ಕರ್ನಾಟಕ

karnataka

ETV Bharat / state

ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆ; ರಾಜ್ಯದಲ್ಲಿ ಭರದಿಂದ ಸಿದ್ಧವಾಗ್ತಿದೆ ರೂಪುರೇಷೆ - ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ 2020

ರಾಜ್ಯದಲ್ಲಿ 2021ರ ವೇಳೆಗೆ ಹಂತ ಹಂತವಾಗಿ ಈ ಯೋಜನೆ ಆರಂಭಿಸಲು ಸರ್ಕಾರ ತಯಾರಿ ನಡೆಸಿದೆ.

national education policy
ರಾಷ್ಟ್ರೀಯ ಶಿಕ್ಷಣ ನೀತಿ

By

Published : Oct 31, 2020, 2:44 AM IST

Updated : Oct 31, 2020, 5:52 PM IST

ಬೆಂಗಳೂರು:ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಹಾಗೂ ಶಿಕ್ಷಕರ ಬದುಕಿಗೂ ಒತ್ತು ನೀಡಲು ದೇಶಾದ್ಯಂತ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಇತ್ತ ರಾಜ್ಯ ಸರ್ಕಾರವೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳುವ ಸಂಬಂಧ ಈಗಾಗಲೇ ತಯಾರಿ ನಡೆಸಿದೆ‌‌.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಜೊತೆಗೆ ಉನ್ನತ ಶಿಕ್ಷಣ ಇಲಾಖೆ ಗಟ್ಟಿಯಾದ ಕ್ರಿಯಾ ಯೋಜನೆ ರೂಪಿಸುತ್ತಿದ್ದು, ತಜ್ಞರೊಂದಿಗೆ ಕೆಲಸ ಕಾರ್ಯಗಳು ನಡೆಯುತ್ತಿವೆ. ‌ಇತ್ತ ರಾಷ್ಟ್ರೀಯ ಶಿಕ್ಷಣ ನೀತಿ ಅತ್ಯಂತ ಬದ್ಧತೆಯಿಂದ ಜಾರಿ ಮಾಡಲು ಮುಂದಾಗಿದ್ದು, ಹಲವು ಶಿಕ್ಷಣ ಸಲಹೆಗಾರರು, ಶಿಕ್ಷಣ ಸಂಸ್ಥೆಗಳು ತಮ್ಮ ಅಭಿಪ್ರಾಯದೊಂದಿಗೆ ವರದಿ ತಯಾರು ಮಾಡಿ ಸಲ್ಲಿಸಿವೆ.

ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಪ್ರೊ.ಎಂ ಆರ್ ದೊರೆಸ್ವಾಮಿ ಮಾತು

ಈಗಾಗಲೇ ನೀತಿಯ ಜಾರಿಗೆ ಬೇಕಾದ ಕಾನೂನಾತ್ಮಕ-ಆಡಳಿತಾತ್ಮಕ ಬದಲಾವಣೆಗಳನ್ನು ಮಾಡಲಾಗುತ್ತಿದೆ. 2021ರ ಸಮಯಕ್ಕೆ ಹಂತ ಹಂತವಾಗಿ ಈ ಯೋಜನೆ ಆರಂಭಿಸಲು ಸರ್ಕಾರ ತಯಾರಿ ನಡೆಸಿದೆ. ‌ಈ ಬಗ್ಗೆ ಈಟಿವಿ ಭಾರತ್‌ನೊಂದಿಗೆ ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರರು ಆದ ಪ್ರೊ.ಎಂ.ಆರ್. ದೊರೆಸ್ವಾಮಿ, ರಾಷ್ಟ್ರೀಯ ಶಿಕ್ಷಣ ನೀತಿಯ ಅಗತ್ಯತೆ ಹಾಗೂ ತಯಾರಿ ಬಗ್ಗೆ ಮಾತನಾಡಿದ್ದಾರೆ. ಕಸ್ತೂರಿ ರಂಗನ್ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ಆಯೋಗವನ್ನು ರಚನೆ ಮಾಡಿತ್ತು. ಇವರ ನೇತೃತ್ವದಲ್ಲಿ ಬಹಳ ವರ್ಷಗಳ ಕಾಲ ಯೋಚನೆ ಮಾಡಿ ಶಿಕ್ಷಣ ಕ್ಷೇತ್ರದಲ್ಲಿ ಏನೇನು ಬದಲಾವಣೆ ತರಬೇಕು ಎಂಬುದನ್ನ ಚಿಂತಿಸಲಾಗಿತ್ತು. ಕೇವಲ ಉನ್ನತ ಶಿಕ್ಷಣ ಮಾತ್ರವಲ್ಲದೇ ಕೆಳ ಮಟ್ಟದಿಂದಲ್ಲೇ ಅಂದರೆ ಪ್ರಾಥಮಿಕ ಶಿಕ್ಷಣದಿಂದಲ್ಲೇ ಬದಲಾವಣೆ ತರಬೇಕು ಎನ್ನುವುದೇ ಮೂಲ ಉದ್ದೇಶ ಅಂತ ಎಂದರು.

