ಬೆಂಗಳೂರು : ಬಿಗ್ಬಾಸ್ ಖ್ಯಾತಿಯ ಪ್ರಥಮ್ ಅಭಿನಯದ ನಟಭಯಂಕರ ತಂಡ ಬೆಂಗಳೂರಿನಿಂದ ಬೀದರ್ಗೆ ಬೈಕ್ ಮೂಲಕ ಆಗಮಿಸಿ ಸೀಲ್ಡೌನ್ ಆಗಿರುವ ಪ್ರದೇಶದ ಬಡವರಿಗೆ ದಿನಸಿ ಹಾಗೂ ಅಹಾರ ಪ್ಯಾಕೆಟ್ ವಿತರಿಸಿ ಮಾನವೀಯತೆ ಮೆರೆದಿದೆ.
ಹಸಿದವರಿಗೆ ನೆರವಾದ "ನಟಭಯಂಕರ" ತಂಡ: ಪಾಕೆಟ್ ಮನಿಯನ್ನೇ ದೇಣಿಗೆ ನೀಡಿದ ಜಾರಕಿಹೊಳಿ ಕುಟುಂಬದ ಕುಡಿಗಳು - actor pratham news
ಪ್ರಥಮ್ ಅಭಿನಯದ ನಟಭಯಂಕರ ತಂಡ ಬೀದರ್ನಲ್ಲಿ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ, ಇದಕ್ಕೆ ಜಾರಕಿಹೊಳಿ ಕುಟಂಬದ ಕುಡಿಗಳು ಸಹಾಯ ಮಾಡಿದ್ದಾರೆ.
![ಹಸಿದವರಿಗೆ ನೆರವಾದ "ನಟಭಯಂಕರ" ತಂಡ: ಪಾಕೆಟ್ ಮನಿಯನ್ನೇ ದೇಣಿಗೆ ನೀಡಿದ ಜಾರಕಿಹೊಳಿ ಕುಟುಂಬದ ಕುಡಿಗಳು natabayankara-cinema-team](https://etvbharatimages.akamaized.net/etvbharat/prod-images/768-512-6864554-767-6864554-1587367001370.jpg)
ಹಸಿದವರ ಹೊಟ್ಟೆ ತುಂಬಿಸುತ್ತಿರುವ "ನಟಭಯಂಕರ" ತಂಡ
ಹಸಿದವರ ಹೊಟ್ಟೆ ತುಂಬಿಸುತ್ತಿರುವ "ನಟಭಯಂಕರ" ತಂಡ
ನಟಭಯಂಕರ ತಂಡದ ಈ ಕೆಲಸವನ್ನು ಮೆಚ್ಚಿದ ಪ್ರಥಮ್ ಕೆಲವು ಫೋಟೋಗಳನ್ನು ತಮ್ಮ ಸ್ಟೇಟಸ್ನಲ್ಲಿ ಹಾಕಿಕಿರುವುದನ್ನು ಗಮನಿಸಿದ ಜಾರಕಿಹೊಳಿ ಕುಟುಂಬದ ಕುಡಿಗಳು ನಟ ಭಯಂಕರ ತಂಡಕ್ಕೆ ಹಣದ ಸಹಾಯ ಮಾಡಿದ್ದಾರೆ.
ನಟ ಪ್ರಥಮ್ ಸ್ನೇಹಿತರಾದ ಜಾರಕಿಹೊಳಿ ಕುಟುಂಬದ ವಿದ್ಯಾರ್ಥಿಗಳಾದ ಸರ್ವೋತ್ತಮ್ ಜಾರಕಿಹೊಳಿ ಮತ್ತು ಸನತ್ ಜಾರಕಿಹೊಳಿ ತಮ್ಮ ಪಾಕೆಟ್ ಮನಿಯಲ್ಲಿ ಉಳಿತಾಯ ಮಾಡಿದ್ದ 30 ಸಾವಿರ ರೂಪಾಯಿಗಳನ್ನು ಬಡವರಿಗೆ ಊಟ ನೀಡುತ್ತಿರುವ ನಟಭಯಂಕರ ತಂಡಕ್ಕೆ ದಾನ ಮಾಡಿದ್ದಾರೆ ಎಂದು ನಟ ಪ್ರಥಮ್ ಈಟಿವಿ ಭಾರತ ಗೆ ತಿಳಿಸಿದ್ದಾರೆ.