ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಅನ್ಲಾಕ್ ಮಾಡಿದರೂ ಸಹ ವಾರಾಂತ್ಯದ ಲಾಕ್ಡೌನ್ ಮುಂದುವರಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ವೀಕೆಂಡ್ ಲಾಕ್ಡೌನ್ ಇರುವುದರಿಂದ ಇಂದು ಸಂಜೆಯಿಂದಲೇ ಮೆಟ್ರೋ ಸಂಚಾರ ಸ್ಥಗಿತವಾಗಲಿದೆ. ಇಂದು ಸಂಜೆ 6 ರಿಂದಲೇ ನಮ್ಮ ಮೆಟ್ರೋ ಓಡಾಟ ಸ್ಥಗಿತವಾಗಲಿದ್ದು, ಹಸಿರು ಹಾಗೂ ನೇರಳೆ ಮಾರ್ಗದಲ್ಲಿ ಇಂದು ಸಂಜೆ 6 ರಿಂದ ಸೋಮವಾರ ಬೆಳಗ್ಗೆ 7 ವರಿಗೆ ಮೆಟ್ರೋ ಓಡಾಟ ಇರುವುದಿಲ್ಲ. ಈ ಕುರಿತು ಬಿಎಂಆರ್ಸಿ ಎಲ್ನ ಹಿರಿಯ ಸಂಪರ್ಕಾಧಿಕಾರಿ ಯಶವಂತ್ ಚೌಹಾಣ್ ಮಾಹಿತಿ ನೀಡಿದ್ದಾರೆ.
500 -1000 ಬಸ್ ಓಡಿಸಲು ಕೆಎಸ್ಆರ್ಟಿಸಿ ಪ್ಲ್ಯಾನ್:
ವೀಕೆಂಡ್ ಕರ್ಫ್ಯೂ ಇದ್ದರೂ ನಾಳೆ, ನಾಡಿದ್ದು ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಕೆಎಸ್ಆರ್ಟಿಸಿ ಬಸ್ಸುಗಳು ಕಾರ್ಯಾಚರಣೆ ಮಾಡಲು ಪ್ಲ್ಯಾನ್ ಮಾಡಲಾಗಿದೆ. 500 ರಿಂದ 1000 ಬಸ್ಸುಗಳು ಕಾರ್ಯಾಚರಣೆ ಮಾಡಲಿವೆ. ಎಂದಿನಂತೆ ಬೆಳಗ್ಗೆ ಹಾಗೂ ರಾತ್ರಿ ಬಸ್ಸುಗಳ ಕಾರ್ಯಾಚರಣೆ ಇರಲಿದ್ದು, ಸದ್ಯ ದಿನಕ್ಕೆ 2 ಸಾವಿರಕ್ಕೂ ಹೆಚ್ಚು ಬಸ್ಸುಗಳು ಸಂಚರಿಸಲಿವೆ. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಪ್ರಯಾಣಿಕರ ಸಂಖ್ಯೆ ವಿರಳ ಸಾಧ್ಯತೆ ಹಿನ್ನೆಲೆ ಬಸ್ಸುಗಳ ಸಂಖ್ಯೆಯನ್ನ ಕಡಿಮೆ ಮಾಡಲಾಗುತ್ತಿದೆ.