ಯಲಹಂಕ: ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (IIHR) ಅವರಣದಲ್ಲಿ ನಾಳೆಯಿಂದ ರಾಷ್ಟ್ರೀಯ ತೋಟಗಾರಿಕಾ ಮೇಳ 2023 ಆರಂಭವಾಗಲಿದೆ. ನಾಲ್ಕು ದಿನ ನಡೆಯುವ ತೋಟಗಾರಿಕ ಮೇಳದಲ್ಲಿ 120ಕ್ಕೂ ಹೆಚ್ಚು ತಳಿಗಳ ಪ್ರದರ್ಶನ, 63 ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ಮತ್ತು ರೈತರೊಂದಿಗೆ ಕೃಷಿ ವಿಜ್ಞಾನಿಗಳ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ರೈತರು, ಕೃಷಿ ವಿಜ್ಞಾನಿಗಳು ಮತ್ತು ತೋಟಗಾರಿಕಾ ಸಂಸ್ಥೆಯ ನಡುವೆ ಸೇತುವೆಯಾಗಿ ಕೆಲಸ ಮಾಡಲು ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಪ್ರತೀ ವರ್ಷ ಆಯೋಜಿಸಲಾಗುತ್ತದೆ. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಆನ್ಲೈನ್ ಮೂಲಕ ಮೇಳ ಉದ್ಘಾಟಿಸಲಿದ್ದಾರೆ.
ಈ ಸಲದ ಮೇಳದ ವಿಷಯ “ಸ್ವಾವಲಂಬನೆಗಾಗಿ ನವೀನ ತೋಟಗಾರಿಕೆ”. ತೋಟಗಾರಿಕೆ ಉದ್ಯಮಿಗಳ ಸಹಯೋಗದಲ್ಲಿ ಮೇಳ ನಡೆಯಲಿದೆ. ದೇಶದ ಬೇರೆ ಬೇರೆ ರಾಜ್ಯಗಳಿಂದ ಲಕ್ಷಾಂತರ ರೈತರು ಆಗಮಿಸಲಿದ್ದಾರೆ. ರೈತರು ಮತ್ತು ತೋಟಗಾರಿಕೆ ಉದ್ಯಮಿಗಳು ತಯಾರಿಸಿದ ಹೊಸ ತಂತ್ರಜ್ಞಾನಗಳು ಪ್ರದರ್ಶನಗೊಳ್ಳಲಿದೆ. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಹೊಸದಾಗಿ ಸೃಷ್ಠಿಸಿದ ತಳಿಗಳು, ಅಭಿವೃದ್ಧಿಪಡಿಸಲಾದ ತೋಟಗಾರಿಕೆ ಬೀಜಗಳ ಪ್ರದರ್ಶನ ನಡೆಯಲಿದೆ ಎಂದು ನಿರ್ದೇಶಕ ಡಾ. ಸಂಜಯ್ ಕುಮಾರ್ ಸಿಂಗ್ ತಿಳಿಸಿದರು.
ಇದನ್ನೂ ಓದಿ:ತುರ್ತು ನೆರವಿಗೆ ಸಾರ್ವಜನಿಕರು ಸುರಕ್ಷಾ ಆ್ಯಪ್ ಬಳಸಬಹುದು: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