ಕರ್ನಾಟಕ

karnataka

ETV Bharat / state

ಚಿತ್ರಕಲಾ ಪರಿಷತ್ತಿನಲ್ಲಿ ಅಪರೂಪದ ವ್ಯಂಗ್ಯ ಚಿತ್ರ ಪ್ರದರ್ಶನ: ಡಿಸಿಎಂ ಸವದಿ ಉದ್ಘಾಟನೆ

ರಸ್ತೆ ಸುರಕ್ಷತಾ ಜಾಗೃತಿ ಮೂಡಿಸುವ ಅಪರೂಪದ ವ್ಯಂಗ್ಯ ಚಿತ್ರ ಪ್ರದರ್ಶನವನ್ನು ಸಾರಿಗೆ ಇಲಾಖೆ ಮತ್ತು ರಸ್ತೆ ಸುರಕ್ಷತಾ ಪ್ರಾಧಿಕಾರದಿಂದ ನಡೆಸಲಾಗುತ್ತಿದೆ.

Cartoons in Chitrakala parishat
ವ್ಯಂಗ್ಯ ಚಿತ್ರ ಪ್ರದರ್ಶನ

By

Published : Feb 12, 2021, 7:51 PM IST

ಬೆಂಗಳೂರು:ಸಾರಿಗೆ ಇಲಾಖೆ ಮತ್ತು ರಸ್ತೆ ಸುರಕ್ಷತಾ ಪ್ರಾಧಿಕಾರದ ವತಿಯಿಂದ ಇಂದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಅಪರೂಪದ ವ್ಯಂಗ್ಯ ಚಿತ್ರ ಪ್ರದರ್ಶನವನ್ನು ಏರ್ಪಡಿಸುವ ಮೂಲಕ ರಸ್ತೆ ಸುರಕ್ಷತಾ ಜಾಗೃತಿಗೆ ಡಿಸಿಎಂ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಚಾಲನೆ ನೀಡಿದರು.

ಚಿತ್ರನಟಿ ಲೀಲಾ, ಸಾರಿಗೆ ಆಯುಕ್ತರಾದ ಶಿವಕುಮಾರ್, ಹಿರಿಯ ಸಾರಿಗೆ ಅಧಿಕಾರಿಗಳಾದ ನರೇಂದ್ರ ಹೋಲ್ಕರ್ ಮತ್ತು ಹಾಲಸ್ವಾಮಿ ಅವರು ಮಾತನಾಡಿದರು. ರಾಜ್ಯದ ಪ್ರಸಿದ್ಧ 50ಕ್ಕೂ ಹೆಚ್ಚು ಮಂದಿ ಚಿತ್ರ ಕಲಾಕಾರರು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ವ್ಯಂಗ್ಯ ಚಿತ್ರ ಪ್ರದರ್ಶನವನ್ನು ತೆರೆದಿತ್ತಿದ್ದಾರೆ.

ಇನ್ನು ಈ ವೇಳೆ ಮಾತನಾಡಿದ ಲಕ್ಷ್ಮಣ ಸವದಿ, ವಿದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಮತ್ತು ಚಾಲಕರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಅಷ್ಟಾಗಿ ಸಾರ್ವಜನಿಕರು ಗಮನವಹಿಸುತ್ತಿಲ್ಲ. ಇದರಿಂದಾಗಿ ಅಪಘಾತಗಳು ಹೆಚ್ಚುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದರು‌‌.

ಕೇಂದ್ರ ಸರ್ಕಾರವು ಪ್ರತಿವರ್ಷ ಚಾಲಕರ ಜಾಗೃತಿಗಾಗಿ ಸುಮಾರು 7,000 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ರಾಜ್ಯದಲ್ಲಿ ಮಾಲಿನ್ಯದ ಪ್ರಮಾಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರಿಸರಸ್ನೇಹಿ ಎಲೆಕ್ಟಿಕ್ ವಾಹನಗಳನ್ನೇ ಜನರು ಇನ್ನು ಮುಂದೆ ಹೆಚ್ಚಾಗಿ ಖರೀದಿಸಬೇಕು. ಇಂತಹ ವಾಹನಗಳಿಗೆ ರೋಡ್ ಟ್ಯಾಕ್ಸ್‌ನಿಂದ ವಿನಾಯಿತಿ ನೀಡಲಾಗಿದೆ. ಆದ್ದರಿಂದ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ರಾಜ್ಯದ 50ಕ್ಕೂ ಹೆಚ್ಚು ಪ್ರಸಿದ್ಧ ವ್ಯಂಗ್ಯಚಿತ್ರಕಾರರು ರಚಿಸಿದ್ದ 200ಕ್ಕೂ ಹೆಚ್ಚು ಮನಸೆಳೆಯುವ ಈ ವ್ಯಂಗ್ಯಚಿತ್ರಗಳನ್ನು ಇಂದಿನಿಂದ 3 ದಿನಗಳ ಚಿತ್ರಕಲಾ ಪರಿಷತ್ತಿನಲ್ಲಿ ಪ್ರದರ್ಶಿಸಲಾಗುತ್ತಿದೆ.

ABOUT THE AUTHOR

...view details