ಬೆಂಗಳೂರು:ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ನವರು ಹೋರಾಟ ಮಾಡಿದ್ರೇನು ಬಂತು? ನಮ್ಮ ಸರ್ಕಾರ ಇರುವುದರಿಂದ ಎತ್ತುಗಳು ಉಳಿದಿವೆ. ಅದನ್ನು ಬಳಸಿಕೊಂಡು ಎತ್ತಿನಗಾಡಿಯಲ್ಲಿ ಹೋಗಿದ್ದಾರೆ. ಅವರು ಅಧಿಕಾರದಲ್ಲಿ ಇದ್ದಿದ್ದರೆ, ಎತ್ತುಗಳು ಕಸಾಯಿಖಾನೆಗೆ ಹೋಗುತ್ತಿದ್ದವು ಎಂದು ಕಾಂಗ್ರೆಸ್ ಹೋರಾಟವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಬೆಲೆ ಏರಿಕೆಯನ್ನು ವಿರೋಧಿಸಿ ಎತ್ತಿನ ಬಂಡಿಯಲ್ಲಿ ವಿಧಾನಸೌಧ ಚಲೋ ನಡೆಸಿದ್ದಾರೆ. ಆದರೆ ಬೆಲೆ ಏರಿಕೆ ಆಗಿದ್ದು ಹಿಂದಿನ ಯುಪಿಎ ಸರ್ಕಾರದಲ್ಲಿ, ಪ್ರತಿಭಟನೆ ಮಾಡಬೇಕಾಗಿದ್ದೂ ಯುಪಿಎ ಸರ್ಕಾರದ ವೇಳೆ. ಆದರೆ ಜನತೆಯ ದಾರಿ ತಪ್ಪಿಸಲು ಈಗ ಪ್ರತಿಭಟನೆ ಮಾಡುತ್ತಿದ್ದಾರೆ. ಇಂದು ಪ್ರತಿಭಟನೆಗೆ ಎತ್ತುಗಳನ್ನು ಬಳಸಿಕೊಂಡಿದ್ದಾರೆ. ಇವರ ಸರ್ಕಾರವೇ ಇರುತ್ತಿದ್ದರೆ ಈ ಎತ್ತುಗಳು ಕಸಾಯಿಖಾನೆಯಲ್ಲಿ ಇರುತ್ತಿದ್ದವು, ನಮ್ಮ ಸರ್ಕಾರ ಇರುವ ಕಾರಣಕ್ಕೆ ಇವರ ಎತ್ತಿನ ಬಂಡಿಗೆ ಎತ್ತುಗಳು ಸಿಕ್ಕಿವೆ ಎಂದರು.
ಇದನ್ನೂ ಓದಿ:ತೈಲ, ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಮುಖಂಡರ ಎತ್ತಿನಗಾಡಿ ಚಲೋ
ಅಕ್ಟೋಬರ್ನಲ್ಲಿ ರಾಜ್ಯ ಪ್ರವಾಸ: