ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಬಗ್ಗೆ ಮಾತನಾಡುವ ನೈತಿಕತೆ ಛಲವಾದಿ ನಾರಾಯಣಸ್ವಾಮಿಗೆ ಇಲ್ಲ: ಪುಷ್ಪಾ ಅಮರನಾಥ್ - ಪುಷ್ಪಾ ಅಮರನಾಥ್

ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಬಿಜೆಪಿ ಪಕ್ಷಕ್ಕೆ ಇತ್ತೀಚೆಗೆ ಸೇರಿರುವ ಎಸ್ ಸಿ/ ಎಸ್ ಟಿ ಮೋರ್ಚಾದ ಛಲವಾದಿ ನಾರಾಯಣ ಸ್ವಾಮಿರವರು ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ದಲಿತರ ಮೇಲಿನ ಬದ್ಧತೆಯ ಬಗ್ಗೆ ಚಕಾರ ಎತ್ತುತ್ತಿರುವುದು ಹಾಸ್ಯಾಸ್ಪದ ಎಂದು ಅಭಿಪ್ರಾಯಪಟ್ಟರು.

ಮಹಿಳಾ ಕಾಂಗ್ರೆಸ್​ ಪ್ರತಿಭಟನೆ
ಮಹಿಳಾ ಕಾಂಗ್ರೆಸ್​ ಪ್ರತಿಭಟನೆ

By

Published : Nov 10, 2021, 5:33 AM IST

ಬೆಂಗಳೂರು: ವೈಯಕ್ತಿಕ ಕಾರಣಗಳಿಗಾಗಿ ಪಕ್ಷ ತೊರೆದು ಬಿಜೆಪಿ ಸೇರಿರುವ ನಾರಾಯಣ ಸ್ವಾಮಿ ಅವರಿಗೆ ಸಿದ್ಧರಾಮಯ್ಯರವರ ಬಗ್ಗೆ ಆಗಲಿ ಅಥವಾ ಕಾಂಗ್ರೆಸ್ ಪಕ್ಷದ ಬಗ್ಗೆ ಆಗಲಿ ಮಾತನಾಡುವ ನೈತಿಕತೆಯೇ ಇಲ್ಲ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ತಿಳಿಸಿದ್ದಾರೆ.

ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಬಿಜೆಪಿ ಪಕ್ಷಕ್ಕೆ ಇತ್ತೀಚೆಗೆ ಸೇರಿರುವ ಎಸ್ ಸಿ/ ಎಸ್ ಟಿ ಮೋರ್ಚಾದ ಛಲವಾದಿ ನಾರಾಯಣ ಸ್ವಾಮಿರವರು ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ದಲಿತರ ಮೇಲಿನ ಬದ್ಧತೆಯ ಬಗ್ಗೆ ಚಕಾರ ಎತ್ತುತ್ತಿರುವುದು ಹಾಸ್ಯಾಸ್ಪದ ಎಂದು ಅಭಿಪ್ರಾಯಪಟ್ಟರು.

ಮಹಿಳಾ ಕಾಂಗ್ರೆಸ್ ಪ್ರತಿಭಟನೆ

ಭಾರತ ದೇಶದಲ್ಲಿ 2021ನೇ ವರ್ಷದಲ್ಲಿ ಒಟ್ಟು 3486 ದಲಿತ ಮಹಿಳೆಯರ ಮೇಲೆ ದೌರ್ಜನ್ಯಗಳಾಗಿವೆ. ಹತ್ರಾಸ್‌ನಲ್ಲಿ ದಲಿತ ಯುವತಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಬಾಯಿ ಬಿಡದ ನಾರಾಯಣ ಸ್ವಾಮಿ ಸಿದ್ಧರಾಮಯ್ಯ ಅವರು ನೀಡಿರದ ಹೇಳಿಕೆಯ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅವರ ವಿರುದ್ಧ ಪ್ರತಿಭಟಿಸಿರುವುದು ದುರಂತ. ಅನಂತ್ ಕುಮಾರ್ ಹೆಗ್ಡೆ ‘ಸಂವಿಧಾನವನ್ನು ಬದಲಾಯಿಸಲು ಬಂದಿದ್ದೇವೆ’ ಮತ್ತು 'ಜಾತ್ಯಾತೀತರು ನಾಯಿಗಳು' ಎಂದು ಹೇಳಿದಾಗ, ಸಂಸದ ತೇಜಸ್ವಿ ಸೂರ್ಯ 'ಸಾವರ್ಕರ್ ದೇಶದ್ರೋಹಿಯಾದರೆ ಅಂಬೇಡ್ಕರ್ ಯಾಕಲ್ಲ'? ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದಾಗ ಬಾಯಿ ಮುಚ್ಚಿ ಕುಳಿತಿದ್ದರು ಛಲವಾದಿ ನಾರಾಯಣ ಸ್ವಾಮಿ. ಇಂದು ಅದೇ ಬಿಜೆಪಿ ಪಕ್ಷಕ್ಕೆ ಪಕ್ಷಾಂತರ ಮಾಡಿ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಅಪಪ್ರಚಾರ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.

