ಕರ್ನಾಟಕ

karnataka

ETV Bharat / state

ಸಿಡಿ ಪ್ರಕರಣ: ಸುದ್ದಿವಾಹಿನಿ ಪತ್ರಕರ್ತನ ಬ್ಯಾಂಕ್‌ ಖಾತೆಯಲ್ಲಿ ಸಿಕ್ಕಿದ್ದು ಬರೇ 2.28 ರೂಪಾಯಿ.! - Naresh Gowda account balance

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಸುದ್ದಿವಾಹಿನಿ ಪತ್ರಕರ್ತನ ಬ್ಯಾಂಕ್ ಅಕೌಂಟ್ ಪರಿಶೀಲನೆ ನಡೆಸಿರುವ ತನಿಖಾಧಿಕಾರಿಗಳಿಗೆ ಒಂದು ಬ್ಯಾಂಕ್ ಖಾತೆಯಲ್ಲಿ 20 ಸಾವಿರ ಹಾಗೂ ಮತ್ತೊಂದು ಬ್ಯಾಂಕ್ ಖಾತೆಯಲ್ಲಿ ಕೇವಲ 2.28 ರೂಪಾಯಿ ಇರುವುದು ಗೊತ್ತಾಗಿದೆ.

naresh-gowda-account-balance-checked-by-sit
ನರೇಶ್​ಗೌಡ

By

Published : Mar 19, 2021, 3:39 PM IST

Updated : Mar 19, 2021, 4:36 PM IST

ಬೆಂಗಳೂರು: ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಶ್ ​ಗೌಡ ಹರಿಬಿಟ್ಟಿರುವ ವಿಡಿಯೋ ಎಲ್ಲಿಂದ ಅಪ್​ಲೋಡ್​ ಮಾಡಲಾಗಿದೆ ಎಂಬುದರ ಬಗ್ಗೆ ಎಸ್ಐಟಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ತಮ್ಮ ಮೇಲೆ ಬಂದಿರುವ ಆರೋಪಗಳ‌ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ನರೇಶ್​ಗೌಡ ಸ್ಪಷ್ಟನೆ ನೀಡಿದ್ದರು. ಆದರೆ ಆ ವಿಡಿಯೋವನ್ನು ಎಲ್ಲಿಂದ ಅಪ್​ಲೋಡ್​ ಮಾಡಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳಿಗೆ ಅದು ದೆಹಲಿಯಿಂದಲೇ ಅಪ್‌ಲೋಡ್ ಆಗಿದೆ ಎಂಬ ಅನುಮಾನ ಉದ್ಭವಿಸಿದೆ. ಹಾಗಾಗಿ,‌‌‌ ಸಿಡಿ ಹರಿಬಿಟ್ಟ‌ ಗ್ಯಾಂಗ್ ಸದಸ್ಯರ ಪತ್ತೆಗಾಗಿ ತೀವ್ರ ಶೋಧ ಮುಂದುವರೆಸಿದ್ದಾರೆ.

ಸಿಡಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇರೆಗೆ ಎಸ್​ಐಟಿ ತನ್ನ ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸುತ್ತಿದ್ದ ಭವಿತ್, ಅರುಣ್, ಚೇತನ್, ಆಕಾಶ್ ಹಾಗೂ ಸಾಗರ್ ಸೇರಿದಂತೆ ಆರು ಮಂದಿಯನ್ನು ‌ನಿನ್ನೆ ರಾತ್ರಿಯೇ ನೊಟೀಸ್ ನೀಡಿ ಕಳುಹಿಸಲಾಗಿದೆ. ವಿಚಾರಣೆಗೆ ಅಗತ್ಯವಿದ್ದಾಗ ಕರೆಯುವುದಾಗಿ ಸೂಚನೆ ನೀಡಿದ್ದು, ನಗರ ಬಿಟ್ಟು ಎಲ್ಲಿಯೂ ತೆರಳುವಂತಿಲ್ಲಾ ಎಂದು ಎಚ್ಚರಿಕೆ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಬ್ಯಾಂಕ್‌ ಖಾತೆಯಲ್ಲಿ ಸಿಕ್ಕಿದ್ದು 2.28 ರೂಪಾಯಿ!

