ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತದ ಹಿಂದೆ ಡಿಕೆಶಿ ಇರಬೇಕು: ನಳಿನ್ ಕುಮಾರ್ ಕಟೀಲ್ - ಸಿದ್ದರಾಮಯ್ಯ ವಿರುದ್ದ ನಳಿನ್​ ಕುಮಾರ್​ ಹೇಳಿಕೆ

ಸಿದ್ದರಾಮಯ್ಯ ಹಿಂದೂ ಧರ್ಮ ಮತ್ತು ಸಾವರ್ಕರ್​ಗೆ ಅವಮಾನ ಮಾಡಿದ್ದನ್ನು ಸಹಿಸಲಾರದೇ ಅವರದೇ ಪಕ್ಷದ ಕಾರ್ಯಕರ್ತ ಮೊಟ್ಟೆ ಎಸೆದಿದ್ದಾನೆ ಎಂದು ನಳಿನ್​ ಕುಮಾರ್​ ಕಟೀಲ್​ ಹೇಳಿದರು.

KN_BNG_05_KATEEL_BYTE_SCRIPT_7201951
ನಳಿನ್ ಕುಮಾರ್ ಕಟೀಲ್

By

Published : Aug 20, 2022, 8:51 PM IST

ಬೆಂಗಳೂರು: ಮಡಿಕೇರಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದಿರುವ ಪ್ರಕರಣ ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯರ ಮೇಲೆ ಮೊಟ್ಟೆ ಎಸೆದಿರುವುದರ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಕೈವಾಡ ಇರಬಹುದೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಶಂಕೆ ವ್ಯಕ್ತಪಡಿಸಿದ್ದಾರೆ.

ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿಂದು ಮಾತನಾಡಿದ ಅವರು, ಸಿದ್ದರಾಮಯ್ಯ ಹಿಂದೂ ಧರ್ಮದ ಮೇಲೆ, ಸಾವರ್ಕರ್​ಗೆ ಅವಮಾನ ಮಾಡಿದ್ದಾರೆ. ಇದನ್ನು ಕಾಂಗ್ರೆಸ್​ನಲ್ಲಿ‌ ಇರೋರೇ ಸಹಿಸಲ್ಲ. ಹೀಗಾಗಿ ನಿನ್ನೆ ಕಾಂಗ್ರೆಸ್ ಕಾರ್ಯಕರ್ತ ಸಂಪತ್ ಸಿದ್ದರಾಮಯ್ಯರತ್ತ ಮೊಟ್ಟೆ ಎಸೆದಿದ್ದಾರೆ. ಸಿದ್ದರಾಮಯ್ಯಗೆ ಡಿಕೆಶಿಯವರೇ ಮೊಟ್ಟೆ ಹೊಡೆಸಿರಬೇಕು ಎಂದು ಆರೋಪಿಸಿದರು.

ಹಿಂದೂಗಳಿಗೆ ಮಾಡಿದ ಅವಮಾನ. ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್​ಗೆ ಮಾಡಿದ ಅವಮಾನವನ್ನು ಕಾಂಗ್ರೆಸ್ ನಲ್ಲಿರುವರೇ ವಿರೋಧಿಸುವರಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಹಿಂದು ವಿರೋಧ ನೀತಿಯನ್ನು ಕಾಂಗ್ರೆಸ್ ನಲ್ಲೆ ಸಹಿಸೋದಿಲ್ಲ. ಈ ಕಾರಣದಿಂದ ಕಾಂಗ್ರೆಸ್ ನಲ್ಲಿರುವ ಹಿಂದೂಗಳು ಕಾಂಗ್ರೆಸ್ ಬಿಡುತ್ತಿದ್ದಾರೆ. ಇದರ ಪರಿಣಾಮ ಕಾಂಗ್ರೆಸ್ ಕಾರ್ಯಕರ್ತ ಮೊಟ್ಟೆ ಎಸೆದಿದ್ದಾರೆ ಎಂದು ದೂರಿದರು.

