ಕರ್ನಾಟಕ

karnataka

ETV Bharat / state

ಡಿ.ಕೆ.ಶಿವಕುಮಾರ್ ಭೇಟಿಯಾದ ನಂಜಾವಧೂತ ಸ್ವಾಮೀಜಿ: ಭಾವುಕರಾದ ಡಿಕೆಶಿ

ಸ್ವಾಮೀಜಿ ಜೊತೆ ಮಾತಾನಾಡುವಾಗ ಡಿಕೆಶಿ ಭಾವುಕರಾಗಿ, ಸಿಬಿಐ ಅಧಿಕಾರಿಗಳು ತನ್ನ ಆಪ್ತರಿಗೆ ಹಾಗೂ ತನ್ನ ಪಿಎ ಮೇಲೆ ಹಲ್ಲೆ ಮಾಡಿದ್ದಾರೆ. ಇದು ನಿಜಕ್ಕೂ ಖಂಡನೀಯ. ಈ ರೀತಿ ಸರ್ಕಾರ ಹೇಳಿದ ಹಾಗೆ ಮಾಡುವುದು ತಪ್ಪು ಎಂದು ನೋವು ತೋಡಿಕೊಂಡಿದ್ದಾರೆ.

ಡಿ.ಕೆ.ಶಿವಕುಮಾರ್ ಭೇಟಿಯಾದ ನಂಜಾವದೂತ ಸ್ವಾಮೀಜಿ
ಡಿ.ಕೆ.ಶಿವಕುಮಾರ್ ಭೇಟಿಯಾದ ನಂಜಾವದೂತ ಸ್ವಾಮೀಜಿ

By

Published : Oct 6, 2020, 10:14 AM IST

Updated : Oct 6, 2020, 11:42 AM IST

ಬೆಂಗಳೂರು:ನಿನ್ನೆ ಡಿಕೆ ಸಹೋದರರ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ ಹಿನ್ನೆಲೆ ನಂಜಾವಧೂತ ಸ್ವಾಮೀಜಿ ಡಿ.ಕೆ.ಶಿವಕುಮಾರ್​ ಅವರನ್ನು ಭೇಟಿ ಮಾಡಿದ್ದರು.

ಈ ವೇಳೆ ಮಾತನಾಡಿದ ಡಿಕೆಶಿ ಸರ್ಚ್ ವಾರೆಂಟ್ ತಂದಿದ್ದರು. ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಹಾಗೆಯೇ ನನ್ನ ತಮ್ಮನ ಮನೆ ಮೇಲೆ ಸಹ ಸಿಬಿಐ ರೇಡ್ ಮಾಡಿದ್ದಾರೆ. ಬಿಜೆಪಿ ಪಕ್ಷದಲ್ಲಿ ಸಹ ಭ್ರಷ್ಟರು ಇದ್ದಾರೆ. ಆದರೆ ನಮ್ಮನ್ನ ಟಾರ್ಗೆಟ್ ಮಾಡ್ತಿದ್ದಾರೆ. ಬೈ ಎಲೆಕ್ಷನ್ ಅಭ್ಯರ್ಥಿ ಘೋಷಣೆ ಹೈಕಮಾಂಡ್ ಮಾಡುತ್ತೆ ಎಂದು ಸ್ವಾಮೀಜಿ ಬಳಿ ಅಸಮಾಧಾನ ಹೊರಹಾಕಿದರು.

ಸ್ವಾಮೀಜಿ ಜೊತೆ ಮಾತಾನಾಡುವಾಗ ಡಿಕೆಶಿ ಭಾವುಕರಾಗಿ, ಸಿಬಿಐ ಅಧಿಕಾರಿಗಳು ತನ್ನ ಆಪ್ತರಿಗೆ ಹಾಗೂ ತನ್ನ ಪಿಎ ಮೇಲೆ ಹಲ್ಲೆ ಮಾಡಿದ್ದಾರೆ. ಇದು ನಿಜಕ್ಕೂ ಖಂಡನೀಯ. ಈ ರೀತಿ ಸರ್ಕಾರ ಹೇಳಿದ ಹಾಗೆ ಮಾಡುವುದು ತಪ್ಪು ಎಂದು ನೋವು ತೋಡಿಕೊಂಡಿದ್ದಾರೆ.

ಡಿ.ಕೆ.ಶಿವಕುಮಾರ್ ಭೇಟಿಯಾದ ನಂಜಾವಧೂತ ಸ್ವಾಮೀಜಿ

ಇದೇ ವೇಳೆ ಸಮನ್ಸ್​ ಬಂದಿದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ, ನಾನು ಸಿಬಿಐ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.

Last Updated : Oct 6, 2020, 11:42 AM IST

ABOUT THE AUTHOR

...view details