ಬೆಂಗಳೂರು:ರಾಜ್ಯ ರಾಜಧಾನಿಯ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಗುರುವಾರ ಬೆಳಗ್ಗೆಯಿಂದ ನೇರಳೆ ಮಾರ್ಗದ ಮೈಸೂರು ರಸ್ತೆ - ಕೆಂಗೇರಿ ಮಾರ್ಗದಲ್ಲಿನ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯ ಆಗಿತ್ತು.
ಪ್ರತಿ 25ರಿಂದ 30 ನಿಮಿಷಕ್ಕೊಂದು ರೈಲುಗಳು ಓಡುತ್ತಿವೆ. ಅದರಲ್ಲೂ ತಾಂತ್ರಿಕ ತೊಂದರೆ ಕಾರಣ ಒಂದೇ ಹಳಿಯಲ್ಲಿ ರೈಲುಗಳು ಸಂಚಾರ ನಡೆಸುತ್ತಿವೆ. ಪ್ರಸ್ತುತ ರೈಲುಗಳು ಬೈಯಪ್ಪನಹಳ್ಳಿ - ಮೈಸೂರು ರಸ್ತೆ ತನಕ ಯಾವುದೇ ಅಡೆತಡೆ ಇಲ್ಲದೇ ಸಂಚಾರ ನಡೆಸುತ್ತಿವೆ. ರೈಲುಗಳಿಗೆ ಕಾಯಬೇಕಾದ ಪರಿಸ್ಥಿತಿ ಉಂಟಾಗಿರುವುದರಿಂದ ಪೀಕ್ ಅವರ್‌ನಲ್ಲಿ ಜನರಿಗೆ ತೊಂದರೆ ಉಂಟಾಗಿದೆ ಎಂದಿದೆ.
ಬಿಎಂಆರ್‌ಸಿಎಲ್ ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳು ಸ್ಥಳಕ್ಕೆ ಆಗಮಿಸಿದ್ದಾರೆ. ತಾಂತ್ರಿಕ ದೋಷ ಸರಿಪಡಿಸಲು ತಜ್ಞರ ತಂಡ ಪ್ರಯತ್ನ ನಡೆಸಿದೆ. ಅಲ್ಲಿಯವರೆಗೂ ಒಂದೇ ಹಳಿಯಲ್ಲಿ ಮೈಟ್ರೋ ರೈಲುಗಳು ಸಂಚಾರ ನಡೆಸಲಿವೆ ಎಂಬ ಮಾಹಿತಿ ಲಭ್ಯವಾಗಿದೆ.
ತಾಂತ್ರಿಕ ದೋಷದ ಕಾರಣ ಕೆಂಗೇರಿ ಮತ್ತು ಮೈಸೂರು ನಿಲ್ದಾಣಗಳ ನಡುವೆ 25 ರಿಂದ 30 ನಿಮಿಷಗಳ ಮಧ್ಯಂತರದಲ್ಲಿ ರೈಲುಗಳು ಒಂದೇ ಹಳಿಯಲ್ಲಿ ಕಾರ್ಯನಿರ್ವಹಿಸುತ್ತವೆ. ದೋಷವನ್ನು ಶೀಘ್ರ ಸರಿಪಡಿಸಲು ನಿರ್ವಹಣಾ ತಂಡವು ಸ್ಥಳದಲ್ಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ಇದನ್ನೂ ಓದಿ:ಯಕ್ಕಸಕ್ಕಾ... ಯಕ್ಕಾಸಕ್ಕಾ ಹಾಡಿಗೆ ಮೆಟ್ರೋದಲ್ಲಿ ಯುವತಿಯ ಸಖತ್ ಡ್ಯಾನ್ಸ್... ವಿಡಿಯೋ