ಸಿದ್ದರಾಮಣ್ಣ ಮಡಿಕೇರಿ ಪಾದಯಾತ್ರೆಯನ್ನು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮಾಡ್ತಾರಾ?. ಅವರು ಕಾಂಗ್ರೆಸ್ ಜೋಡೋ ಮಾಡ್ತಾರಾ, ಕಾಂಗ್ರೆಸ್ ಚೋಡೋ ಮಾಡ್ತಾರಾ, ಕಾಂಗ್ರೆಸ್​ ತೋಡೋ ಮಾಡ್ತಾರಾ?. ಯಾವುದು ಮಾಡ್ತಾರೆ ಅಂತ ಹೇಳಬೇಕು ಎಂದು ಟೀಕಿಸಿದರು.

ಮೊಟ್ಟೆ ಎಸೆತ ಪ್ರಕರಣಕ್ಕೆ ಬಿಜೆಪಿ ನಾಯಕರ ಪ್ರತಿಕ್ರಿಯೆ

ಇದೇ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾತನಾಡಿ, ಸಮಾಜವನ್ನು ಸೀಳುತ್ತಿರುವವರು ಯಾರು?. ನೀವು ಸೀಳು ನಾಯಿಯಾ, ನಾವಾ?. ನಿಮ್ಮಷ್ಟು ಸುಳ್ಳು ಹೇಳುವವರು ಯಾರೂ ಇಲ್ಲ. ಹಾಗಾಗಿ ನೀವು ಸುಳ್ಳುರಾಮಯ್ಯ. ನಿಮ್ಮಷ್ಟು ನೀಚ ರಾಮಯ್ಯ ಸಮಾಜದಲ್ಲಿ ಯಾರೂ ಇಲ್ಲ. ನೀಚ ರಾಜಕೀಯ ಮಾಡುತ್ತಿದ್ದೀರ. ನಿಮ್ಮದೇ ಕಾರ್ಯಕರ್ತ ನಿಮಗೆ ಮೊಟ್ಟೆಯಿಂದ ಹೊಡೆದಿದ್ದಾರೆ. ಅದನ್ನು ಬಿಜೆಪಿ ತಲೆ ಮೇಲೆ ಕಟ್ಟಲು ಹೊರಟಿದ್ದೀರಲ್ಲಾ. ಹಾಗಾಗಿ ನೀವು ನೀಚರಾಮಯ್ಯ ಎಂದು ವಾಗ್ದಾಳಿ ನಡೆಸಿದರು.

ನಿಮಗೆ ಅದು ಹೇಗೆ 75 ವರ್ಷ ಕಳೆದು ಹೋಯ್ತು ಅನ್ನೋದು ಗೊತ್ತಿಲ್ಲ. 75 ವರ್ಷ ಆಗಿದ್ದರೆ ನಿಮಗೆ ಪ್ರಬುದ್ಧತೆ ಬರುತ್ತಿತ್ತು. ಆದರೆ ನಿಮಗೆ ಆ ಪ್ರಬುದ್ಧತೆ ಬಂದಿಲ್ಲ‌. ನೀಚತನ ಬಂತು.‌ ಸಮಾಜವನ್ನು ಒಡೆಯುವುದು.‌ ಪಾರ್ಟಿಯನ್ನು ಒಡೆಯುವುದು. ದಲಿತ ನಾಯಕರನ್ನು ಸೋಲಿಸುವುದು. ಆ ಮೂಲಕ ನೀಚ ರಾಜಕಾರಣ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.

ಮಡಿಕೇರಿ ಚಲೋ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಸಿದ್ದರಾಮಯ್ಯ ಯಾವ ಮುಖ ಇಟ್ಕೊಂಡು ಕೊಡಗಿಗೆ ಹೋಗ್ತಾರೆ?. ಯಾವ ಪುರುಷಾರ್ಥಕ್ಕೆ ಸಿದ್ದರಾಮಯ್ಯ ಕೊಡಗಿಗೆ ಹೋಗ್ತಾರೆ?. ನೈತಿಕತೆ ಇದ್ದರೆ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ರವಿಕುಮಾರ್​ ಒತ್ತಾಯಿಸಿದರು.

ಇದನ್ನೂ ಓದಿ:ಆರ್​ಎಸ್​​ಎಸ್​ ಪ್ಯಾಂಟು ತೊಟ್ಟವನಿಗೆ ಕಾಂಗ್ರೆಸ್ ವೇಷ ತೊಡಿಸಿದ ಮಾತ್ರಕ್ಕೆ ಕಾಗೆ ನವಿಲಾಗುತ್ತದೆಯೇ: ಕಾಂಗ್ರೆಸ್​ ತಿರುಗೇಟು

ABOUT THE AUTHOR

...view details