ಅವರಿಗೆ ಕಿಂಚಿತ್ತಾದರೂ ದಲಿತ ಹೆಣ್ಣುಮಕ್ಕಳು, ದಲಿತ ಸಮುದಾಯದ ಬಗ್ಗೆ ಕಾಳಜಿ ಇದ್ದರೆ ಒಂದು ಕ್ಷಣವೂ ಕೂಡ ಮನುವಾದಿ ಬಿಜೆಪಿ ಪಕ್ಷದಲ್ಲಿ ಇರಲು ಸಾಧ್ಯವೇ ಇಲ್ಲ. ಉನ್ನಾವೋದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅಮಾನುಷವಾಗಿ ಅತ್ಯಾಚಾರ ಮಾಡಿದ ದೂರ್ತರ ವಿರುದ್ಧ, ಉನ್ನಾವೋ ದಲಿತ ಯುವತಿಯ ಪ್ರಕರಣ, ದೇಶದಾದ್ಯಂತ ಆದಿವಾಸಿಗಳ ಬದುಕು ಹಾಳುಮಾಡಿ ಐಪಿಸಿ 124 ರಡಿ ದೇಶದ್ರೋಹಿಗಳು ಎಂದು ಬಂಧಿಸುತ್ತಿರುವ ಸರ್ಕಾರದ ಕುರಿತು ಕಿಂಚಿತ್ತೂ ಬಿಜೆಪಿ ದಲಿತ ಮುಖಂಡರು ಮಾತನಾಡುತ್ತಿಲ್ಲ. ನಾರಾಯಣ ಸ್ವಾಮಿ ಅವರು ನಿರಂತರವಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ನೀಡುತ್ತಿರುವ ಅಸಂಬದ್ಧ, ಅಪ್ರಬುದ್ಧ ಹೇಳಿಕೆಯನ್ನು ಮಹಿಳಾ ಕಾಂಗ್ರೆಸ್ ಖಂಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಕ್ಷಮೆ ಕೇಳಲಿ

ಛಲವಾದಿ ನಾರಾಯಣ ಸ್ವಾಮಿಯವರಿಗೆ ಈ ಮೂಲಕ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ನಾಯಕರ ಬಗ್ಗೆ ಆಗಲಿ, ಸಿದ್ಧರಾಮಯ್ಯ ರವರ ಬಗ್ಗೆ ಆಗಲಿ ನೀಡಿರುವ ಈ ಹೇಳಿಕೆ ಸಂಬಂಧ ಕ್ಷಮೆ ಯಾಚಿಸದಿದ್ದಲ್ಲಿ ಅವರಿಗೆ ಮಹಿಳಾ ಕಾಂಗ್ರೆಸ್ ತಕ್ಕ ಉತ್ತರ ನೀಡಲಿದೆ. ನಾರಾಯಣ ಸ್ವಾಮಿಯವರು ಕುಲಕ್ಕೆ ಕೊಡಲಿ ಕಾವಾಗಿದ್ದಾರೆ. ತಮ್ಮ ಸಮುದಾಯದವರ ವಿರುದ್ಧ ಆಗುತ್ತಿರುವ ನಿರಂತರ ದೌರ್ಜನ್ಯ, ಅತ್ಯಾಚಾರ, ದಬ್ಬಾಳಿಕೆಗಳನ್ನು ಖಂಡಿಸದೆ ಕೇವಲ ಅಧಿಕಾರದ ಆಸೆ ಹಾಗು ಹಣದ ಆಸೆಗಾಗಿ ಬಿಜೆಪಿ ಪಕ್ಷದಲ್ಲಿದ್ದು ಎಲ್ಲರಿಗೂ ವಂಚಿಸುತ್ತಿದ್ದಾರೆ.

