆ. ಇದನ್ನು ನೋಡುವುದಕ್ಕೆಂದೇ ಸಾವಿರಾರು ಜನ ಸೇರುತ್ತಾರೆ. ಹಣ್ಣುಗಳನ್ನು ಬಳಸಿಕೊಂಡು ಮಾಡುವ ಈ ಅಲಂಕಾರ 3 ದಿನಗಳ ಕಾಲ ಇರುತ್ತದೆ. ಈ ಸಂಭ್ರಮ, ಸಡಗರವನ್ನು ಜನರು ಕೂಡ ಅಷ್ಟೇ ಭಕ್ತಿಯಿಂದ ಕಣ್ತುಂಬಿಕೊಳ್ಳುತ್ತಾರೆ. ಮೂರನೇ ದಿನ ಹಣ್ಣುಗಳನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಅಲಂಕಾರಕ್ಕೆ ಬಳಸಿದ ವಸ್ತುಗಳನ್ನು ಕಸದ ಬುಟ್ಟಿಗೆ ಹಾಕದೇ ಅದು ಭಕ್ತರಿಗೆ ಪ್ರಸಾದದ ರೂಪದಲ್ಲಿ ಸಿಗಬೇಕು ಎಂಬುದು ನಮ್ಮ ಮುಖ್ಯ ಉದ್ಧೇಶ ಎಂದು ತಮ್ಮ ಖುಷಿ ಹಂಚಿಕೊಂಡರು.
ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆ:ಶ್ರೀ ಸತ್ಯ ಗಣಪತಿ ದೇವಸ್ಥಾನ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ದೃಷ್ಟಿಯಿಂದ 10 ಸಾವಿರ ಮಣ್ಣಿನ ಗಣೇಶ ಮತ್ತು ಗೌರಿ ಮೂರ್ತಿಗಳನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಿರುವುದು ವಿಶೇಷವಾಗಿದೆ.
ಓದಿ:ಪ್ರಾಮಾಣಿಕವಾಗಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡ್ತೇನೆ : ರಾಮನಗರ ಜನತೆಗೆ ಹೆಚ್ಡಿಕೆ ಭರವಸೆ