ಬೆಂಗಳೂರು : ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಕಿಡಿ ಕಾರಿದ್ದಾರೆ.
ನಾಳೆ ತಮಿಳು, ತೆಲುಗಿನವರು ಪ್ರಾಧಿಕಾರ ಕೇಳಿದ್ರೆ, ರಚಿಸಿ ಕೊಡ್ತೀರಾ : ಸರ್ಕಾರದ ವಿರುದ್ಧ ಕರವೇ ರಾಜ್ಯಾಧ್ಯಕ್ಷರು ಕಿಡಿ - ಮರಾಠ ಪ್ರಾಧಿಕಾರ ರಚನೆಗೆ ರಾಜ್ಯ ಸರ್ಕಾರ ನಿರ್ಧಾರ
ಬೆಂಗಳೂರಿನಲ್ಲಿ ತಮಿಳು, ತೆಲುಗು ಮತ್ತು ಮಾರ್ವಾಡಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾಳೆ ಅವರೂ ಪ್ರಾಧಿಕಾರ ಕೇಳಿದ್ರೆ ರಚಿಸಿ ಕೊಡ್ತೀರಾ ಎಂದು ಕರವೇ ರಾಜ್ಯಾಧ್ಯಕ್ಷ ಸರ್ಕಾರವನ್ನು ಪ್ರಶ್ನಿಸಿದ್ದಾರೆ..

ವೋಟ್ ಬ್ಯಾಂಕ್ಗೋಸ್ಕರ ಮರಾಠ ಅಭಿವೃದ್ದಿ ಪ್ರಾಧಿಕಾರ ರಚನೆ ಮಾಡಿದ್ದೀರಿ. ಮುಂದೆ ಬಿಬಿಎಂಪಿ ಚುನಾವಣೆ ಬರುತ್ತೆ, ಇಲ್ಲಿ ತಮಿಳರು, ತೆಲುಗಿನವರು ಮತ್ತು ಮಾರ್ವಾಡಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾಳೆ ಅವರು ಪ್ರಾಧಿಕಾರ ಕೇಳ್ತಾರೆ, ಅವರಿಗೂ ಪ್ರಾಧಿಕಾರ ರಚಿಸಿ ಕೊಡ್ತೀರಾ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕನ್ನಡ ಅಭಿವೃದ್ಧಿಗೆ 5 ಕೋಟಿ ಕೊಟ್ಟಿದ್ದೀರಿ, ಮರಾಠ ಪ್ರಾಧಿಕಾರಕ್ಕೆ 50 ಕೋಟಿ ಕೊಟ್ಟಿದ್ದೀರಿ. ಹೀಗೆ ಅನ್ಯಾಯ ಮಾಡಿ ಕನ್ನಡಿಗರ ಸ್ವಾಭಿಮಾನ ಕೆರಳಿಸಬೇಡಿ. ಈ ಕೂಡಲೇ ಮರಾಠ ಪ್ರಾಧಿಕಾರ ರಚನೆಯನ್ನು ಕೈಬಿಡಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಕರವೇ ವತಿಯಿಂದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.