ಕರ್ನಾಟಕ

karnataka

ETV Bharat / state

ಕೆ ಸಿ ನಾರಾಯಣಗೌಡ ಬೆಂಬಲಿಗರಿಂದ ಸಭೆ... ಶಾಸಕರ ಗೈರು ಹಾಜರಿಗೆ ಸಮಜಾಯಿಸಿ - ಬಜೆಟ್

ನಾಳಿನ ಬಜೆಟ್​ನಲ್ಲಿ ತೀವ್ರ ಕುತೂಹಲವಿದ್ದು, ಅತೃಪ್ತ ಶಾಸಕರು ಈ ಅಧಿವೇಶನದಲ್ಲಿ ಭಾಗಿಯಾಗುತ್ತಾರಾ ಇಲ್ಲವಾ ಎಂಬ ಆತಂಕ ಜೆಡಿಎಸ್​ ಹಾಗೂ ಕಾಂಗ್ರೆಸ್​ ಮುಖಂಡರಲ್ಲಿ ಇದೆ

ನಾರಾಯಣಗೌಡ

By

Published : Feb 7, 2019, 6:42 PM IST

ಮಂಡ್ಯ: ಬಜೆಟ್ ಅಧಿವೇಶನಕ್ಕೆ ಶಾಸಕ ಕೆ.ಸಿ.ನಾರಾಯಣಗೌಡ ಗೈರಾಗುತ್ತಾರಾ ಎನ್ನುವ ಅನುಮಾನಕ್ಕೆ ಶಾಸಕರ ಬೆಂಬಲಿಗರು ಸಮಜಾಯಿಸಿ ನೀಡಿದ್ದಾರೆ.

ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರಲ್ಲಿ ನಡೆಯುತ್ತಿರುವ ನಾರಾಯಣಗೌಡರ ಬೆಂಬಲಿಗರ ಸಭೆಯಲ್ಲಿ, ಅವ್ರು ಎಲ್ಲೂ ಹೋಗಿಲ್ಲ, ಯಾವುದೇ ಆಪರೇಷನ್ ಕಮಲಕ್ಕೂ ಸಿಲುಕಿಲ್ಲ ಅಂತ ಬೆಂಬಲಿಗರು ಸಮಜಾಯಿಷಿ ನೀಡಿದ್ದಾರೆ.

ಬೆಂಬಲಿಗರ ಸಭೆಯಲ್ಲಿ ತಾಲೂಕಿನ ಜೆಡಿಎಸ್​ ಕಾರ್ಯಕರ್ತರಿಗೆ ಧೈರ್ಯ ತುಂಬಿದ ಆಪ್ತ ಬೆಂಬಲಿಗರು, ಅನಾರೋಗ್ಯದ ನಿಮಿತ್ತ ಹೊರಗೆ ಇದ್ದಾರೆ ಅಷ್ಟೆ ಎಂದಿದ್ದಾರೆ. ಜೆಡಿಎಸ್ ಪಕ್ಷದ ನಿಷ್ಠಾವಂತ ನಾಯಕರು. ಇದೆಲ್ಲಾ ಕೇವಲ ಅಪ ಪ್ರಚಾರ, ಇದಕ್ಕೆ ಕಿವಿಕೊಡಬೇಡಿ. ನಾಳೆ ಬಜೆಟ್ ಮಂಡನೆಗೆ ನಾರಾಯಣ ಗೌಡ್ರು ಬರುತ್ತಾರೆ ಎಂದು ತಿಳಿಸಿದ್ದಾರೆ.

ಆಡಿಯೋ ವೈರಲ್:
ಜೆಡಿಎಸ್ ಕಾರ್ಯಕರ್ತ ನವೀನ್ ಎಂಬಾತ ನಾರಾಯಣ ಗೌಡರಿಗೆ ಕರೆ ಮಾಡಿ, ಮಾಧ್ಯಮಗಳಿಗೆ ಉತ್ತರ ನೀಡುವಂತೆ ಮನವಿ ಮಾಡಿಕೊಂಡಿರುವ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ಆಡಿಯೋದಲ್ಲಿ ಶಾಸಕರು ಪ್ರತಿಕ್ರಿಯೆ ನೀಡಿದ್ದು, ತಮಗೆ ಫುಡ್​ ಪಾಯ್ಸನ್​ ಅಗಿದೆ ಎಂದು ತಿಳಿಸಿದ್ದಾರೆ ಎನ್ನಲಾಗ್ತಿದೆ.

ABOUT THE AUTHOR

...view details