ಬೆಂಗಳೂರು: ಕಾಂಗ್ರೆಸ್ ಮುಖಂಡ, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಅತಿವೃಷ್ಟಿಯಿಂದ ಸಂಕಷ್ಟದಲ್ಲಿರುವ ಜನರನ್ನು ಮರೆತು, ತಮ್ಮ ಜನ್ಮದಿನ ಆಚರಣೆ ಮೂಲಕ ಮಜಾವಾದದಲ್ಲಿ ತೊಡಗಿದ್ದಾರೆ. ಇಂದು ಆಚರಿಸಿದ್ದು, ಸಿದ್ದರಾಮೋತ್ಸವ ಅಲ್ಲ ಮಜೋತ್ಸವ ಎಂದು ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.
ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಪ್ರಕೃತಿ ವಿಕೋಪದಿಂದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡುವುದರಲ್ಲಿ ಕಾಂಗ್ರೆಸ್ ಪಕ್ಷ ಎತ್ತಿದ ಕೈ. ಇದೆಲ್ಲವನ್ನೂ ಮರೆತ ಸಮಾಜವಾದಿ ಹಣೆಪಟ್ಟಿ ಕಟ್ಟಿಕೊಂಡ ಮಜಾವಾದಿ ಸಿದ್ದರಾಮಯ್ಯ ಸುಮಾರು 17 ಕೋಟಿಗಿಂತ ಅಧಿಕ ಖರ್ಚು ಮಾಡಿ, ತಮ್ಮ ಬೆಂಬಲಿಗರಿಂದ ಜನ್ಮದಿನೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಇದು ಎಷ್ಟು ಸರಿ? ಎಂದು ಪತ್ರಿಕಾ ಹೇಳಿಕೆ ಮೂಲಕ ಪ್ರಶ್ನಿಸಿದ್ದಾರೆ.