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಸುದ್ದಿವಾಹಿನಿ ಪತ್ರಕರ್ತನ ಬ್ಯಾಂಕ್ ಅಕೌಂಟ್ ಪರಿಶೀಲನೆ ನಡೆಸಿರುವ ತನಿಖಾಧಿಕಾರಿಗಳಿಗೆ ಒಂದು ಬ್ಯಾಂಕ್ ಖಾತೆಯಲ್ಲಿ 20 ಸಾವಿರ ಹಾಗೂ ಮತ್ತೊಂದು ಬ್ಯಾಂಕ್ ಖಾತೆಯಲ್ಲಿ 2.28 ರೂಪಾಯಿ ಇರುವುದು ಗೊತ್ತಾಗಿದೆ. ಸ್ನೇಹಿತೆಯಿಂದ 30 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದ ಆತ, ಬ್ಯಾಂಕ್​ವೊಂದರಲ್ಲಿ ಸಾಲ ಪಡೆದು ತಿಂಗಳಿಗೆ 5 ಸಾವಿರ ಲೋನ್ ಪಾವತಿ ಮಾಡುತ್ತಿದ್ದ. ಪ್ರಕರಣದಲ್ಲಿ ಹೆಸರಿಸಲಾಗುತ್ತಿರುವ ಇತರರ ನಡುವೆ ಇದುವರೆಗೂ ಫೋನ್ ಕರೆಯಲ್ಲಾಗಲಿ, ವಾಟ್ಸಾಪ್​ನಲ್ಲಿಯಾಗಲಿ ಸಂಪರ್ಕಿಸಿಲ್ಲ ಎಂಬುವುದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಜಾರಕಿಹೊಳಿ ವಿರುದ್ದ ಕ್ರಮಕ್ಕೆ‌ ಒತ್ತಡ

ಮಾ.13 ರಂದು ಸಂತ್ರಸ್ತ ಯುವತಿ ತನಗೆ ಲೈಂಗಿಕ ದೌರ್ಜನ್ಯ ಆಗಿದೆ ಎಂದು ವಿಡಿಯೋವೊಂದರಲ್ಲಿ ಹೇಳಿಕೆ ಕೊಟ್ಟಿದ್ದಳು. ಸ್ಪಷ್ಟವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಆಪಾದನೆ ಮಾಡಿದ್ದರೂ ಎಸ್ಐಟಿ ಮಾತ್ರ ತನ್ನ ಪಾಡಿಗೆ ತನ್ನದೇ ಆದ ರೀತಿಯಲ್ಲಿ ತನಿಖೆ ನಡೆಸುತ್ತಿದೆ ಎಂದು ಸಾರ್ವಜನಿಕರ ವಲಯದಲ್ಲಿ ದೂರುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ:ಸಿದ್ದರಾಮಯ್ಯರನ್ನ ಹೊಗಳಿ, ಸಿಎಂ ಬಿಎಸ್​ವೈಗೆ ಕಿವಿಮಾತು ಹೇಳಿದ ರಮೇಶ್ ಕುಮಾರ್: ವಿಡಿಯೋ

ಈ‌ ಹಿಂದೆ ಜೊಮ್ಯಾಟೋ‌ ಡೆಲಿವರಿ ಬಾಯ್ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಇನ್ಸ್ಟಾಗ್ರಾಂನಲ್ಲಿ ಹಿತೇಶ್ ಚಂದ್ರಾಣಿ ವಿಡಿಯೋ ಹರಿಬಿಟ್ಟಿದ್ದಳು. ಡೆಲಿವರಿ ಬಾಯ್​ನಿಂದ ಹಲ್ಲೆ ನಡೆದಿದೆ ಎಂದ ಕೂಡಲೇ ಹುಡುಕಾಟ ನಡೆಸಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಮಹಿಳೆಯಿಂದ ಎಫ್ ಐ ಆರ್ ಮಾಡಿಸಿ ಬಂಧಿಸಿದ್ದರು‌‌. ಆದರೆ, ಅದೇ ರೀತಿ ತನಗಾದ ಅನ್ಯಾಯದ ಬಗ್ಗೆ ಯುವತಿಯೊಬ್ಬಳು ವಿಡಿಯೋ ಮಾಡಿ ಒಂದು ವಾರ ಕಳೆದರೂ ಪೊಲೀಸರು ಮಾತ್ರ ಮಾಜಿ ಸಚಿವರ ವಿರುದ್ಧ ದೂರನ್ನು ದಾಖಲಿಸಿಲ್ಲ. ಇದು ಏಕೆ ಎಂಬುದಾಗಿ ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಎದ್ದಿದೆ.

Last Updated : Mar 19, 2021, 4:36 PM IST

ABOUT THE AUTHOR

...view details