ಬೆಂಗಳೂರು: 2019 ನೇ ಸಾಲಿನ ಕೆಂಪೇಗೌಡ ಪ್ರಶಸ್ತಿ ಪ್ರಕಟವಾಗಿದ್ದು, 100 ಜನರಿಗೆ ಕೆಂಪೇಗೌಡ ಪ್ರಶಸ್ತಿ ಲಭಿಸಿದೆ.
ಮುಖ್ಯಮಂತ್ರಿ ಚಂದ್ರು, ಚಂಪಾ ಸೇರಿ ಯಾರಿಗೆಲ್ಲ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ..? - Kempegawda award winners list
2019 ನೇ ಸಾಲಿನ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟವಾಗಿದ್ದು, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹಾಗೂ ಹಿರಿಯ ಸಾಹಿತಿ ಚಂಪಾ ಸೇರಿದಂತೆ 100 ಜನರ ಹೆಸರುಗಳಿರುವ ಪಟ್ಟಿ ಲಭ್ಯವಾಗಿದೆ.
100 ಸಾಧಕರನ್ನು ಆಯ್ಕೆ ಮಾಡಲು, ನಿವೃತ್ತ ನ್ಯಾಯಮೂರ್ತಿ ಸದಾಶಿವ ನೇತೃತ್ವದ ಸಮಿತಿ ರಚನೆ ಮಾಡಲಾಗಿತ್ತು. ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಪ್ರಶಸ್ತಿ ಪುರಸ್ಕೃತ ಸಾಧಕರ ಹೆಸರುಗಳನ್ನು ಘೋಷಿಸಿದ್ದಾರೆ. ಇದರ ಜೊತೆ ಕೆಂಪೇಗೌಡರ ಸೊಸೆ ಮಹಾತ್ಯಾಗಿ ಲಕ್ಷ್ಮಿದೇವಿ ಹೆಸರಲ್ಲಿಯೂ 10 ಜನರಿಗೆ ಪ್ರಶಸ್ತಿ ಘೋಷಣೆಯಾಗಿದೆ. ಅಲ್ಲದೇ 5 ಶಾಲೆಗಳಿಗೆ ಶಿವಕುಮಾರ ಸ್ವಾಮೀಜಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ನಾಳೆ ನಡೆಯಲಿರುವ ಕೆಂಪೇಗೌಡ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 25 ಸಾವಿರ ರೂಪಾಯಿ ಮೊತ್ತದ ಚೆಕ್, ಕೆಂಪೇಗೌಡ ಸ್ಮರಣಿಕೆ ಪ್ರದಾನ ಮಾಡಲಿದ್ದಾರೆ. ಇದೇ ವೇದಿಕೆಯಲ್ಲಿ ಕೆಂಪೇಗೌಡ ಸೊಸೆ ಲಕ್ಷ್ಮಿದೇವಿ ಸ್ಮರಣಾರ್ಥ 10 ಮಂದಿ ಮಹಿಳಾ ಸಾಧಕರಿಗೆ ಪ್ರಶಸ್ತಿ ಲಭಿಸಲಿದೆ.
- ಮುಖ್ಯಮಂತ್ರಿ ಚಂದ್ರು-(ಸಿನೆಮಾ)
- ಚಂಪಾ(ಸಾಹಿತ್ಯ)
- ಪ್ರೋ.ಶಿವರಾಮಯ್ಯ(ಸಾಹಿತ್ಯ)
- ಅಬ್ದುಲ್ ಬಷೀರ್ (ಸಾಹಿತ್ಯ)
- ಪ್ರೊ.ರವಿವರ್ಮ ಕುಮಾರ್ (ನಿವೃತ್ತ ಅಡ್ವೋಕೇಟ್ ಜನರಲ್)
- ಬಿಂದುರಾಣಿ (ಕ್ರೀಡೆ)
- ಶಾಂತರಾಮಮಮೂರ್ತಿ (ಕ್ರೀಡೆ)
- ಸೈಯ್ಯದ್ ಇಬಯಾಯತುಲ್ಲಾ (ಅಂಗವಿಕಲ ಕ್ರೀಡಾಪಟು)
- ಕುಮಾರಿ ಪ್ರತ್ಯಕ್ಷಾ (ಬಾಲ ಪ್ರತಿಭೆ)
- ಪ್ರೊ. ನಾಗೇಶ್ ಬೆಟ್ಟಕೋಟೆ(ರಂಗಭೂಮಿ)
- ಪೂರ್ಣಿಮ ಗುರುರಾಜ್ (ನೃತ್ಯ)
- ಮಮತಾ ಬ್ರಹ್ಮಾವಾರ್ (ರಂಗಭೂಮಿ)
- ಮಂಜುಳಾ ಶಿವಾನಂದ್ (ಕನ್ನಡ ಸೇವೆ)
- ವಾಣಿ (ಶಿಕ್ಷಣ ಕ್ಷೇತ್ರ)
- ರಾಜಯೋಗೆಂದ್ರೆ ವೀರಸ್ವಾಮಿ (ಸ್ವತಂತ್ರ ಹೋರಾಟಗಾರ)
- ಚಂದ್ರಶೇಖರ್ (ಕನ್ನಡ ಸೇವೆ)
- ರತ್ನಂ (ಚಲನಚಿತ್ರ)
- ಶಿವಾನಂದ್ (ವೆಂಕಟರಮಣಪ್ಪ ವೈದ್ಯಕೀಯ ಕ್ಷೇತ್ರ)
- ಮೀನಾಕ್ಷಿ (ರಂಗಭೂಮಿ)
- ದೇವನಾಥ್ ಹಾಗೂ ಕುಶಲ ಡಿಮೊಲೊ(ಮಾಧ್ಯಮ) ಸೇರಿದಂತೆ ನೂರು ಜನರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇನ್ನು ಪ್ರಶಸ್ತಿ ಪುರಸ್ಕೃತರ ಹೆಸರುಗಳು ಅಧಿಕೃತ ಪ್ರಕಟಣೆಗೂ ಮುನ್ನವೇ ಬಹಿರಂಗವಾಗಿದ್ದಕ್ಕೆ ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.