ಬೆಂಗಳೂರು:ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ನಲ್ಲಿ ಎರಡು ದಿನಗಳ ವೈದ್ಯಕೀಯ ಪ್ರದರ್ಶನ ನಡೆಸಿದ್ದು,ಈ ಕಾರ್ಯಾಗಾರದಲ್ಲಿ ಮಾನವನ ಮೆದುಳು ಸೇರಿದಂತೆ ವಿವಿಧ ಪ್ರಾಣಿಗಳ ಬ್ರೈನ್ ಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ....ನಿಮ್ಹಾನ್ಸ್ ನಲ್ಲಿ ಮಾನವ, ಪ್ರಾಣಿಗಳ ಮೆದುಳು ಪ್ರದರ್ಶನ...
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ನಲ್ಲಿ ಎರಡು ದಿನಗಳ ವೈದ್ಯಕೀಯ ಪ್ರದರ್ಶನ ನಡೆಸಿದ್ದು,ಈ ಕಾರ್ಯಾಗಾರದಲ್ಲಿ ಮಾನವನ ಮೆದುಳು ಸೇರಿದಂತೆ ವಿವಿಧ ಪ್ರಾಣಿಗಳ ಬ್ರೈನ್ ಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಟಿವಿಎಸ್ ಗ್ರೂಪ್ ಸಹಯೋಗದಲ್ಲಿ ನ್ಯೂರೊ ಸೈನ್ಸ್ ಕಾರ್ಯಾಗಾರವನ್ನು ನಿಮ್ಹಾನ್ಸ್ ಕನ್ವೆಷನ್ ಸೆಂಟರ್ನಲ್ಲಿ ಏರ್ಪಡಿಸಲಾಗಿತ್ತು,ಇನ್ನು ಎರಡು ದಿನಗಳ ಕಾರ್ಯಾಗಾರದಲ್ಲಿ ಸ್ಟ್ರೋಕ್ ಕುರಿತು ಮಾಹಿತಿ ನೀಡಲಾಗುತ್ತಿದೆ. 2018-19ನೇ ಸಾಲಿನಲ್ಲಿ 5.65 ಲಕ್ಷ ಜನರಿಗೆ ಚಿಕಿತ್ಸೆ ನೀಡಲಾಗಿದ್ದು, 307 ಸಂಶೋಧನಾ ಯೋಜನೆಗಳು, 857 ಸಂಶೋಧನಾ ವರದಿ ಮಂಡಿಸಲಾಗಿದೆ.
ಅಲ್ಲದೇ 543 ಕಾರ್ಯಾಗಾರ, ಶಿಬಿರಗಳನ್ನು ನಡೆಸಿದ್ದಲ್ಲದೇ, ಈ ಕಾರ್ಯಾಗಾರದಲ್ಲಿ ಮಾನವನ ಮೆದುಳು ಸೇರಿದಂತೆ ವಿವಿಧ ಪ್ರಾಣಿಗಳ ಬ್ರೈನ್ ಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.ಇನ್ನು ಈ ಪ್ರದರ್ಶನ ವಿಜ್ಞಾನದಲ್ಲಿ ಆಸಕ್ತಿ ಇರುವ ಮಕ್ಕಳಿಗೆ ತುಂಬಾ ಉಪಯುಕ್ತವಾಗಿದ್ದು. ನಿನ್ನೆ ಮತ್ತು ಇಂದು ನಡೆದ ಈ ಪ್ರದರ್ಶನಕ್ಕೆ ಸಾವಿರಾರು ಜನ ಬಂದು ವೀಕ್ಷಣೆ ಮಾಡಿದ್ದಾರೆ.