ಬೆಂಗಳೂರು: ದೇಶವನ್ನು ಬಹುಕಾಲ ಆಳಿದ ಕಾಂಗ್ರೆಸ್, ಜನರ ತೆರಿಗೆ ಹಣವನ್ನು ವಿವೇಚನೆಯಿಂದ ಬಳಸಿದ್ದರೆ ಕೊರೊನಾ ನಿಯಂತ್ರಿಸಲು ಕಷ್ಟವಾಗುತ್ತಿರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ದೂರದೃಷ್ಟಿ ಇರಲಿಲ್ಲ. ದೇಶವನ್ನು ಲೂಟಿ ಮಾಡುವ ಯೋಚನೆ ಬಿಟ್ಟು ಮತ್ಯಾವ ಯೋಚನೆಯೂ ಇರಲಿಲ್ಲ. ಕೋವಿಡ್ ಪರಿಹಾರ ಕಾರ್ಯದಲ್ಲಿ ಸರ್ಕಾರ ಮತ್ತು ಪಕ್ಷ ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿದೆ.
ಶಾಸಕರು, ಪಕ್ಷದ ಜಿಲ್ಲಾಧ್ಯಕ್ಷರು ಸೇರಿ ಜಿಲ್ಲೆಗಳಲ್ಲಿ ವಾರ್‌ರೂಮ್ ತೆರೆದಿದ್ದೇವೆ. ಇಲ್ಲಿಗೆ ಬರುವ ಕರೆಗಳನ್ನು ಜಿಲ್ಲಾಡಳಿತ, ಉಸ್ತುವಾರಿ ಸಚಿವರಿಗೆ ತಲುಪಿಸುವ ಕೆಲಸ ಸೇರಿದಂತೆ 13 ಅಂಶಗಳನ್ನೊಳಗೊಂಡ ಸೇವೆ ಮಾಡಲಾಗುತ್ತಿದೆ ಎಂದು ಸರ್ಕಾರದ ಕಾರ್ಯವೈಖರಿಯನ್ನು ಕಟೀಲ್ ಸಮರ್ಥಿಸಿಕೊಂಡಿದ್ದು, ಅದನ್ನು ಬಿಜೆಪಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.