ಕರ್ನಾಟಕ

karnataka

ETV Bharat / state

ಶೆಟ್ಟರ್ ವಿರುದ್ಧ ಪಿತೂರಿ ನಡೆದಿಲ್ಲ, ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನ ನಡೆಸಿದ್ರೂ ಹೊರ ಹೋಗುತ್ತಿದ್ದಾರೆ : ಕಟೀಲ್ - ಜಗದೀಶ್ ಶೆಟ್ಟರ್ ರಾಜೀನಾಮೆ

ಜಗದೀಶ್ ಶೆಟ್ಟರ್ ಜೊತೆ ಎಲ್ಲಾ ಹಂತದ ಮಾತುಕತೆಗಳನ್ನೂ ಮಾಡಲಾಗಿದೆ. ಅವರ ವಿರುದ್ಧ ಯಾವುದೇ ಪಿತೂರಿ ನಡೆದಿಲ್ಲ, ಅವರನ್ನು ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನ ನಡೆಸಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

nalin kumar kateel
ನಳಿನ್ ಕುಮಾರ್ ಕಟೀಲ್

By

Published : Apr 16, 2023, 12:26 PM IST

ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿರುದ್ಧ ಪಕ್ಷದಲ್ಲಿ ಯಾವುದೇ ರೀತಿಯ ಪಿತೂರಿ ನಡೆದಿಲ್ಲ. ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ನಡೆಸಿದರೂ ಕೂಡ ಅವರು ಪಕ್ಷ ತೊರೆಯುವ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಪಕ್ಷದ ಹಿರಿಯ ನಾಯಕರು, ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಯಿತು. ಅವರ ಎಲ್ಲ ಬೇಡಿಕೆ ಕುರಿತು ಹೈಕಮಾಂಡ್ ನಾಯಕರು ಮಾತುಕತೆ ನಡೆಸಿದರು. ರಾಜ್ಯದ ಎಲ್ಲಾ ನಾಯಕರು ಅವರೊಂದಿಗೆ ಚರ್ಚೆ ನಡೆಸಿದರು. ಅವರು ಪಕ್ಷದಲ್ಲೇ ಇರುತ್ತಾರೆ ಎಂದುಕೊಂಡಿದ್ದೆವು. ಇದೀಗ ಪಕ್ಷ ತೊರೆಯುವ ನಿರ್ಧಾರ ಮಾಡಿದ್ದಾರೆ ಎಂದರು.

ಟಿಕೆಟ್ ಸಿಗಲಿಲ್ಲ ಎಂದಾಗ ಅಸಮಧಾನ ಆಗುವುದು ಸಹಜ. ಆದರೂ ಎಲ್ಲ ಹಿರಿಯರು ಮಾತುಕತೆ ನಡೆಸಿದ್ದರು. ಅನೇಕ ಹಂತದ ಮಾತುಕತೆಯನ್ನೂ ಶೆಟ್ಟರ್ ಜತೆ ಮಾಡಲಾಗಿದೆ. ಓರ್ವ ಮಾಜಿ ಸಿಎಂ ಆಗಿರುವ ಶೆಟ್ಟರ್ ಪಕ್ಷ ಬಿಡುತ್ತಿರೋದ್ರಿಂದ ಬಿಜೆಪಿ ಪಕ್ಷಕ್ಕೆ ಹಿನ್ನಡೆ ಆಗುವುದಿಲ್ಲ. ಅವರು ನಮ್ಮಲ್ಲೇ ಉಳಿದು ಕೊಳ್ಳುತ್ತಾರೆ ಎನ್ನುವ ವಿಶ್ವಾಸ ಇತ್ತು. ಪಕ್ಷವು ಶೆಟ್ಟರ್​ಗೆ ಎಲ್ಲಾ ಗೌರವ ಕೊಟ್ಟಿತ್ತು, ಎಲ್ಲ ಜವಾಬ್ದಾರಿಗಳನ್ನು ಕೊಟ್ಟಿತ್ತು. ಆದರೂ ಹೋಗುತ್ತಿದ್ದಾರೆ ಎಂದು ಕಟೀಲ್​ ಹೇಳಿದರು.