ಪ್ರೊ.ಎಂ ಆರ್ ದೊರೆಸ್ವಾಮಿ ಮಾತು

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಉದ್ಯೋಗ ಹುಡುಕಿಕೊಂಡು ಹೋಗುವುದಲ್ಲ, ಬದಲಿಗೆ ಉದ್ಯೋಗ ಸೃಷ್ಟಿ ಮಾಡುವ ಕೆಲಸ ಮಾಡಲಾಗುತ್ತೆ. ‌ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಕೌಶಲ್ಯ ಅಭಿವೃದ್ಧಿ ಪಾಠ ಆಗುವುದರಿಂದ ಉದ್ಯೋಗ ಸೃಷ್ಟಿಕರ್ತರನ್ನಾಗಿ ಮಾಡಲಾಗುತ್ತೆ ಎಂದು ವಿವರಿಸಿದರು.‌ ಇನ್ನು ರಾಜ್ಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹೇಗೆ ಇರಬೇಕು ಎಂಬ ಕ್ರಮಗಳು ಶುರುವಾಗಿವೆ. ಒಮ್ಮೆಲೆ ಎಲ್ಲ ಅಳವಡಿಕೆ ಸಾಧ್ಯವಿಲ್ಲ. ಇದಕ್ಕೆ ಸಮಯ ಹಿಡಿಯಲಿದ್ದು ಹಂತ ಹಂತವಾಗಿ ಮಾಡಬೇಕಾಗುತ್ತೆ ಎಂದು ಹೇಳಿದರು. 3-4 ವರ್ಷಗಳಲ್ಲಿ ಬದಲಾವಣೆಯನ್ನು ನೋಡಬಹುದು. ಸದ್ಯ ರೂಪುರೇಷೆಗಳು ಸಿದ್ಧವಾಗ್ತಿವೆ. ಹಾಗೇ ದೊರೆಸ್ವಾಮಿಯವರು ಸರ್ಕಾರಕ್ಕೆ 10 ಅಂಶಗಳ ವರದಿಯೊಂದನ್ನು ಸಿದ್ಧಪಡಿಸಿದ್ದು ಅದನ್ನು ಸಲ್ಲಿಸಿದ್ದಾರೆ. ‌ಪ್ರಮುಖವಾಗಿ ಮೆಂಟರ್ ಸಿಸ್ಟಂ, ಜಯಂತಿ ರಜೆ ಕಡಿತ ಮಾಡುವುದು ಬದಲಿಗೆ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸುವುದು, ವಿಚಾರ‌ ಸಂಕೀರಣಗಳು ನಡೆದು ವಿಚಾರ ವಿನಿಮಯವಾಗುವುದು. ಶಾಲಾ-ಕಾಲೇಜು ಆರಂಭಕ್ಕೆ ಅನುಮತಿ ನೀಡುವ ಮೊದಲು ಕಟ್ಟುನಿಟ್ಟಿನ ನಿಯಮ ಚೌಕಟ್ಟು ಇರುವಂತೆ ನೋಡಿಕೊಳ್ಳುವುದು.

ಬಾರ್ ಲೈಸೆನ್ಸ್ ಕೊಡುವುದು ಈ ರೀತಿಯ ಬದಲಾವಣೆ ತರುವ ಅಂಶ ಸೇರಿಸಿ ವರದಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಸದ್ಯ ಎಲ್ಲ ಶಿಕ್ಷಣ ಸಂಸ್ಥೆಗಳು, ಎನ್​ಜಿಒಗಳು, ಶಿಕ್ಷಣ ತಜ್ಞರ ಅಭಿಪ್ರಾಯ ಕ್ರೂಢೀಕರಣ ಕೆಲಸವನ್ನು ಸರ್ಕಾರ ನಡೆಸುತ್ತಿದೆ. ಅದರ ಚಿತ್ರಣಕ್ಕಾಗಿ ಮುಂದಿನ‌ ವರ್ಷದವರೆಗೆ ಕಾಯಬೇಕಾಗಿದೆ.

Last Updated : Oct 31, 2020, 5:52 PM IST

ABOUT THE AUTHOR

...view details