ಕರ್ನಾಟಕ

karnataka

ETV Bharat / state

ನಂದಿನಿ ಹಾಲಿನ‌ ಪ್ಯಾಕೆಟ್ ದರ ಏರಿಕೆ ಸಾಧ್ಯತೆ: ಸರ್ಕಾರಕ್ಕೆ ಕೆಎಂಎಫ್ ಪ್ರಸ್ತಾವನೆ

ನಂದಿನಿ ಹಾಲಿನ ಪಾಕೆಟ್ ದರ ಏರಿಕೆ ಸಂಬಂಧ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

Nandini
ನಂದಿನಿ

By

Published : Aug 29, 2022, 8:21 PM IST

ಬೆಂಗಳೂರು: ಇಂಧನ ದರ ಏರಿಕೆ, ಖಾದ್ಯ ತೈಲ ದರ ಏರಿಕೆಯಿಂದಾಗಿ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಶಾಕ್ ಕಾದಿದ್ದು, ಶೀಘ್ರದಲ್ಲೇ ನಂದಿನಿ ಹಾಲಿನ ದರ ಕೂಡ ಏರಿಕೆಯಾಗಲಿದೆ. ಈ ಬಗ್ಗೆ ಸೋಮವಾರ ಕರ್ನಾಟಕ ಹಾಲು ಒಕ್ಕೂಟ ನಿರ್ದೇಶಕ ಸತೀಶ್ ಮಾತನಾಡಿ, ಹಾಲಿನ ಪಾಕೆಟ್ ದರ ಹೆಚ್ಚಳಕ್ಕೆ 14 ಜಿಲ್ಲೆಗಳ ಹಾಲಿನ ಒಕ್ಕೂಟದವರು ಒತ್ತಾಯ ಮಾಡುತ್ತಿದ್ದಾರೆ. ದರ ಹೆಚ್ಚಳ ಮಾಡಿದರೆ ಅದನ್ನು ರೈತರಿಗೆ ನೀಡುತ್ತೇವೆ ಎಂದು ತಿಳಿಸಿದರು.

ಕೆಎಂಎಫ್ ಎಂಡಿ ಸತೀಶ್ ಮಾಧ್ಯಮದೊಂದಿಗೆ ಮಾತನಾಡಿದರು

ಈ ಸಂಬಂಧ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಾಧಕ ಬಾಧಕ ನೋಡಿದ ಬಳಿಕ ನಿರ್ಧಾರ ತಗೆದುಕೊಳ್ಳೋಣ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ ಎಂದು ಸತೀಶ್ ಹೇಳಿದರು.

ಗ್ರಾಹಕರಿಗೆ ಸಣ್ಣ ಹೊರೆ:ಪ್ರಸ್ತುತ ಪ್ರತೀ ಲೀಟರ್ ಹಾಲಿನ ಪಾಕೆಟ್ ದರ 37 ರೂ. ಇದ್ದು, ಸರ್ಕಾರ ಒಪ್ಪಿದರೆ 40 ರೂ ಆಗಲಿದೆ. ಹೀಗಾಗಿ ಗ್ರಾಹಕರಿಗೆ ಸಣ್ಣ ಹೊರೆಯಾದರೂ ಆ ದರವನ್ನು ಕಷ್ಟದಲ್ಲಿರುವ ಹಾಲು ಉತ್ಪಾದಕರಿಗೆ ನೀಡಲಾಗುತ್ತದೆ. ದರ ಹೆಚ್ಚಿಗೆಗೆ ಗ್ರಾಹಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಇದನ್ನೂ ಓದಿ :ಹಾಲಿನ ಉತ್ಪನ್ನಗಳ ಮೇಲಿನ ದರ ಹೆಚ್ಚಳದಿಂದ ಜನಾಕ್ರೋಶ... ಕೊಂಚ ಇಳಿಕೆ ಮಾಡಿ ಕೆಎಂಎಫ್ ಎಂಡಿ ಆದೇಶ!

ABOUT THE AUTHOR

...view details