ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪೀಣ್ಯ ಫ್ಲೈಓವರ್ ಸಂಚಾರಕ್ಕೆ ಮುಕ್ತಗೊಂಡಿದ್ದು, ಲಘುವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸುಮಾರು 2 ತಿಂಗಳಿಂದ ಮುಚ್ಚಿದ್ದ ಪೀಣ್ಯ ಮೆಟ್ರೋ ನಿಲ್ದಾಣದ ಬಳಿ ಪ್ರಾರಂಭವಾಗುವ ಫ್ಲೈಓವರ್ ಮುಖ್ಯದ್ವಾರ ಓಪನ್ ಮಾಡಿ ಕಾರು, ಬೈಕುಗಳು ಸೇರಿ ಲಘು ವಾಹನಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ಮಧ್ಯಾಹ್ನ ಸುಮಾರು 3 ಗಂಟೆಯ ಸಮಯದಲ್ಲಿ ವಾಹನ ಸಂಚಾರಕ್ಕೆ ಅವಕಾಶಕೊಟ್ಟ ಸಂಚಾರಿ ಪೊಲೀಸರು ಗೊರಗುಂಟೆಪಾಳ್ಯದಿಂದ 8 ನೇ ಮೈಲಿ ತಲುಪುವ ಮೇಲ್ಸೇತುವೆ ಓಪನ್ ಮಾಡಿದ್ದಾರೆ. ಗೊರಗುಂಟೆಪಾಳ್ಯದ ಮೂಲಕ ನೆಲಮಂಗಲ, ತುಮಕೂರು ಕಡೆಗೆ ಲಘು ವಾಹನಗಳು ಓಡಾಟ ನಡೆಸುತ್ತಿವೆ.