ಕರ್ನಾಟಕ

karnataka

ETV Bharat / state

ಹೊಸ ವಿಸಿ ನೇಮಕ ವಿಳಂಬ.. ಪರೀಕ್ಷೆ ಬಹಿಷ್ಕರಿಸಿ ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆ - ಹೊಸ ವಿಸಿ ನೇಮಕ ವಿಳಂಬ

ಬೆಂಗಳೂರು ಚಂದ್ರಲೇಔಟ್ ಬಳಿ ಇರುವ ನ್ಯಾಷನಲ್ ಲಾ ಸ್ಕೂಲ್ ಯೂನಿವರ್ಸಿಟಿಯಲ್ಲಿ ಹೊಸ ವಿಸಿ ನೇಮಕ ವಿಚಾರದಲ್ಲಿ ವಿಳಂಬ ನೀತಿ ಖಂಡಿಸಿ ಕಾನೂನು ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ.

ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆ

By

Published : Sep 23, 2019, 5:28 PM IST

ಬೆಂಗಳೂರು:ನಗರದ ಚಂದ್ರಲೇಔಟ್ ಬಳಿ ಇರುವ ನ್ಯಾಷನಲ್ ಲಾ ಸ್ಕೂಲ್ ಯೂನಿವರ್ಸಿಟಿಯಲ್ಲಿ ಹೊಸ ವಿಸಿ ನೇಮಕ ವಿಚಾರದಲ್ಲಿ ವಿಳಂಬ ನೀತಿ ಖಂಡಿಸಿ ಕಾನೂನು ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ. ವಿಸಿ ನೇಮಕಾತಿ ಆಯ್ಕೆ ಪ್ರಕ್ರಿಯೆ ಮುಗಿದಿದ್ರೂ ಅನೌನ್ಸ್ ಮಾಡದ ಕೌನ್ಸಿಲ್ ವಿರುದ್ದ ಪ್ರತಿಭಟನೆಗೆ ಮುಂದಾಗಿದ್ದಾರೆ.‌

ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್..

ಇನ್ನು, ಕಾನೂನು ವಿದ್ಯಾರ್ಥಿಗಳಿಗೆ ಇಂದಿನಿಂದ ಪರೀಕ್ಷೆ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆಗೆ ಬಹಿಷ್ಕಾರ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ‌‌. ಎಕ್ಸಿಕ್ಯೂಟಿವ್ ಕೌನ್ಸಿಲ್ ಈಗಾಗಲೇ ವಿಸಿ ಆಯ್ಕೆ ಮಾಡಲಾಗಿದೆ. ಆದರೆ, ಪ್ರಭಾರಿ ವಿಸಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಎಂ ಕೆ ರಮೇಶ್ ಬಗ್ಗೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ‌‌. ಮುಖ್ಯವಾಗಿ ಕ್ಯಾಂಪಸ್​ನಲ್ಲಿ ವಿದ್ಯಾರ್ಥಿಗಳಿಗೆ ಓದಲು ಸರಿಯಾದ ವಾತಾವರಣ ಇಲ್ಲ ಎಂಬ ಕೂಗು ಕೇಳಿ ಬರುತ್ತಿದೆ‌‌. ಇವತ್ತು ಬೆಳಗ್ಗೆ 10ಗಂಟೆಗೆ ಇದ್ದ ಪರೀಕ್ಷೆಯನ್ನು ಬಹಿಷ್ಕರಿಸಿ ತರಗತಿಯ ಹೊರೆಗೆ ಕೂತು ಮುಷ್ಕರ ಕೈಗೊಂಡಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ನ್ಯಾಷನಲ್ ಲಾ ಕಾಲೇಜಿನಲ್ಲಿ‌ ವಿಸಿ ನೇಮಕ ವಿಚಾರ ಹಾಗೂ ವಿದ್ಯಾರ್ಥಿಗಳು ‌ಪರೀಕ್ಷೆ ಬರೆಯದೇ ಪ್ರತಿಭಟನೆ ಮಾಡುತ್ತಿರೋದು ಗಮನಕ್ಕೆ ಬಂದಿಲ್ಲ. ಬಾರ್ ಕೌನ್ಸಿಲ್ ಇಂಡಿಯಾ ವ್ಯವಸ್ಥೆ ಅಡಿ ನಡೆಯುತ್ತಿರುವ ಸಂಸ್ಥೆ ಅದು, ನಮ್ಮ ಕಡೆಯಿಂದ ಯಾವುದೇ ಹೆಚ್ಚಿನ ಮಧ್ಯಪ್ರವೇಶವಿಲ್ಲ. ಆದರೂ ಈ ಬಗ್ಗೆ ಗಮನ ಹರಿಸುತ್ತೇನೆ ಎಂದು ತಿಳಿಸಿದ್ದಾರೆ‌‌.

ಟ್ವೀಟ್ ಮಾಡಿದ ಮಾಜಿ ಸಿಎಂ‌ ಸಿದ್ದರಾಮಯ್ಯ

ಇನ್ನು, ಮಾಜಿ ಸಿಎಂ‌ ಸಿದ್ದರಾಮಯ್ಯ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯು ಬೆಂಗಳೂರು ಪ್ರತಿಷ್ಠಿತ ಸಂಸ್ಥೆಯಾಗಿದೆ. ಇದು ಸಾರ್ವಜನಿಕ ನೀತಿ ಮತ್ತು ಕಾನೂನು ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದೆ, ಸಂಸ್ಥೆ ಆಡಳಿತದ ನಡುವೆ ನಡೆಯುತ್ತಿರುವ ಜಗಳವನ್ನು ಸಂಸ್ಥೆಯ ಹಿತದೃಷ್ಟಿಯಿಂದ, ಸರಿಯಾದ ಪ್ರಕ್ರಿಯೆಯನ್ನು ಉಲ್ಲಂಘಿಸದೆ, ಶೀಘ್ರದಲ್ಲಿಯೇ ಪರಿಹರಿಸಬೇಕಾಗಿದೆ ಎಂದು ಟ್ವೀಟ್ ಕೂಡ ಮಾಡಿದ್ದಾರೆ.

ABOUT THE AUTHOR

...view details