ಇದನ್ನೂ ಓದಿ :ಕಾಂಗ್ರೆಸ್​ಗೆ ಜಗದೀಶ್ ಶೆಟ್ಟರ್ ಬಂದ್ರೆ ಟಿಕೆಟ್ ಫಿಕ್ಸ್: ಶಾಮನೂರು ಶಿವಶಂಕರಪ್ಪ

ಟಿಕೆಟ್ ವಂಚಿತರು ಬೇರೆ ಪಕ್ಷಗಳಿಗೆ ಹೋಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಕಟೀಲ್, ಕ್ಷೇತ್ರದಲ್ಲಿ ಟಿಕೆಟ್ ಮತ್ತೆ ಸಿಗಲ್ಲ ಅಂತ ಆದಾಗ ಹತ್ತಾರು ಜನ ಹೋಗುವುದು ಇದೆ, ಬಂದಿರುವುದೂ ಇದೆ ಎಂದು ಪರೋಕ್ಷವಾಗಿ ಎಂ ಪಿ ಕುಮಾರಸ್ವಾಮಿ, ಗೂಳಿಹಟ್ಟಿ ಶೇಖರ್, ನೆಹರೂ ಓಲೇಕಾರ್ ಸೇರಿ ಪಕ್ಷಾಂತರ ಮಾಡಲು ಮುಂದಾಗಿರುವ ನಾಯಕರಿಗೆ ಟಾಂಗ್ ನೀಡಿದರು.

ಇದನ್ನೂ ಓದಿ :ಬಿಜೆಪಿ ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ಗುಡ್​​ ಬೈ.. ಚುನಾವಣೆಗೆ ನಿಂತೇ ನಿಲ್ತೇನಿ - ಹೈಕಮಾಂಡ್​ಗೆ ಶೆಟ್ಟರ್​ ಸವಾಲು

ಒಂದೇ ವಯಸ್ಸಿನ ಸುರೇಶ್​ ಕುಮಾರ್​ಗೆ ಟಿಕೆಟ್ ನೀಡಿ, ಶೆಟ್ಟರ್​ಗೆ ಮಿಸ್ ಮಾಡಿರುವುದರ ಹಿಂದೆ ಲಿಂಗಾಯತ, ಬ್ರಾಹ್ಮಣ ಎನ್ನುವ ಜಾತಿ ರಾಜಕೀಯದ ಮಾತುಗಳು ಕೇಳಿ ಬರುತ್ತಿರುವ ವಿಚಾರದ ಕುರಿತು ಮಾತನಾಡಿ, ನಮ್ಮಲ್ಲಿ ಸಮುದಾಯದ ಪ್ರಶ್ನೆ ಬರಲ್ಲ. ಎಲ್ಲ ಸಮುದಾಯ ಗುರುತಿಸಿ ಟಿಕೆಟ್ ಕೊಡಲಾಗಿದೆ. ಎಲ್ಲಾ ಸಮುದಾಯಗಳಿಗೂ ಸಾಮಾಜಿಕ ನ್ಯಾಯದಡಿ ಸ್ಥಾನಮಾನ ಕೊಡಲಾಗಿದೆ. ಲಿಂಗಾಯತರನ್ನು ಗುರುತಿಸಿ ಸಿಎಂ ಮಾಡಿದ್ದು ನಮ್ಮ ಪಕ್ಷ ಮಾತ್ರವೇ ಎಂದು ನಳಿನ್​ಕುಮಾರ್​ ಸಮರ್ಥಿಸಿಕೊಂಡರು.

ಈಗಾಗಲೇ ಬಿಜೆಪಿ ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಆಗಿವೆ. 224 ಕ್ಷೇತ್ರಗಳಲ್ಲಿ 212 ಕ್ಷೇತ್ರಗಳ ಹೆಸರು ಪ್ರಕಟವಾಗಿದ್ದು, ಬಾಕಿ 12 ಕ್ಷೇತ್ರಗಳ ಮೂರನೇ ಪಟ್ಟಿ ಅತಿ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎಂದು ಕಟೀಲ್ ಹೇಳಿದರು.

ಇದನ್ನೂ ಓದಿ :ಬಿಜೆಪಿ ತೊರೆದ ಸೋಲಿಲ್ಲದ ಸರದಾರ: ಜಗದೀಶ್ ಶೆಟ್ಟರ್ ನಡೆದು ಬಂದ ಹಾದಿಯ ಹಿನ್ನೋಟ..

ABOUT THE AUTHOR

...view details