ಕರ್ನಾಟಕ

karnataka

ETV Bharat / state

ಭೋಜನ ಪ್ರಿಯರಿಗೆ ಬಾಯಿ ಚಪ್ಪರಿಸುವ ಸುದ್ದಿ... ಬೊಮ್ಮಸಂದ್ರದಲ್ಲಿ ಆಂಧ್ರ ಶೈಲಿ ಊಟ..! - ಬೆಂಗಳೂರು-ಹೊಸೂರು ಹೆದ್ದಾರಿಯ ಬೊಮ್ಮಸಂದ್ರ

ಬೆಂಗಳೂರು- ಹೊಸೂರು ಹೆದ್ದಾರಿಯ ಬೊಮ್ಮಸಂದ್ರದಲ್ಲಿ ನೂತನವಾಗಿ ತೆರೆಯಲಾದ ನಂದನ ಪ್ಯಾಲೇಸ್ ಹೋಟಲ್​ಗೆ ಶಾಸಕ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. ಆಂಧ್ರ ಶೈಲಿಯ ಆಹಾರ ಖಾದ್ಯಗಳು ಈ ಹೋಟೆಲ್​ನಲ್ಲಿ ದೊರೆಯಲಿದೆ.

ರಾಮಲಿಂಗಾ ರೆಡ್ಡಿ

By

Published : Nov 15, 2019, 2:30 AM IST

Updated : Nov 15, 2019, 7:17 AM IST

ಆನೇಕಲ್:ಆಂಧ್ರ ಶೈಲಿಯ ಆಹಾರ ಬಯಸುವವರಿಗೆ ಬೆಂಗಳೂರು-ಹೊಸೂರು ಹೆದ್ದಾರಿಯ ಬೊಮ್ಮಸಂದ್ರದಲ್ಲಿ ನಂದನ ಪ್ಯಾಲೇಸ್ ಹೋಟೆಲ್​ ತೆರೆಯಲಾಗಿದೆ.

ಮಾಜಿ ಸಚಿವ/ ಶಾಸಕ ರಾಮಲಿಂಗರೆಡ್ಡಿ ಅವರು ನಂದನ ಪ್ಯಾಲೇಸ್​ ಹೋಟೆಲ್ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಆನೇಕಲ್ ಭಾಗದಲ್ಲಿ ತೆರೆಯಲಾದ ನಂದನ ಪ್ಯಾಲೇಸ್​​ ಹೋಟೆಲ್​ನಲ್ಲಿ ಅಪ್ಪಟ ಆಂಧ್ರ ಶೈಲಿಯ ಆಹಾರ ಖಾದ್ಯಗಳು ಲಭ್ಯವಾಗಲಿವೆ. ನಗರದ ಬೇರೆ ರೆಸ್ಟೊರೆಂಟ್​ಗಳಿಗಿಂತ ಇಲ್ಲಿನ ಆಹಾರ ಭಿನ್ನವಾಗಿರಲಿದೆ ಎಂದರು.

ನಂದನ ಪ್ಯಾಲೇಸ್ ಹೋಟೆಲ್ ಉದ್ಘಾಟಿಸಿದ ಶಾಸಕ ರಾಮಲಿಂಗಾ ರೆಡ್ಡಿ

ವಿಶೇಷ ಖಾದ್ಯಗಳಾದ ಮಾಂಸ ಇಗುರು, ನೆಲ್ಲೂರು ಚಾಪಲ ಪುಲುಸು, ಗುಂಟೂರು ಮಿರಪ್ಪಕಾಯ್ ವೇಪುಡು, ನಾಟಿ ಕೋಳಿ ಕೂರ, ಚಿಕನ್ ಕ್ಷತ್ರಿಯ, ಗೊಂಗೂರ ಮಾಂಸಂ, ನಂದನ ಚಿಕನ್ ರೋಸ್ಟ್ ಮೊದಲಾದ ಸಿಗ್ನೆಚರ್ ತಿನಿಸುಗಳು ಭೋಜನ ಪ್ರಿಯರಿಗೆ ಸಿಗಲಿವೆ.

ಮಾಂಸಾಹಾರದಂತೆ ಸಸ್ಯಾಹಾರ ಪದಾರ್ಥಗಳು ಸಹ ನಂದನ ಪ್ಯಾಲೇಸ್‍ನಲ್ಲಿ ಲಭ್ಯವಿದೆ. ಆಂಧ್ರದ ದೋಸಾ ಟ್ವಿಸ್ಟ್, ಪರೋಟಾ ವಿತ್ ಟಚ್ ಆಫ್ ಆಂಧ್ರ, ಟ್ವಿಸ್ಟ್ ಆಫ್ ಮಾಕ್‍ಟೇಲ್ಸ್, ತೆಲುಗು ಕ್ಯಾಪಿಟಲ್ ಸ್ಪೆಷಲ್ಸ್, ವೆಜ್ ಸ್ಪೆಷಲ್, ಆಂಧ್ರ ನಾನ್‍ವೆಜ್ ಸಿಸ್ಲರ್, ಸ್ಪೈಸಿ ಸೂಪ್ ಸಹ ದೊರೆಯಲಿವೆ.

Last Updated : Nov 15, 2019, 7:17 AM IST

ABOUT THE AUTHOR

...view details