ನಾರಾಯಣ ಸ್ವಾಮಿಯವರ ಮುಖವಾಡ ಎಲ್ಲಾ ಹಿಂದುಳಿದ, ತುಳಿತಕ್ಕೊಳಗಾದ ಸಮುದಾಯಗಳಿಗೆ ತಿಳಿದಿದೆ. ಛಲವಾದಿ ನಾರಾಯಣ ಸ್ವಾಮಿ ಒಬ್ಬ ಪಕ್ಷಾಂತರಿ ಮಾತ್ರವಲ್ಲ ಅವರದ್ದೇ ಪಕ್ಷದ ಚಿ.ನಾ. ರಾಮು ಆರೋಪಿಸಿದಂತೆ ಮತಾಂತರಿಯೂ ಹೌದು. ಛಲವಾದಿ ನಾರಾಯಣಸ್ವಾಮಿ ಬಿಜೆಪಿ ಮನುವಾದಿಗಳ ದಾಳವಾಗಿದ್ದಾರೆ. ತಮ್ಮ ಹೆಸರ ಮುಂದೆ ಛಲವಾದಿ ಅಂತ ಸೇರಿಸಿಕೊಂಡ ಮಾತ್ರಕ್ಕೆ ಛಲವಾದಿ ಅಗಲ್ಲ. ಛಲವಾದಿಗಳು ಯಾರೂ ಸಹ ಕೋಮುವಾದಿಗಳ ಗುಲಾಮರಾಗಿ ವರ್ತಿಸುವುದಿಲ್ಲ‌. ಆದ್ದರಿಂದ ಅವರು ತಮ್ಮ ಹೆಸರ ಮುಂದೆ ಅವಕಾಶವಾದಿ ನಾರಾಯಣಸ್ವಾಮಿ ಅಂತ ಸೇರಿಸಿಕೊಂಡರೆ ಸೂಕ್ತ. ಏಕೆಂದರೆ, ಇವರು ಆರ್ ಎಸ್ ಎಸ್ ಕೈಗೊಂಬೆಯಾಗಿದ್ದು ಅವರು ಹೇಳಿಕೊಟ್ಟಂತೆ ಇವರು ವರ್ತಿಸುತ್ತಿದ್ದಾರೆ. ಸ್ವಂತ ಬುದ್ಧಿ ಇಲ್ಲದ ನಾರಾಯಣಸ್ವಾಮಿ ಅವರ ಬಗ್ಗೆ ನಮಗೆ ಅನುಕಂಪ ಇದೆ. ಅವರ ಹೇಳಿಕೆಯನ್ನು ಖಂಡಿಸುತ್ತಾ ಮಹಿಳಾ ಕಾಂಗ್ರೆಸ್ ಈ ಮೂಲಕ ಬಿಜೆಪಿ ಪಕ್ಷದಲ್ಲಿರುವ ಸ್ವಾರ್ಥ ತುಂಬಿರುವ ದಲಿತ ಮುಖಂಡರುಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸುತ್ತಿದೆ. ಬಿಟ್‌ಕಾಯಿನ್ ಅಕ್ರಮದಲ್ಲಿ ಬಿಜೆಪಿಯ ಪ್ರಭಾವಿ ನಾಯಕರು ಮತ್ತು ಅವರ ಮಕ್ಕಳ ಹೆಸರು ಬಹಿರಂಗವಾಗುವ ಭೀತಿಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಸಿದ್ದರಾಮಯ್ಯ ಅವರ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನು ಓದಿ:ಜಿಟಿಡಿ ಉಳಿಸಿಕೊಳ್ಳಲು ಹೆಚ್‌ಡಿಡಿ, ಹೆಚ್​ಡಿಕೆ ಯತ್ನ: ಸಿದ್ದರಾಮಯ್ಯ

ABOUT THE AUTHOR

...view details