ಬೆಂಗಳೂರು: ಡಕಾಯಿತಿ, ಸುಲಿಗೆ ಹಾಗು ಹಲ್ಲೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ನನ್ನು ಡ್ರಗ್ಸ್ ಪ್ರಕರಣದಲ್ಲಿ ಡಿ.ಜೆ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಜೆ.ಸಿ ನಗರ ಪೊಲೀಸ್ ಠಾಣೆ ರೌಡಿಶೀಟರ್ ಸುಹೈಲ್ ಬಂಧಿತ ಆರೋಪಿ. ಶಿವಾಜಿನಗರ ನಿವಾಸಿಯಾಗಿರುವ ಈತನ ವಿರುದ್ಧ 14ಕ್ಕೂ ಹೆಚ್ಚು ಪ್ರಕರಣಗಳಿವೆ.
ಹಲವು ಬಾರಿ ಜೈಲಿಗೆ ಹೋಗಿಬಂದಿದ್ದ ಸುಹೈಲ್, ಡ್ರಗ್ಸ್ ಸೇವಿಸಿ ವ್ಯಾಪಾರಿಗಳನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಹಣ ಪಡೆಯುತ್ತಿದ್ದ. ಹಣ ಕೊಡದಿದ್ದರೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡುತ್ತಿದ್ದನಂತೆ. ಅಲ್ಲದೆ ತನ್ನ ಸಹಚರರನ್ನು ಕಟ್ಟಿಕೊಂಡು ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದನು ಎಂದು ತಿಳಿದುಬಂದಿದೆ.