ಕರ್ನಾಟಕ

karnataka

ETV Bharat / state

ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ನೈಸರ್ಗಿಕ ಮಾವು ಮೇಳಕ್ಕೆ ಚಾಲನೆ.. - ನೈಸರ್ಗಿಕ ಮಾವು ಮೇಳಕ್ಕೆ ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ಚಾಲನೆ

ನಿಸರ್ಗಸಹಜ ಹಣ್ಣುಗಳನ್ನು ಹಾಗೆಯೇ ಆಸ್ವಾದಿಸುವ ಪದ್ಧತಿ ಹಿಂದೆಲ್ಲ ಇತ್ತು. ಕ್ರಿಮಿನಾಶಕ ಮತ್ತು ಕೀಟನಾಶಕಗಳ ಅಡ್ಡ ಪರಿಣಾಮಗಳನ್ನು ಈಗ ಅರಿಯಲಾಗುತ್ತಿದ್ದು, ಪುನಃ ಸಾವಯವ ಕೃಷಿ ಮತ್ತು ಆಹಾರ ಸೇವನೆಗೆ ಮರುಜೀವ ಬರುತ್ತಿದೆ ಎಂದು ಯದುಗಿರಿ ಯತಿರಾಜ ಮಠದ ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಅವರು ಹೇಳಿದರು.

ನೈಸರ್ಗಿಕ ಮಾವು ಮೇಳ
ನೈಸರ್ಗಿಕ ಮಾವು ಮೇಳ

By

Published : Jun 3, 2022, 5:53 PM IST

ಬೆಂಗಳೂರು: ಡಾ. ಸಿ. ಎನ್ ಅಶ್ವತ್ಥನಾರಾಯಣ ಪ್ರತಿಷ್ಠಾನವು ಮಲ್ಲೇಶ್ವರ ಸಮೀಪದ ಸರ್ಕಾರಿ ಶಾಲಾ ಆವರಣದಲ್ಲಿ ಏರ್ಪಡಿಸಿರುವ ಮೂರು ದಿನಗಳ (ಜೂ. 4 ರಿಂದ 6) ನೈಸರ್ಗಿಕ ಮಾವು ಮೇಳಕ್ಕೆ ಯದುಗಿರಿ ಯತಿರಾಜ ಮಠದ ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಶುಕ್ರವಾರ ಚಾಲನೆ ನೀಡಿದರು.

ಶ್ರೀಗಳು ಮೇಳದಲ್ಲಿ ಪಾಲ್ಗೊಂಡಿರುವ ಪ್ರತಿಯೊಂದು ಮಳಿಗೆಗೂ ತೆರಳಿ ತಲಾ 5 ಕೆ. ಜಿ. ಮಾವಿನ ಹಣ್ಣು ಖರೀದಿಸುವ ಮೂಲಕ ವಿನೂತನ ಉತ್ತೇಜನಾ ಮಾದರಿಯಲ್ಲಿ ಮೇಳವನ್ನು ಉದ್ಘಾಟಿಸಿದರು. ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈತರು ಬೆಳೆದು, ನೈಸರ್ಗಿಕವಾಗಿ ಹಣ್ಣು ಮಾಡಿರುವ ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆ.

ಈ ಸಂದರ್ಭದಲ್ಲಿ ಪಕ್ಕದ ಸರ್ಕಾರಿ ಶಾಲೆಯ ಮಕ್ಕಳಿಗೆ ತಲಾ ಒಂದು ಮಾವಿನ ಹಣ್ಣು ವಿತರಿಸಿ ಖುಷಿ ಪಟ್ಟರು. ಜೊತೆಗೆ, ಮಳಿಗೆ ಹಾಕಿರುವ ಹಲವು ಪದವೀಧರ ರೈತರೊಂದಿಗೆ ಮಾತನಾಡಿ, ಅವರೆಲ್ಲರ ಕುಶಲೋಪರಿಯನ್ನು ವಿಚಾರಿಸಿದರು. ಮೇಳ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ನಿಸರ್ಗಸಹಜ ಹಣ್ಣುಗಳನ್ನು ಹಾಗೆಯೇ ಆಸ್ವಾದಿಸುವ ಪದ್ಧತಿ ಹಿಂದೆಲ್ಲ ಇತ್ತು. ಕ್ರಿಮಿನಾಶಕ ಮತ್ತು ಕೀಟನಾಶಕಗಳ ಅಡ್ಡ ಪರಿಣಾಮಗಳನ್ನು ಈಗ ಅರಿಯಲಾಗುತ್ತಿದ್ದು, ಪುನಃ ಸಾವಯವ ಕೃಷಿ ಮತ್ತು ಆಹಾರ ಸೇವನೆಗೆ ಮರುಜೀವ ಬರುತ್ತಿದೆ ಎಂದರು.

ಮೇಳದ ಹಿನ್ನಲೆ ಸರ್ಕಾರಿ ಶಾಲಾ ಮೈದಾನದಲ್ಲಿ ಹಬ್ಬದ ಸಡಗರ ಮನೆ ಮಾಡಿತ್ತು. ಕಾರ್ಯಕ್ರಮದಲ್ಲಿ ಸಚಿವ ಡಾ. ಸಿ. ಎನ್ ಅಶ್ವತ್ಥನಾರಾಯಣ ಅವರ ತಂದೆ, ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ದೀಪಕ್, ನಿವೃತ್ತ ಶಿಕ್ಷಕ ನಾರಾಯಣಪ್ಪ, ಸಚಿವರ ಆಪ್ತ ಕಾರ್ಯದರ್ಶಿ ಮಾರುತಿ ಪ್ರಸನ್ನ, ಬಿಜೆಪಿ ಮಲ್ಲೇಶ್ವರಂ ಮಂಡಲದ ಅಧ್ಯಕ್ಷೆ ಕಾವೇರಿ ಕೇದಾರನಾಥ್, ಪಾಲಿಕೆ ಮಾಜಿ ಸದಸ್ಯ ಮಂಜುನಾಥ ರಾಜು, ಜಯಪ್ರಕಾಶ್, ರಾಮನಗರ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮುನೇಗೌಡ ಉಪಸ್ಥಿತರಿದ್ದರು.

ಓದಿ:ಸೋರುತ್ತಿರುವ ಶಾಲೆ : ಮಳೆಯಲ್ಲಿ ಒದ್ದೆಯಾದ ಪುಸ್ತಕಗಳನ್ನು ಬಿಸಿಲಲ್ಲಿ ಒಣಗಿಸುತ್ತಿರುವ ಪುಟ್ಟ ಮಕ್ಕಳು

For All Latest Updates

ABOUT THE AUTHOR

...view details