ಬೆಂಗಳೂರು: ಕೋವಿಡ್ 2ನೇ ಅಲೆಯಿಂದ ಸಂಕಷ್ಟದಲ್ಲಿರುವ ರಾಜ್ಯದ ವಿವಿಧ ವರ್ಗಗಳಿಗೆ 500 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಎರಡನೇ ಬೆಂಬಲ ಪ್ಯಾಕೇಜ್ ಪ್ರಕಟಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿನಂದಿಸಿದ್ದಾರೆ.
ಕೆಲವೇ ದಿನಗಳ ಹಿಂದೆ 1,250 ಕೋಟಿ ರೂಪಾಯಿಯ ಮೊದಲನೇ ಬೆಂಬಲ ಪ್ಯಾಕೇಜ್ ನೀಡಲಾಗಿತ್ತು. ಈಗ ಸಂಕಷ್ಟದಲ್ಲಿರುವ ಪವರ್ ಲೂಮ್, ಚಲನಚಿತ್ರೋದ್ಯಮ, ದೂರದರ್ಶನ ಮಾಧ್ಯಮದವರಿಗೆ, ಮೀನುಗಾರರು, ಇನ್ ಲ್ಯಾಂಡ್ ದೋಣಿ ಮಾಲೀಕರು, ಸಿ ವರ್ಗದ ದೇವಸ್ಥಾನದ ಅರ್ಚಕರು, ಅಡುಗೆ ಕೆಲಸ, ಸಹಾಯಕರು, ಮಸೀದಿ ಫೇಶಿಮಾಂ ಮತ್ತು ಮೌಂಜನ್ಗೆ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ಮತ್ತು ಅನುದಾನಿತ ಖಾಸಗಿ ಶಾಲಾ ಶಿಕ್ಷಕರು ಸೇರಿ ಹಲವು ವರ್ಗದವರಿಗೆ ನೆರವು ಪ್ರಕಟಿಸಲಾಗಿದೆ.
500 ಕೋಟಿಯ ಎರಡನೇ ಬೆಂಬಲ ಪ್ಯಾಕೇಜ್: ಮುಖ್ಯಮಂತ್ರಿಗಳಿಗೆ ನಳಿನ್‍ಕುಮಾರ್ ಕಟೀಲ್ ಅಭಿನಂದನೆ - BS Yediyurappa announce 2nd COVID package
ಕೆಲವೇ ದಿನಗಳ ಹಿಂದೆ 1,250 ಕೋಟಿ ರೂಪಾಯಿಯ ಮೊದಲನೇ ಬೆಂಬಲ ಪ್ಯಾಕೇಜ್ ನೀಡಲಾಗಿತ್ತು. ಇದೀಗ ಸಂಕಷ್ಟದಲ್ಲಿರುವ ಪವರ್ ಲೂಮ್, ಚಲನಚಿತ್ರೋದ್ಯಮ, ದೂರದರ್ಶನ ಮಾಧ್ಯಮದವರಿಗೆ, ಮೀನುಗಾರರು ಸೇರಿದಂತೆ ವಿವಿಧ ವರ್ಗಕ್ಕೆ 500 ಕೋಟಿ ರೂ ಪ್ಯಾಕೇಜ್ ನೀಡಲಾಗಿದೆ.
![500 ಕೋಟಿಯ ಎರಡನೇ ಬೆಂಬಲ ಪ್ಯಾಕೇಜ್: ಮುಖ್ಯಮಂತ್ರಿಗಳಿಗೆ ನಳಿನ್‍ಕುಮಾರ್ ಕಟೀಲ್ ಅಭಿನಂದನೆ ನಳಿನ್‍ಕುಮಾರ್ ಕಟೀಲ್](https://etvbharatimages.akamaized.net/etvbharat/prod-images/768-512-12008068-483-12008068-1622754213597.jpg)
ನಳಿನ್‍ಕುಮಾರ್ ಕಟೀಲ್
ಕೈಗಾರಿಕೆಗಳ ಫಿಕ್ಸೆಡ್ ವಿದ್ಯುತ್ ಬಿಲ್ ಪಾವತಿ ವಿನಾಯಿತಿ ಮಾಡಿದ್ದು, ನ್ಯಾಯವಾದಿಗಳ ಕಲ್ಯಾಣ ನಿಧಿಗೆ 5 ಕೋಟಿ ನೆರವು ಪ್ರಕಟಿಸಿದ್ದಾರೆ. ಈ ಮೂಲಕ ಮುಖ್ಯಮಂತ್ರಿಗಳು ಸಂಕಷ್ಟದಲ್ಲಿರುವವರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಹೇಳಿದ್ದಾರೆ.
ಇದನ್ನು ಓದಿ:Lockdown: ಸರ್ಕಾರ ಘೋಷಿಸಿದ ಎರಡನೇ ಪ್ಯಾಕೇಜ್ನಲ್ಲಿ ಯಾರಿಗೆ, ಎಷ್ಟು ಪರಿಹಾರ?