ಬೆಂಗಳೂರು:ಹಾಪ್ ಕಾಮ್ಸ್ ಮಳಿಗೆಗಳು ಶುಚಿತ್ವದಿಂದ ಕೂಡಿರಬೇಕು, ಸದಾ ಸ್ವಚ್ಚತೆಯನ್ನು ಕಾಪಾಡಿಕೊಂಡಿರಬೇಕು ಎಂದು ತೋಟಗಾರಿಕಾ ಸಚಿವ ಡಾ.ನಾರಾಯಣಗೌಡ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಹಾಪ್ ಕಾಮ್ಸ್ ಮಳಿಗೆಗೆ ದಿಢೀರ್ ಭೇಟಿ ನೀಡಿದ ಸಚಿವ ನಾರಾಯಣ ಗೌಡ! - ಹಾಪ್ ಕಾಮ್ಸ್ ಮಳಿಗೆ
ಹಾಪ್ ಕಾಮ್ಸ್ ಮಳಿಗೆಗೆ ಸಚಿವ ಡಾ. ನಾರಾಯಣ ಗೌಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋವಿಡ್ -19 ಹಿನ್ನೆಲೆಯಲ್ಲಿ ನೀಡಿರುವ ಮಾರ್ಗಸೂಚಿ ಪಾಲನೆ ಆಗಬೇಕು ಎಂದರು
ನಾರಾಯಣ ಗೌಡ
ಆರ್ ಎಂ ವಿ ಬಡಾವಣೆಯಲ್ಲಿರುವ ಹಾಪ್ ಕಾಮ್ಸ್ ಮಳಿಗೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಪ್ ಕಾಮ್ಸ್ ಮಳಿಗೆಯಲ್ಲಿ ಹಣ್ಣು, ತರಕಾರಿ ವಹಿವಾಟು ವಿವರ ಪರಿಶೀಲಿಸಿದರು.
ಹಾಪ್ ಕಾಮ್ಸ್ ಮಳಿಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಕೋವಿಡ್ -19 ಹಿನ್ನೆಲೆಯಲ್ಲಿ ನೀಡಿರುವ ಮಾರ್ಗಸೂಚಿ ಪಾಲನೆ ಆಗಬೇಕು ಎಂದು ಹಾಪ್ ಕಾಮ್ಸ್ ಮಳಿಗೆ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದರು.