ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ವಿರುದ್ಧ ನಳಿನ್ ಕುಮಾರ್ ಕಟೀಲ್ ಟ್ವೀಟ್ ವಾರ್ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ನಿಮ್ಮ ಅಧಿಕಾರದ ಅವಧಿಯಲ್ಲಿ ಒಂದು ವರ್ಗವನ್ನು ಓಲೈಸಿಕೊಳ್ಳಲು ಹಿಂದೂ ಸಂಘಟನೆಯ ಕಾರ್ಯಕರ್ತರ ರಕ್ತವನ್ನೇ ಹರಿಸಿದ್ದು ನಮಗಿನ್ನೂ ನೆನಪಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ವಾರ್ ನಡೆಸಿದ್ದಾರೆ.

Nalin Kumar Kateel Tweet War against Siddaramaiah
ಸಿದ್ದರಾಮಯ್ಯ ವಿರುದ್ಧ ನಳಿನ್ ಕುಮಾರ್ ಕಟೀಲ್ ಟ್ವೀಟ್ ವಾರ್

By

Published : Sep 12, 2020, 12:31 AM IST

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ವಾರ್ ನಡೆಸಿದ್ದಾರೆ.

ಸರಣಿ ಟ್ವೀಟ್ ಗಳ ಮೂಲಕ ಸಿದ್ದರಾಮಯ್ಯ ನಡೆಯನ್ನು ಟೀಕಿಸಿದ್ದಾರೆ.ಟಿಪ್ಪು ಜಯಂತಿಗೆ ಅನೇಕ ರಾಜಕಾರಣಿಗಳು, ವಿದ್ವಾಂಸರು, ಸಾಹಿತಿಗಳು ಮಾತ್ರವಲ್ಲದೆ ಕೋಟ್ಯಾಂತರ ಜನರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಹಿಂದೂಗಳನ್ನು ಕೆಣಕಲು, ಅಲ್ಪಸಂಖ್ಯಾತರನ್ನು ಓಲೈಸಲು ಕನ್ನಡ ಭಾಷೆ ಕಡೆಗಣಿಸಿ ಪರ್ಷಿಯನ್ ಭಾಷೆ ಹೇರಿದ, ಲಕ್ಷಾಂತರ ಜನರ ಹತ್ಯೆಗೈದ, ಮಂದಿರಗಳನ್ನು ಧ್ವಂಸ ಮಾಡಿದ ಮತಾಂಧನ ಜಯಂತಿ ಆಚರಿಸಿದ್ದು ಯಾರು ಎಂದು ಸಿದ್ದರಾಮಯ್ಯ ಅವರನ್ನು ನೇರವಾಗಿ ಪ್ರಶ್ನಿಸಿದ್ದಾರೆ.

ನಿಮ್ಮ ಅಧಿಕಾರದ ಅವಧಿಯಲ್ಲಿ ಒಂದು ವರ್ಗವನ್ನು ಓಲೈಸಿಕೊಳ್ಳಲು ಹಿಂದೂ ಸಂಘಟನೆಯ ಕಾರ್ಯಕರ್ತರ ರಕ್ತವನ್ನೇ ಹರಿಸಿದ್ದು ನಮಗಿನ್ನೂ ನೆನಪಿದೆ. ಹತ್ತಾರು ಕಾರ್ಯಕರ್ತರ ಹೆಣಗಳ ಮೇಲೆ ರಾಜಕಾರಣ ಮಾಡಿದ ನಿಮ್ಮ ಅಧಿಕಾರದ ಮೋಹ, ಪಕ್ಷದ ದುರಾಡಳಿತ ಇಂದು ನಿಮ್ಮನ್ನು ಪರಿತಪಿಸುವಂತೆ ಮಾಡಿದೆ ಎಂದು ಟೀಕಿಸಿದ್ದಾರೆ.

ಐಎಎಸ್ ಅಧಿಕಾರಿ ಡಿಕೆ ರವಿ, ಡಿವೈಎಸ್ಪಿ ಗಣಪತಿ, ಎಸ್ಐ ಮಲ್ಲಿಕಾರ್ಜುನ ಬಂಡೆಯಂತಹ ಅತಿದೊಡ್ಡ ಸರ್ಕಾರಿ ಅಧಿಕಾರಿಗಳ ಸಾವುಗಳಿಗೆ ಅಂದಿನ ಸಿದ್ದರಾಮಯ್ಯ ಸರ್ಕಾರ ಕಾರಣವಾಗಿದ್ದು ಮಾತ್ರವಲ್ಲದೆ ಆ ಅಮೂಲ್ಯ ಜೀವಗಳಿಗೆ ಬೆಲೆ ಇಲ್ಲದಂತಾಗಿತ್ತು. ತಮ್ಮ ಪಕ್ಷದ ಪ್ರಭಾವಿ ನಾಯಕರೇ ಈ ಕೃತ್ಯಗಳಲ್ಲಿ ತೊಡಗಿದ್ದರೂ ಯಾವುದೇ ಕ್ರಮ ಕೈಗೊಳ್ಳದ ವ್ಯಕ್ತಿ ಯಾವ ಸೀಮೆಯ ನಾಯಕ ಎಂದು ವಾಗ್ದಾಳಿ ನಡೆಸಿದ್ದಾರೆ.

‌ತನ್ನ ಅಧಿಕಾರದಲ್ಲಿ ಮತಾಂಧ ಎಸ್‌ಡಿಪಿಐ ಮತ್ತು ಪಿಎಫ್ಐಸಂಘಟನೆಗಳ ಗೂಂಡಾಗಳನ್ನು ಜೈಲಿಂದ ಬಿಡುಗಡೆಗೊಳಿಸಿದ ನಂತರ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದ್ದು ಕಣ್ಣೆದುರೇ ಇದೆ.ಇಂತಹ ಪ್ರಕರಣಗಳ ನಂತರವೂ ಅವರನ್ನು ಬೆಂಬಲಿಸಿದ ಪರಿಣಾಮ ಹತ್ತಾರು ಜೀವಗಳು ಬಲಿಯಾಗಿದೆ. ಹೆಣಗಳ‌ ಮೇಲೆ ರಾಜಕಾರಣ ಮಾಡಿದ ಬುದ್ಧಿ ಇನ್ಯಾರಿಗೆ ಇರುತ್ತೆ‌ ಎಂದು ಸಿದ್ದರಾಮಯ್ಯ ವಿರುದ್ಧ ಕಟೀಲ್ ಹರಿಹಾಯ್ದಿದ್ದಾರೆ.

ABOUT THE AUTHOR

...view details