ಬೆಂಗಳೂರು :ಮೈಸೂರು ರಸ್ತೆಯಿಂದ ಕೆಂಗೇರಿ ನಡುವಿನ ಮೆಟ್ರೊ ರೈಲಿನ ನೇರಳೆ ಮಾರ್ಗದಲ್ಲಿ ಕಾಣಿಸಿಕೊಂಡಿದ್ದ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದ್ದು, ರೈಲುಗಳ ಸಂಚಾರ ಸಹಜ ಸ್ಥಿತಿಗೆ ಮರಳಿದೆ ಎಂದು ಬಿ. ಎಂ.ಅರ್.ಸಿ.ಎಲ್ ತಿಳಿಸಿದೆ. ರೈಲು ಸಂಚಾರದಲ್ಲಿ ವ್ಯತ್ಯಯವಾಗಿದ್ದರಿಂದ ಮೈಸೂರು ರಸ್ತೆಯಿಂದ ಕೆಂಗೇರಿ ನಿಲ್ದಾಣದವರೆಗೆ ತಲುಪಲು ಪ್ರಯಾಣಿಕರು ರೈಲಿಗಾಗಿ ಅರ್ಧಗಂಟೆ ತನಕ ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು.
ನಮ್ಮ ಮೆಟ್ರೋ ನೇರಳೆ ಮಾರ್ಗದ ತಾಂತ್ರಿಕ ದೋಷ ನಿವಾರಣೆ, ಸಂಚಾರ ಪುನಾರಂಭ - ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣ
ನಮ್ಮ ಮೆಟ್ರೋ ನೇರಳೆ ಮಾರ್ಗದ ತಾಂತ್ರಿಕ ದೋಷ ಸರಿಪಡಿಸಲಾಗಿದೆ. ಇಂದಿನಿಂದ ರೈಲು ಸಂಚಾರ ಯಥಾಸ್ಥಿತಿ ನಡೆಯಲಿದೆ ಎಂದು ಬಿಎಂಆರ್ಸಿಎಲ್ ಹೇಳಿದೆ.

ನಮ್ಮ ಮೆಟ್ರೋ ನೇರಳೆ ಮಾರ್ಗದ ರೈಲು ಸಂಚಾರ ಯಥಾಸ್ಥಿತಿ
ಗುರುವಾರ ದಿನ ಪೂರ್ತಿ ಸಮಯಕ್ಕೆ ಸರಿಯಾಗಿ ನಿಲ್ದಾಣ ತಲುಪಲು ಸಾಧ್ಯವಾಗದೆ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ನಿನ್ನೆ ಬೆಳಗ್ಗೆಯಿಂದ ಒಂದೇ ಟ್ರ್ಯಾಕ್ನಲ್ಲಿ 25 ರಿಂದ 30 ನಿಮಿಷಕ್ಕೊ ಒಂದರಂತೆ ರೈಲುಗಳು ಸಂಚರಿಸಿದ್ದವು. ನಿರ್ವಹಣಾ ತಂಡದ ಸಿಬ್ಬಂದಿ ತಾಂತ್ರಿಕ ದೋಷ ಪತ್ತೆಮಾಡಿ ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದಿನಿಂದ ವೇಳಾಪಟ್ಟಿ ಪ್ರಕಾರ ರೈಲುಗಳು ಸಂಚರಿಸುತ್ತವೆ ಎಂದು ನಮ್ಮ ಮೆಟ್ರೊ ಅಧಿಕಾರಿಗಳು ತಿಳಿಸಿದ್ದಾರೆ.