ಕರ್ನಾಟಕ

karnataka

ETV Bharat / state

ಗ್ರಾಹಕರಿಗೆ ಶಾಕ್​ ಕೊಟ್ಟ ಕೆ.ಎಂ.ಎಫ್​: ಫೆ.1 ರಿಂದ ನಂದಿನಿ ಹಾಲು, ಮೊಸರಿನ ದರ ಏರಿಕೆ - ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾದ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆ ಪ್ರಸ್ತಾವನೆಗೆ ಸಮ್ಮತಿ ಪಡೆದಿದ್ದಾರೆ. ಈ ಹಿನ್ನೆಲೆ ಫೆಬ್ರವರಿ 1ರಿಂದ ಜಾರಿಯಾಗುವಂತೆ ಹಾಲು ಮತ್ತು ಮೊಸರಿನ ದರ 2 ರೂ. ಹೆಚ್ಚಳವಾಗಲಿದೆ. ಒಂದು ದಿನ ಮುನ್ನವೇ ಮಾರುಕಟ್ಟೆಗೆ ಹಾಲಿನ ಪ್ಯಾಕೆಟ್ ಆಗಮಿಸುವ ಹಿನ್ನೆಲೆ ಹೊಸ ದರ ಜನವರಿ 31ರ ಸಂಜೆಯಿಂದಲೇ ಅನ್ವಯವಾಗಲಿದೆ.

KMF President Balachandra Jarakiholi
ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

By

Published : Jan 30, 2020, 6:10 PM IST

Updated : Jan 30, 2020, 8:10 PM IST

ಬೆಂಗಳೂರು: ನಂದಿನಿ ಹಾಲು ಹಾಗೂ ಮೊಸರಿನ ದರ ಏರಿಸಲು ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಗ್ರಾಹಕರಿಗೆ ಶಾಕ್​ ನೀಡಿದೆ. ಪ್ರತಿ ಲೀಟರ್ ಹಾಲು ಹಾಗೂ ಮೊಸರಿನ ಬೆಲೆಯನ್ನು 2 ರೂಪಾಯಿ ಹೆಚ್ಚಳ ಆಗಲಿದೆ. ನೂತನ ದರ ಫೆ.1 ರಿಂದ ಜಾರಿಗೆ ಬರಲಿದೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾದ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬೆಲೆ ಏರಿಕೆ ಪ್ರಸ್ತಾವನೆಗೆ ಸಮ್ಮತಿ ಪಡೆದಿದ್ದಾರೆ. ಈ ಹಿನ್ನೆಲೆ ಫೆಬ್ರವರಿ 1ರಿಂದ ಜಾರಿಯಾಗುವಂತೆ ಹಾಲು-ಮೊಸರಿನ ದರ ಹೆಚ್ಚಳವಾಗಲಿದೆ. ಒಂದು ದಿನ ಮುನ್ನವೇ ಮಾರುಕಟ್ಟೆಗೆ ಹಾಲಿನ ಪ್ಯಾಕೆಟ್ ಆಗಮಿಸುವ ಹಿನ್ನೆಲೆ ಹೊಸ ದರ ಜನವರಿ 31ರ ಸಂಜೆಯಿಂದಲೇ ಅನ್ವಯವಾಗಲಿದೆ.

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ದರ ಹೆಚ್ಚಳದ ಬಗ್ಗೆ ಸ್ಪಷ್ಟಪಡಿಸಿದ್ದು, ಹಾಲಿನ ದರ ಹೆಚ್ಚಳ ಅನಿವಾರ್ಯವಾಗಿತ್ತು. ಪ್ರತಿ ಲೀಟರ್​ಗೆ ನಾಲ್ಕು ರೂ. ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇತ್ತು. ಆದರೆ, ಜನರ ಮೇಲೆ ಹೆಚ್ಚಿನ ಹೊರೆಯಾಗಬಾರದು ಹಾಗೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 2 ರೂಪಾಯಿ ಮಾತ್ರ ಹೆಚ್ಚಿಸಲಾಗಿದೆ. ಇನ್ನು ಹಾಲಿನ ದರ ಲೀಟರ್​ಗೆ ಮೂರು ರೂ. ಹೆಚ್ಚಿಸಲು ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿತ್ತು. ಸರ್ಕಾರ ಎರಡು 2 ರೂ. ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಿದ್ದು, ಹೊಸ ದರ ಫೆ.1ರಿಂದಲೇ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.

Last Updated : Jan 30, 2020, 8:10 PM IST

ABOUT THE AUTHOR

...view details